Spiritual: ಎಷ್ಟೋ ಹೆಣ್ಣು ಮಕ್ಕಳು ಚೆನ್ನಾಗಿ ಸೆಟಲ್ ಆಗಿರುವವನ್ನು ನೋಡಿ ಮದುವೆಯಾಗಿ, ತಾವು ಆರಾಮಾಗಿರಬೇಕು ಅಂತಾ ಅಂದುಕೊಳ್ಳುತ್ತಾರೆ. ಕೆಲವರು ಅಂದುಕೊಂಡಂತೆ ಚೆನ್ನಾಗಿದ್ದರೆ, ಇನ್ನು ಕೆಲವರು ಮದುವೆಯಾದ ಬಳಿಕ, ಹೆಚ್ಚೆಚ್ಚು ಖರ್ಚು ವೆಚ್ಚ ಮಾಡಿ, ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಚಾಣಕ್ಯರು ಪತ್ನಿ ಯಾವ ರೀತಿ ಇದ್ದರೆ, ಪತಿ ಶ್ರೀಮಂತನಾಗುತ್ತಾನೆ ಅಥವಾ ಶ್ರೀಮಂತನಾಗಿಯೇ ಇರುತ್ತಾನೆ ಅಂತಾ ಹೇಳಿದ್ದಾರೆ.
ಮೊದಲನೇಯದಾಗಿ ಕಡಿಮೆ ಖರ್ಚು ಮಾಡುವ ಗುಣ: ಎಷ್ಟೋ ಹೆಣ್ಣುಮಕ್ಕಳು, ವಿವಾಹದ ಬಳಿಕ ಪತಿಯ ಬಳಿ ಅದು ಬೇಕು ಇದು ಬೇಕು ಎಂದು, ಪದೇ ಪದೇ ಹಣ ಖರ್ಚು ಮಾಡುತ್ತಿರುತ್ತಾರೆ. ಕೆಲವೊಮ್ಮೆ ಅನವಶ್ಯಕ ವಸ್ತುಗಳನ್ನೇ ಖರೀದಿಸಿ, ಬಳಸದೇ ಹಾಳು ಮಾಡುತ್ತಾರೆ. ಅಂಥ ಸಂದರ್ಭದಲ್ಲಿ ಪತಿಗೆ ಆದಾಯಕ್ಕಿಂತ ಹೆಚ್ಚು ಖರ್ಚೇ ಮಾಡಬೇಕಾಗುತ್ತದೆ. ಇದರಿಂದ ನಷ್ಟವಾಗುವುದೇ ಪತ್ನಿಗೆ. ಏಕೆಂದರೆ, ಪತಿ ಈ ರೀತಿ ಅನವಶ್ಯಕ ಖರ್ಚು ಮಾಡಿದರೆ, ಮುಂದೊಂದು ದಿನ ಅವಶ್ಯಕವಾದ ವಸ್ತು ಖರೀದಿಸಲು ಕೂಡ ದುಡ್ಡಿರುವುದಿಲ್ಲ. ಹಾಗಾಗಿ ಹೆಣ್ಣು ಮಕ್ಕಳು ಅವಶ್ಯಕವಾದ ವಸ್ತುಗಳನ್ನಷ್ಟೇ ಖರೀದಿಸಬೇಕು ಅಂತಾರೆ ಚಾಣಕ್ಯರು.
