ಚಾಣಕ್ಯ ನೀತಿಯ ಪ್ರಕಾರ, ನಾವು ಹಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಈ ಹಿಂದೆ ನಾವು ಚಾಣಕ್ಯ ನೀತಿಯ ಬಗ್ಗೆ ಹಲವು ವಿಚಾರಗಳನ್ನು ನಿಮಗೆ ಹೇಳಿದ್ದೆವು. ಅದೇ ರೀತಿ ಇಂದು ಹಳೆಯ ಸ್ನೇಹಿತರು ಸಿಕ್ಕಾಗ ನಾವು ಯಾವ ವಿಷಯವನ್ನು ಗಮನದಲ್ಲಿಡಬೇಕು..? ಹೇಗೆ ನಡೆದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಚಾಣಕ್ಯರ ಪ್ರಕಾರ ಸುಮಾರು ವರ್ಷದ ನಂತರ ಸಿಗುವ ಕೆಲ ಗೆಳೆಯರು, ಎರಡು ಕಾರಣಕ್ಕೆ ಭೇಟಿಯಾಗಲು ಬಯಸುತ್ತಾರೆ. ಒಂದು ತಾವು ನಿಮಗಿಂತ ಹೆಚ್ಚು ಯಶಸ್ವಿಯಾಗಿದ್ದೇನೆ ಎಂದು ತೋರಿಸಲು. ಇನ್ನೊಂದು ಕಾರಣ, ದುಡ್ಡಿನ ಅಥವಾ ಯಾವುದಾದರೂ ಅವಶ್ಯಕತೆ ಇದ್ದಾಗ ಮಾತ್ರ ಗೆಳೆಯ ಭೇಟಿಯಾಗುತ್ತಾನೆಂದು ಚಾಣಕ್ಯರು ಹೇಳುತ್ತಾರೆ. ಆದ್ರೆ ಎಲ್ಲರೂ ಆ ರೀತಿ ಇರುವುದಿಲ್ಲ. ಕೆಲವರು ಪ್ರೀತಿಯಿಂದ ಭೇಟಿಯಾಗಲು ಬರುತ್ತಾರೆ.
ಆದ್ರೆ ದೊಡ್ಡಸ್ತಿಕೆ ತೋರಿಸುವ ಮತ್ತು ಸಾಲ ಕೇಳಲು ಬರುವ ಗೆಳೆಯರ ಬಗ್ಗೆ ಮೊದಲೇ ಯೋಚಿಸುವುದು ಉತ್ತಮ ಎನ್ನುತ್ತಾರೆ ಚಾಣಕ್ಯರು. ನಿಮ್ಮ ಬಳಿ ಸಾಲ ನೀಡಲು ಹಣವಿದೆ. ನೀವು ಅವನಿಗೆ ಸಹಾಯ ಮಾಡಲು ಬಯಸುತ್ತೀರಿ ಎಂದಾದಲ್ಲಿ, ನೀವು ಗೆಳೆಯನನ್ನು ಭೇಟಿ ಮಾಡಬಹುದು. ಇನ್ನು ಅವನೇನಾದ್ರೂ ತನ್ನ ದೊಡ್ಡಸ್ತಿಕೆ ತೋರಿಸಲು ಬಂದಿದ್ದೇ ಆದಲ್ಲಿ, ಅವನನ್ನು ಮಾತಿನಿಂದಲೇ ಎದುರಿಸುವ ತಾಕತ್ತು ನಿಮ್ಮಲ್ಲಿದೆ ಎನ್ನುವ ವಿಶ್ವಾಸ ನಿಮಗಿದ್ದಲ್ಲಿ ಇನ್ನೂ ಉತ್ತಮ.
ನಿಮ್ಮ ಬಳಿ ದುಡ್ಡಿಲ್ಲವೆಂದಲ್ಲಿ, ನೀವು ಬುದ್ಧಿವಂತಿಕೆಯಿಂದ ರಿಪ್ಲೈ ಕೊಡಬೇಕಾಗುತ್ತದೆ. ನಿಮ್ಮ ಎದುರು ದೊಡ್ಡಸ್ತಿಕೆ ತೋರಿಸುವವರು, ನಾನು ಎರಡು ಕೋಟಿ ರೂಪಾಯಿ ಮನೆ ಖರೀದಿಸಿದ್ದೇನೆ ಎಂದು ಹೇಳಿದಾಗ, ನೀವು ದುಡ್ಡು ಸುಮ್ಮನೆ ಖರ್ಚು ಮಾಡಬಾರದು. ಅದನ್ನು ಉದ್ಯಮಕ್ಕೆ ಬಳಸಬೇಕು. ಇಲ್ಲಾ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು ಎಂದು ನೀತಿ ಪಾಠ ಹೇಳಬೇಕು. ಅಲ್ಲದೇ ನೀನು ಏನಾದರೂ ಖರೀದಿಸುವ ಮುನ್ನ ಅಥವಾ ದುಡ್ಡು ಖರ್ಚು ಮಾಡುವ ಮುನ್ನ ನಿನ್ನ ಚಾರ್ಟೆಡ್ ಅಕೌಂಟೆಂಟ್ ಬಳಿ ಏನನ್ನೂ ಕೇಳಲ್ವಾ ಅಂತಾ ಕೇಳಬೇಕು.
ಆಗ ಎದುರಿನವರಿಗೆ, ಓ ಇವನು ಇಷ್ಟೆಲ್ಲಾ ಬುದ್ಧಿವಂತನಾ..? ಹೀಗೆ ವಿಚಾರಿಸಿ, ದುಡ್ಡು ಖರ್ಚು ಮಾಡ್ತಾನೆ ಅಂದ್ರೆ ಒಳ್ಳೆ ಸಂಪಾದನೆನೇ ಇರ್ಬೇಕು ಅಂತಾ ತಿಳಿದು ಸುಮ್ಮನಿರ್ತಾರೆ. ಇನ್ನು ನಿಮ್ಮ ಬಳಿ ಸಾಲ ಕೇಳಲೆಂದೇ ಗೆಳೆಯ ಬಂದ್ರೆ, ಮೊದಲು ಹೇಗಿದೆ ಜೀವನ ಅಂತಾ ಕೇಳುವ ಮೂಲಕ ಮಾತು ಶುರು ಮಾಡ್ತಾನೆ. ಆಗ ನೀವು ಹಾ ಚೆನ್ನಾಗಿದ್ದೇನೆ. ಊಟ ಬಟ್ಟೆಗಾಗುವಷ್ಟು ಸ್ಯಾಲರಿ ಬರುತ್ತದೆ. ಜೀವನ ಅಲ್ಲಿಂದಲ್ಲಿದೆ ಇದೆ ಎಂದು ಹೇಳಬೇಕು. ಆಗ ಓಹ್ ಇವನೂ ಅಷ್ಟು ಅನುಕೂಲಸ್ಥನಲ್ಲ, ಇಲ್ಲಿ ಸಾಲ ಸಿಗುವುದು ಕಷ್ಟವೆಂದು ಅರಿತು ಹೋಗುತ್ತಾನೆ ಅನ್ನುತ್ತಾರೆ ಚಾಣಕ್ಯ.