Sunday, October 27, 2024

Latest Posts

ಇನ್ನೂ ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟ್ ಇದೆಯಾ..? ಹಾಗಾದ್ರೆ ಈ ಸ್ಟೋರಿ ನೋಡಿ..

- Advertisement -

ನವದೆಹಲಿ: 2 ವರ್ಷಗಳಿಂದಲೂ 2 ಸಾವಿರದ ನೋಟುಗಳು ಬ್ಯಾನ್ ಆಗುತ್ತದೆ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಎಲ್ಲ 2ಸಾವಿರದ ನೋಟುಗಳನ್ನ ಆರ್‌ಬಿಐ ಹಿಂಪಡೆಯಲು ನಿರ್ಧರಿಸಿದೆ. ನಿಮ್ಮ ಬಳಿ ಇನ್ನೂ 2 ಸಾವಿರದ ನೋಟ್ ಇದ್ದಲ್ಲಿ, ಅದನ್ನು ಸೆಪ್ಟೆಂಬರ್ 30ರೊಳಗಡೆ ಬ್ಯಾಂಕ್‌ಗೆ ಹಿಂದಿರುಗಿಸಿ.

ಮೇ 23ರಿಂದ ಬ್ಯಾಂಕ್‌ನಲ್ಲಿ ನೋಟ್ ವಿನಿಮಯಕ್ಕೆ ಅವಕಾಶವಿದೆ. ಇಲ್ಲಿಂದ ಸೆಪ್ಟೆಂಬರ್‌ 30ರವರೆಗೆ ನೋಟ್ ವಿನಿಮಯ ಮಾಡಬಹುದು. 2017ರೊಳಗೆ 2 ಸಾವಿರ ರೂಪಾಯಿ ನೋಟ್ ಪ್ರಿಂಟ್ ಮಾಡಿ, ಬ್ಯಂಕ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಸಮಯ 4ರಿಂದ 5 ವರ್ಷವಷ್ಟೇ ಇತ್ತು. ಹಾಗಾಗಿ ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ.

ಈ ನೋಟನ್ನು ಹಿಂಪಡೆಯುವುದಕ್ಕೆ ಇನ್ನೂ ಹಲವು ಕಾರಣಗಳಿದೆ. 2 ಸಾವಿರ ನೋಟನ್ನ ಹೆಚ್ಚು ಜನ ಬಳಸುತ್ತಿಲ್ಲ. ಎಲ್ಲರೂ 500 ರೂಪಾಯಿ ನೋಟನ್ನೇ ಹೆಚ್ಚು ಬಳಸುತ್ತಿದ್ದಾರೆ. 2 ವರ್ಷದ ಹಿಂದೆಯೇ, ಈ ನೋಟ್ ಬ್ಯಾನ್ ಆಗುತ್ತದೆ ಎಂದು ಹೇಳಿದ ಕಾರಣಕ್ಕಾಗಿಯೇ, ಜನ 2 ಸಾವಿರ ರೂಪಾಯಿಯನ್ನ ಹೆಚ್ಚು ಬಳಸುತ್ತಿಲ್ಲ. ಈ ಕಾರಣಕ್ಕೆ ಪಿಂಕ್ ನೋಟ್ ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದೆ.

ನಿಮ್ಮ ಬಳಿ 2 ಸಾವಿರ ರೂಪಾಯಿಯ ನೋಟ್ ಹೆಚ್ಚಿದ್ದರೆ, ಒಮ್ಮೆಗೆ 20 ಸಾವಿರ ರೂಪಾಯಿ ಅಷ್ಟೇ ಚೇಂಜ್ ಮಾಡಬಹುದು. ಅಂದರೆ, 2 ಸಾವಿರ ರೂಪಾಯಿಯ 10 ನೋಟುಗಳನ್ನು ಅಷ್ಟೇ ನೀವು ಎಕ್‌ಚೆಂಜ್ ಮಾಡಬಹುದು. ಅಥವಾ, ಆ ನೋಟುಗಳನ್ನು ಡೆಪಾಸಿಟ್ ಮಾಡಲು ಕೂಡ ಅವಕಾಶವಿದೆ. ಆದರೆ ಇದಕ್ಕೆ ಲಿಮಿಟ್ ಇಲ್ಲ. 2 ಸಾವಿರ ರೂಪಾಯಿಯ ಎಷ್ಟೇ ನೋಟಿದ್ದರೂ, ನೀವು ಅದನ್ನು ಡಿಪಾಸಿಟ್ ಮಾಡಬಹುದು.

ರಾಮನಗರದಲ್ಲಿ ಜೆಡಿಎಸ್ ಕೃತಜ್ಞತಾ ಸಭೆ: ಸೋತಿದ್ದಕ್ಕೆ ನಿಖಿಲ್ ಹೇಳಿದ್ದೇನು..?

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂದೆ ತನ್ನ ಮಗುವನ್ನ ಎಸೆದ ತಂದೆ, ಯಾಕೆ ಗೊತ್ತಾ..?

‘ನಾಳೆ ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ಎಲ್ಲರೂ ಬನ್ನಿ’

- Advertisement -

Latest Posts

Don't Miss