ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು, ಸಾಹಿತ್ಯ ಲೋಕಕ ಮತ್ತೊಂದು ಕೊಂಡಿ ಕಳಚಿದೆ.
ಬಹುಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಜ್ಞಾನ ಪೀಠಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್(81) ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ಲ್ಯಾವೆಲ್ಲೇ ರೋಡ್ ನಿವಾಸದಲ್ಲಿ ಇಂದು ಬೆಳಗ್ಗೆ 8.50ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ನಟನೆ, ರಂಗಭೂಮಿ, ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿದ್ದ...
ಬೆಂಗಳೂರು: ಜಿಂದಾಲ್ ಭೂಮಿ ನೀಡುವ ವಿಚಾರಕ್ಕೆ ಕುರಿತಂತೆ ಕೇಂದ್ರ ಸಚಿವ ಸದಾನಂದ ಗೌಡ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದಗೌಡ, ಜಿಂದಾಲ್ ಸ್ಟೀಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡೋದು ಮೈತ್ರಿ ಸರ್ಕಾರದ ಸಿಂಗಲ್ ಪಾಯಿಂಟ್ ಪ್ರೋಗ್ರಾಂ ಅಂತ ವಾಗ್ದಾಳಿ ನಡೆಸಿದ್ರು. ಅಲ್ಲದೆ ಸರ್ಕಾರದ ಖಜಾನೆ ಲೂಟಿ ಹೊಡೆದು ನಿಮ್ಮ...
ಬೆಂಗಳೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ನಾಳೆ ರೈತರು ಬೃಹತ್ ಸಂಖ್ಯೆಯಲ್ಲಿ ರಸ್ತೆಗಿಳಿಯಲಿದ್ದಾರೆ. ಅಲ್ಲದೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡೋ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
2013ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸುತ್ತಲೇ ಬಂದಿರೋ ರೈತರ ಆಕ್ರೋಶದ ಕಟ್ಟೆಯೊಡೆದಿದೆ. ಹೀಗಾಗಿ ಸರ್ಕಾರಕ್ಕೆ ಚುರುಕುಮುಟ್ಟಿಸೋ ಸಲುವಾಗಿ ನಾಳೆ ರಾಜ್ಯಾದ್ಯಂತ ರೈತರು...
ಯಾದಗಿರಿ: ಗ್ರಾಮ ವಾಸ್ತವ್ಯ ಮಾಡಿ ಸೈ ಎನಿಸಿಕೊಂಡಿದ್ದ ಕುಮಾರಸ್ವಾಮಿ ಇದೀಗ ತಮ್ಮ ಎರಡನೇ ಅವಧಿಯಲ್ಲೂ ಮುಂದುವರಿಸುತ್ತಿದ್ದು ಯಾದಗಿರಿ ಜಿಲ್ಲೆಯ ಗ್ರಾಮವೊಂದವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ಬಾರಿಯ 20-20 ಸರ್ಕಾರದಲ್ಲಿ ಗ್ರಾಮವಾಸ್ತವ್ಯ ನಡೆಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಸಿಎಂ ಇದೀಗ ಮತ್ತೆ ಗ್ರಾಮ ವಾಸ್ತವ್ಯ ಶುರುಮಾಡಲಿದ್ದಾರೆ. ಅನಾರೋಗ್ಯ ಹಾಗೂ ನಾನಾ ಕಾರಣಗಳಿಂದಾಗಿ ಇಷ್ಟುದಿನ ಗ್ರಾಮ ವಾಸ್ತವ್ಯದಿಂದ...
ಚಿಕ್ಕಮಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ್ದ ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ಇನ್ನು ಮುಂದೆ ಗುಹೆ ವಾಸ ಮಾಡಲಿದ್ದು, ತಮ್ಮ ಲಕ್ಷಾಂತರ ಭಕ್ತರಿಂದ ದೂರ ಉಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಮುಂದೆ ಗುಹೆಯಲ್ಲಿ ವಾಸ ಮಾಡೋ ನಿರ್ಧಾರ ತೆಗೆದುಕೊಂಡು ಧ್ಯಾನಕ್ಕೆ...
