ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸ್ವಪ್ನಾ ಕೃಷ್ಣ, ತಮ್ಮ ಬಾಲ್ಯ ಹೇಗಿತ್ತು, ತಾವು ನಿರ್ದೇಶಕಿಯಾಗಿದ್ದು ಹೇಗೆ..? ಇದಕ್ಕೆ ಕೃಷ್ಣಾ ಅವರ ಸಪೋರ್ಟ್ ಹೇಗಿತ್ತು, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದನ್ನ ನೀವು ನೋಡಿದ್ದೀರಿ. ಇವತ್ತು ನಾವು ಸ್ವಪ್ನ ಕೃಷ್ಣ ಅವರು,. ಸ್ಯಾಂಡಲ್‌ವುಡ್‌ನ ಹಲವು ನಟರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಅವರ ಬಗ್ಗೆ ಏನಂದ್ರು ಅಂತಾ ತಿಳಿಯೋಣ ಬನ್ನಿ..
ನಟ ಶಿವಣ್ಣ ಅವರ ಬಗ್ಗೆ ಕೇಳಿದಾಗ, ಸ್ವಪ್ನ ಕೃಷ್ಣ, ಅವರು ಯಂಗ್ ಆ್ಯಂಡ್ ಎನರ್ಜೆಟಿಕ್ ಅಂತಾ ಹೇಳಿದ್ರು. ಅಲ್ಲದೇ ನಾನು ಅವ್ರನ್ನ ಪರ್ಸನಲ್ ಆಗಿ ಮೀಟ್ ಮಾಡಿಲ್ಲಾ. ಅವರು ಅಕ್ಕ ಪಕ್ಕದಲ್ಲಿದ್ರೇನೇ ಒಂಥರಾ ವೈಬ್ಸ್ ಇದ್ದ ಹಾಗೆ. ಭವಿಷ್ಯದಲ್ಲಿ ಅವಕಾಶ ಸಿಕ್ರೆ, ಅವರ ಸಿನಿಮಾಗೆ ಖಂಡಿತ ನಿರ್ದೇಶನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅಪ್ಪು ಬಗ್ಗೆ ಮಾತನಾಡಿದ ಸ್ವಪ್ನ, ಅವ್ರು ಸಿಂಪಲ್, ಗಾಡ್. ದೇವ್ರು ಅಂತಾ ಹೇಳಿದ ಮೇಲೆ ಅವ್ರಿಗೆ ಎಲ್ಲಾ ಥರದ ಕ್ವಾಲಿಟೀಸ್ ಇದೆ ಎಂದರ್ಥ ಅಂತಾ ಹೇಳಿದ್ರು. ಇನ್ನು ಸುದೀಪ್ ಬಗ್ಗೆ ಕೇಳಿದಾಗ, ಅವರು ವೆರಿ ಎನ್‌ಕರೇಜಿಂಗ್ ಮ್ಯಾನ್, ಎಲ್ಲರಿಗೂ ಗೌರವ ನೀಡ್ತಾರೆ ಎಂದು ಹೇಳಿದರು. ಇನ್ನು ದರ್ಶನ್ ಬಗ್ಗೆ ಕೇಳಿದಾಗ, ಅವರ ಹೈಟ್ ಸೂಪರ್. ಟೆಲಿವಿಶನ್‌ನಲ್ಲಿ ಒಮ್ಮೆ ಭೇಟಿಯಾಗಿದ್ದೆ, ಅವರು ನಮ್ಮ ಮದುವೆಗೂ ಬಂದಿದ್ರು. ಹೆಚ್ಚಿನ ಒಡನಾಟ ಇಲ್ಲಾ. ಆದ್ರೆ ಮುಂದೊಂದು ದಿನ ಅವಕಾಶ ಸಿಕ್ರೆ ಅವರ ಜೊತೆಗೂ ಒಂದು ಮೂವಿ ಮಾಡ್ತೇನೆ ಅಂದ್ರು ಸ್ವಪ್ನಾ.
ಇನ್ನು ಯಶ್ ಬಗ್ಗೆ ಕೇಳಿದಾಗ, ಅವರಿಗೆ ಸಹಾಯ ಮಾಡುವ ಸ್ವಭಾವವಿದೆ. ಅವರನ್ನ, ಅವರು ಮಾಡಿದ ಸಹಾಯವನ್ನ ನಾನು ಮರಿಯಲು ಸಾಧ್ಯವಿಲ್ಲಾ. ದೇವರು ಅವರಿಗೆ ಒಳ್ಳೆಯದು ಮಾಡ್ಲಿ. ಅವರು ಇನ್ನೂ ಎತ್ತರಕ್ಕೆ ಬೆಳಿಯಲಿ ಅಂತಾ ಸ್ವಪ್ನಾ ಹೇಳ್ತಾರೆ. ಇನ್ನು ಉಪ್ಪಿ ಬಗ್ಗೆ ಕೇಳಿದ್ರೆ, ಅ;ರು ಮಾತು ಚೆಂದ. ಅವರ ಸಿನಿಮಾಗಳನ್ನ ನೋಡಿದ್ದೀನಿ. ಪಾರ್ಟಿಯಲ್ಲಿ ಅವ್ರನ್ನ ಮೀಟ್ ಮಾಡಿದ್ದೀನಿ ಅಂತಾ ಹೇಳಿದ್ರು.
ಇನ್ನು ಧೃವ ಸರ್ಜಾ ಅವರ ಬಾಡಿ ಸೂಪರ್ ಎಂದ ಸ್ವಪ್ನಾ, ಶ್ರೀ ಮುರುಳಿ ಅರ ಉಗ್ರಂ ಸಿನಿಮಾ ಸೂಪರ್ ಅಂತಾ ಹೇಳಿದ್ರು,. ಇನ್ನು ನಿಮ್ಮ ನೆಚ್ಚಿನ ನಾಯಕಿ ಯಾರು ಅಂತಾ ಕೇಳಿದಾಗ, ನನಗೆ ಜೂಲಿ ಲಕ್ಷ್ಮೀ ಮೇಡಂ ಅಂದ್ರೆ ಇಷ್ಟ. ಅವರ ಸಿನಿಮಾವನ್ನ ನಾನು ನಿರ್ದೇಶನ ಮಾಡುವ ಆಸೆ ಇದೆ ಅಂತಾ ಹೇಳಿದ್ರು.