Health Tips: ನಾವು ನಿಮಗೆ ಕ್ಯಾನ್ಸರ್ ಬಗ್ಗೆ ಹಲವು ಮಾಹಿತಿಗಳನ್ನ ನೀಡಿದ್ದೇವೆ. ಕ್ಯಾನ್ಸರ್ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ಕೂಡ ಓರಲ್ ಕ್ಯಾನ್ಸರ್ ಅಂದ್ರೆ ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಾಯಲ್ಲಿ ಬಿಳಿ ಮಚ್ಛೆಗಳಿದ್ರೆ, ಅದು ಕ್ಯಾನ್ಸರ್ ಲಕ್ಷಣವೆಂದು ವೈದ್ಯರು ಹೇಳುತ್ತಾರೆ. ತಂಬಾಕು, ಧೂಮಪಾನ ಸೇರಿ ಕೆಟ್ಟ ಚಟಗಳು ಇದ್ದಾಗ, ಈ ಕ್ಯಾನ್ಸರ್ ಬರುತ್ತದೆ. ಇನ್ನು ಥೈರಾಯ್ಡ್ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್‌ಗಳು ಹೆಚ್ಚಾಗಿ ಬರುತ್ತಿದೆ. ಇನ್ನು ಓರಲ್ ಕ್ಯಾನ್ಸರ್ ಬಂದಾಗ, ಏನೇನು ಲಕ್ಷಣಗಳು ಕಾಣಿಸುತ್ತದೆ ಎಂದರೆ, ಬಾಯಿಯಲ್ಲಿ ಬಿಳಿ ಹುಣ್ಣುಗಳಾಗುತ್ತದೆ. ಅದನ್ನು ನಿರ್ಲಕ್ಷ್ಯ ಮಾಡದೇ, ವೈದ್ಯರಲ್ಲಿ ಪರೀಕ್ಷಿಸಿಕೊಂಡರೆ, ಚಿಕ್ಕ ಚಿಕಿತ್ಸೆ ಮೂಲಕವೇ, ಕ್ಯಾನ್ಸರ್ ಹರಡದಂತೆ ತಡೆಯಬಹುದು.
ಇಲ್ಲವಾದಲ್ಲಿ ಬಾಯಲ್ಲಿ ಬಂದ ಹುಣ್ಣು, ಗಂಟಲಿಗೆ ಹರಡಿ, ಗಂಟಲಲ್ಲಿ ದೊಡ್ಡ ದೊಡ್ಡ ಕ್ಯಾನ್ಸರ್ ಗಡ್ಡೆ ಬೆಳೆಯಲು ಶುರುವಾಗುತ್ತದೆ. ಬಳಿಕ ಇದರಿಂದಲೇ ಪ್ರಾಣಾಪಾಯವಾಗುತ್ತದೆ. ಓರಲ್ ಕ್ಯಾನ್ಸರ್ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ರುಚಿ ರುಚಿಯಾದ 60ಕ್ಕೂ ಹೆಚ್ಚು ಬಗೆಯ ದೋಸೆ ತಿನ್ನಬೇಕಂದ್ರೆ, ನೀವು ಇಲ್ಲಿಗೆ ಬರಲೇಬೇಕು..
ಶ್ರೀ ಹಾಸನಾಂಬ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ: ಸಚಿವ ರಾಜಣ್ಣ ಭೇಟಿ, ಪರಿಶೀಲನೆ
‘ನನ್ನ ಬಾಯಲ್ಲಿ ಹೇಳಿದ್ರೆ ಮಾತ್ರ ಸತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೆ ಸುಳ್ಳಾ..?’