ತುಮಕೂರು: ಇಷ್ಟವಿಲ್ಲದ ಹುಡುಗನೊಂದಿಗೆ ಮದುವೆ ತಪ್ಪಿಸಿಕೊಳ್ಳಲು ವಧು ವಿಷ ಕುಡಿದಂತೆ ನಾಟಕವಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಮಳೆಕೋಟೆ ಗ್ರಾಮದ ಯುವತಿಗೆ ಮಂಜುನಾಥ್ ಎಂಬಾತನೊಂದಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಆದ್ರೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಯುವತಿಗೆ ಈ ಮದುವೆ ಇಷ್ಟವಿರಲಿಲ್ಲ. ಮನೆಯವರನ್ನು ಒಪ್ಪಿಸಲಾಗದೆ ಇಷ್ಟು ದಿನ ಸುಮ್ಮನಿದ್ದ ಹುಡುಗಿ ನಿನ್ನೆ ರಾತ್ರಿ ಮನೆಯಿಂದ...
ಬೆಂಗಳೂರು: ನಗರದಲ್ಲಿ ಎಟಿಎಂ ಲೂಟಿಕೋರರು ಹೆಚ್ಚಾಗ್ತಿದ್ದು ಇದೀಗ ನಗರದಲ್ಲಿ ವಾಸವಿರೋ ಕೆಲ ವಿದೇಶಿ ಖದೀಮರು ಈ ಕುಕೃತ್ಯವೆಸಗುತ್ತಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರಿಗೆ ತಲೆನೋವಾಗಿ ಕಾಡ್ತಿದ್ದಾರೆ.
ಎಟಿಎಂಗೆ ಬರುವ ಗ್ರಾಹಕರನ್ನು ಟಾರ್ಗೆಟ್ ಮಾಡೋ ಈ ವಿದೇಶಿ ಖದೀಮರು ಪಾಸ್ ವರ್ಡ್ ನೋಡಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಹಣ ಡ್ರಾ ಮಾಡೋಕೆ ಬರುವವರ ಎಟಿಎಂ ಪಾಸ್...
ಚಿಕ್ಕಮಗಳೂರು: ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ಕಣ್ಣೀರು ಹಾಕಿ ಕ್ಷಮೆ ಕೋರಿದ್ದಾನೆ.
ಗುರೂಜಿ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿ ನಾನು ತಿಳುವಳಿಕೆ ಇಲ್ಲದೆ ತಪ್ಪು ಮಾಡಿದ್ದೇನೆ. ಗುರೂಜಿಯವರ ಹೇಳಿಕೆಯ ಅರ್ಧಂಬರ್ಧ ವಿಡಿಯೋ ನೋಡಿದ್ದೇ ಇದಕ್ಕೆ ಕಾರಣವಾಗಿದೆ. ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ, ಗುರೂಜಿಯವರು ನಾಗಾರಾಧನೆ ಬಗ್ಗೆ ತಪ್ಪಾಗಿ...
ಮೈಸೂರು: ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಲಾಗಿದೆ. ಇಂದು ವಿಮಾನ ಸಂಚಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನ ಸಂಚಾರ ಯೋಜನೆ ಉಡಾನ್ 3ರ ಯೋಜನೆಯಡಿಯಲ್ಲಿ ಮೈಸೂರಿನಿಂದ ಫ್ಲೈಟ್ ಸೇಲೆ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 11.145ಕ್ಕೆ ಮೈಸೂರಿಗೆ ಆಗಮಿಸೋ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯ...
ಬಳ್ಳಾರಿ: ಗಣಿ ಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಮ್ಮ ಮಾವನ ಅನಾರೋಗ್ಯ ಕಾರಣ ಕೊಟ್ಟು ಬಳ್ಳಾರಿಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ರೆಡ್ಡಿಗೆ ಇದೀಗ ಬಳ್ಳಾರಿ ಪ್ರವೇಶಾವಕಾಶ ಸಿಕ್ಕಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ರೂ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು...