ಬೆಂಗಳೂರು: ಏನೇ ಆಗಲಿ ಇಂದೇ ವಿಶ್ವಾಸಮತ ಯಾಚನೆ ಮಾಡಿ ಅಂತ ಬಿಜೆಪಿ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದ್ರೆ ಮತ್ತೊಂದೆಡೆ ಇನ್ನೆರಡೇ ಎರಡು ದಿನ ನಮಗೆ ಟೈಂ ಕೊಡಿ ಅಂತ ದೋಸ್ತಿ ಪಟ್ಟು ಹಿಡಿದು ಕುಳಿತಿದೆ. ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ಯಾವ ನಿರ್ಧಾರಕ್ಕೆ ಬರ್ತಾರೆ ಅನ್ನೋದು ಮಾತ್ರ ಈವರೆಗೂ ಅಸ್ಪಷ್ಟವಾಗಿದೆ.
ಸದನದ ಆರಂಭದಿಂದಲೂ...
ಬೆಂಗಳೂರು: ವಿಶ್ವಾಸಮತ ಯಾಚನೆ ಇಂದೇ ಆಗಬೇಕು ಅಂತ ಬಿಜೆಪಿ ಪಟ್ಟು ಹಿಡಿದಿದೆ. ಆದ್ರೆ ಸಂಜೆಯಾಗುತ್ತಲೇ ವರಸೆ ಬದಲಿಸಿದ ಸಿಎಂ ಕುಮಾರಸ್ವಾಮಿ, ಸ್ಪೀಕರ್ ರನ್ನು ಭೇಟಿಯಾಗಿ ಇನ್ನೆರಡು ದಿನ ಸಮಯ ನೀಡಲು ಕೋರಿದ್ದಾರೆ.
ಶುಕ್ರವಾರದ ಕಲಾಪದಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಮಾಡೋದು ಫೈನಲ್ ಅಂತ ಹೇಳಿದ್ದ ಸಿಎಂ ಕುಮಾರಸ್ವಾಮಿ ಇದೀಗ ಯಾಕೋ ತಮ್ಮ ನಿರ್ಧಾರ ಬದಲಿಸಿದ್ದಾರೆ....
ಬೆಂಗಳೂರು: ವಿಶ್ವಾಸಮತ ಯಾಚನೆ ಇಂದೂ ನಡೆಯೋದಿಲ್ಲ ಅನ್ನೋ ಸಂಶಯದ ಕುರಿತು ಮಾಜಿ ಸಿಎಂ, ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ವಿಧಾನಸಭೆ ಕುರಿತಾದ 2 ಅರ್ಜಿಗಳು ಇತ್ಯರ್ಥವಾಗಬೇಕಿದ್ದು, ಅದರ ಮಧ್ಯೆ ವಿಶ್ವಾಸಮತ ಯಾಚನೆ ಮಾಡುವುದು ಅಸಂವಿಧಾನಿಕ ಅಂತ ಹೇಳಿದ್ದಾರೆ.ಅಲ್ಲದೆ ಅತೃಪ್ತರನ್ನು ಕೂಡಿಹಾಕಿದ್ದರಿಂದ ಅವರು ಅಲ್ಲೇ ಇದ್ದಾರೆ...
ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತಾಗಿ ತಮ್ಮನ್ನು ಭೇಟಿಯಾಗಿದ್ದ ಸಿಎಂ ನಿಯೋಗಕ್ಕೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಇನ್ನು ವಿಳಂಬ ಮಾಡೋದಕ್ಕೆ ಆಗೋದಿಲ್ಲ ಅಂತ ಖಡಕ್ ಉತ್ತರ ನೀಡಿದ್ದಾರೆ. ಹೀಗಾಗಿ ಇಂದು ವಿಶ್ವಾಸಮತ ಯಾಚನೆ ನಡೆಯಲಿದೆಯಾ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
ವಿಧಾನಸಭಾ ಕಲಾಪದ ಮಹತ್ವದ ದಿನವಾದ ಇಂದು, ಸಿಎಂ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ, ಎಚ್.ಡಿ ರೇವಣ್ಣ...
ಕರ್ನಾಟಕ
ಟಿವಿ : ಕುಮಾರಸ್ವಾಮಿ
ಸರ್ಕಾರ ವಿಶ್ವಾಸಮತದಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 13 ಶಾಸಕರು
ಮುಂಬೈ ಸೇರಿದ್ರೆ, ಡಾ ಸುಧಾಕರ್, ಆನಂದ್ ಸಿಂಗ್, ರೋಷನ್ ಬೇಗ್ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್
ಪಡೆಯೋದಿಲ್ಲಅಂತ ಖಡಕ್ ಆಗಿ ಹೇಳಿದ್ದಾರೆ. ಇತ್ತ ಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸ್ತೀವಿ ಅಂತ ರಾಜ್ಯಪಾಲರಿಗೆ
ಪತ್ರ ಕೂಡ ಕೊಟ್ಟಿದ್ದಾರೆ..
ದೋಸ್ತಿ ಬೆಂಬಲಿಸುವಂತೆ ಮಹೇಶ್ ಗೆ ಮಾಯಾವತಿ...
ದಾವಣಗೆರೆ: ರಾಜ್ಯದಲ್ಲಿ ಆಪರೇಷನ್ ಕಮಲ ಕುರಿತು ಕಾಂಗ್ರೆಸ್ ನ ಹಿರಿಯ ಶಾಸಕ ಕಿಡಿ ಕಾರಿದ್ದಾರೆ. ಬಿಜೆಪಿ ಆಮಿಷಕ್ಕೊಳಗಾಗಿ ಸಗಣಿ ತಿಂದು ಮುಂಬೈಗೆ ಹೋಗಿದ್ದಾರೆ ಅಂತ ಕೈ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಅತೃಪ್ತ ಶಾಸಕರು ಬಿಜೆಪಿ ಆಮಿಷಗಳಿಗೆ ಬಲಿಯಾಗಿದ್ದಾರಾ ಅನ್ನೋ ಪ್ರಶ್ನೆಗೆ...
ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರ ಪೈಕಿ ಮೂವರನ್ನು ಸೆಳೆಯಲು ದೋಸ್ತಿ ಭಾರೀ ಸ್ಕೆಚ್ ತಯಾರಿಸಿದೆ. ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಬೆಂಗಳೂರಿನ ಮೂವರು ಶಾಸಕರಿಗೆ ರಾಮಲಿಂಗಾ ರೆಡ್ಡಿ ಮೂಲಕ ಗಾಳ ಹಾಕಲು ಸಿಎಂ ಸ್ಕೆಚ್ ಹಾಕಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರೂ ಆಗಿರುವ ಬಿಟಿಎಂ ಲೇಔಟ್ ಶಾಸಕರ ರಾಮಲಿಂಗಾ ರೆಡ್ಡಿ ಜೊತೆ...
ಬೆಂಗಳೂರು: ವಿಶ್ವಾಸಮತ ಯಾಚನೆಗೆ ಸೋಮವಾರ ಮುಹೂರ್ತ ನಿಗದಿಯಾಗಿದ್ದು ಇದರಲ್ಲಿ ಬಿಜೆಪಿ ಗೆಲುವು ಸಾಧಿಸಿರೋದು ಖಚಿತ ಅಂತ ಬಿಜೆಪಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ತಂಗಿರುವ ಯಲಹಂಕ ಬಳಿಯ ರಮಡ ರೆಸಾರ್ಟ್ ಬಳಿ ಮಾತನಾಡಿದ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯಕ್, ವಿಧಾಸಭೆಯಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ನಮ್ಮದೇ, ಹೀಗಾಗಿ ಮತ್ತೆ...
ಬೆಂಗಳೂರು: ವಿಶ್ವಾಸಮತ ಯಾಚನೆ ಸೋಮವಾರಕ್ಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ ಮುಂದುವರಿದಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೈತ್ರಿ ವಿರುದ್ಧ ತಮ್ಮ ಆರೋಪ ಮುಂದುವರಿಸಿದ್ದು, ಸಂಖ್ಯಾಬಲವಿಲ್ಲದಿದ್ರೂ ಸಂಪುಟ ಸಭೆ ಹಾಗೂ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ ಅಂತ ಕಿಡಿ ಕಾರಿದ್ದಾರೆ.
ಬೆಂಗಳೂರಿನ ರಮಡಾ ರೆಸಾರ್ಟ್ ಬಳಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಇಲ್ಲಸಲ್ಲದ ಆರೋಪವನ್ನು...
ಬೆಂಗಳೂರು: ಇಂದಿನ ಸದನ ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯ್ತು. ಬಿಜೆಪಿ ವಿರುದ್ಧ ಮಾತನಾಡುತ್ತಿದ್ದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈಯ್ಯುತ್ತಾ ಹಾಸ್ಯಭರಿತವಾಗಿ ಬಿಜೆಪಿಯ ಕಾಲೆಳೆದ್ರು.
ವಿಶ್ವಾಸಮತ ಯಾಚನೆ ಅಷ್ಟು ಸುಲಭದ ಮಾತಲ್ಲ. ನಮ್ಮ ಸರ್ಕಾರದ ಕುರಿತು ಎಲ್ಲಾ ಸದಸ್ಯರು ತಮ್ಮ ತಮ್ಮ ಚರ್ಚೆ ಮಾಡಿ ಮುಗಿಸಿದ ಬಳಿಕ ಸಂವಿಧಾನ ಬದ್ಧವಾಗಿ ವಿಶ್ವಾಸಮತ ಯಾಚನೆ...