ಎರಡನೇಯದಾಗಿ ಕೂಡಿಡುವ ಗುಣ: ಪತಿ-ಪತ್ನಿ ಇಬ್ಬರೂ ದುಡಿಯುವವರಾಗಿದ್ದರೆ, ಪತ್ನಿಗೆ ಪತಿಯ ಬಳಿ ಹಣ ಕೇಳುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ, ಅವಳು ತನ್ನ ಖರ್ಚನ್ನು ತಾನೇ ನೋಡಿಕೊಳ್ಳುವಷ್ಟು ಸಬಲಳಾಗಿರುತ್ತಾಳೆ. ಹಾಗಂತ, ಬೇಕಾದ ಹಾಗೆ ದುಡ್ಡು ಖರ್ಚು ಮಾಡುವುದು ತಪ್ಪು. ಎಷ್ಟು ಖರ್ಚು ಮಾಡಿದರು, ತಿಂಗಳಿಗೆ ಇಂತಿಷ್ಟು ಎಂದು ಉಳಿತಾಯ ಮಾಡಬೇಕು. ಇದರಿಂದ ಮುಂದೊಂದು ದಿನ ಕಷ್ಟ ಬಂದಾಗ, ಆ ಹಣ ಉಪಯೋಗಕ್ಕೆ ಬರುತ್ತದೆ. ಅಥವಾ ಆ ಹಣವೇ, ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಮೂರನೇಯದಾಗಿ ಪತಿಯ ಉತ್ತಮ ಕೆಲಸಗಳಿಗಂ ಬೆಂಬಲಿಸುವುದು: ಈ ಬಗ್ಗೆ ಉದಾಹರಣೆ ಕೊಡಬೇಕು ಎಂದರೆ, ಪತಿಗೆ ಕಂಡ ಕಂಡನ್ನು ಖರೀದಿಸುವ, ಅಥವಾ ಹೆಚ್ಚು ಖರ್ಚು ಮಾಡುವ ಶೋಕಿ ಇದ್ದರೆ, ಅಂಥ ಕೆಲಸಗಳನ್ನು ಪತ್ನಿ ಎಂದಿಗೂ ಬೆಂಬಲಿಸಬಾರದು. ಶ್ರೀಮಂತಿಕೆ ಇದ್ದರೂ ಕೂಡ, ಬೇಕಾಬಿಟ್ಟಿ ಖರ್ಚಿಗೆ ಲಗಾಮು ಹಾಕುವುದು ಉತ್ತಮ. ಆದರೆ ನಿಮ್ಮ ಮಧ್ಯಮ ಅಥವಾಾ ಬಡ ಕುಟುಂಬವಾದಲ್ಲಿ, ಪತಿಯ ಇಂಥ ಶೋಕಿಗಳನ್ನು ನೀವು ಬೆಂಬಲಿಸಬಾರದು.
ಆದರೆ ಪತಿ ಚೆನ್ನಾಗಿ, ಪ್ರಾಮಾಣಿಕತೆಯಿಂದ ದುಡಿದು, ಹಣ ಕೂಡಿಡುತ್ತಾನೆ. ಅಂಥವರಿಗೆ ನಿಮ್ಮ ಬೆಂಬಲ ಬೇಕೆಂದಾಗ ಮಾತ್ರ, ಅಂಥ ಕೆಲಸವನ್ನು ಬೆಂಬಲಿಸಬೇಕು. ಉದಾಹರಣೆಗೆ ಪತಿ ರಾತ್ರಿ, ಹಗಲೆನ್ನದೇ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾನೆ. ಪತ್ನಿ- ಮಕ್ಕಳ ಭವಿಷ್ಯಕ್ಕಾಗಿ ಕಷ್ಟ ಪಡುತ್ತಿದ್ದಾನೆ ಎಂದರೆ, ಪತ್ನಿಯಾದವಳು ಅವನ ಕೆಲಸಕ್ಕೆ ಬೆಂಬಲಿಸಬೇಕು. ಅಲ್ಲದೇ, ಆತನ ಆರೋಗ್ಯವನ್ನು ಉತ್ತಮವಾಗಿ ಇರಿಸುವಲ್ಲಿ ಗಮನ ಕೊಡಬೇಕು.
ನಿಮ್ಮ ಪತ್ನಿಯಲ್ಲಿ ಇಂಥ ಗುಣವಿದ್ದರೆ ನೀವೇ ಅದೃಷ್ಟವಂತರು ಅಂತಾರೆ ಚಾಣಕ್ಯರು..