Health Tips: ಸ್ತನ ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಸ್ತನ ಕ್ಯಾನ್ಸರ್ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಈ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ, ಇಂದು ಹಲವರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ತಿಳುವಳಿಕೆ ಬಗ್ಗೆ ಹೇಳಲಿದ್ದೇವೆ. ಅದೇನೆಂದರೆ, ಸ್ತನ ಕ್ಯಾನ್ಸರ್ ಬಂದಾಗ, ಹಲವರು ಅದನ್ನು ಗ್ಯಾಸ್ಟ್ರಿಕ್ ಎಂದುಕೊಳ್ಳುತ್ತಾರೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರಾದ ಶಿವಕುಮಾರ್ ಉಪ್ಪಳ ಅವರು ಸ್ತನ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದು, ಸ್ತನ ಕ್ಯಾನ್ಸರನ್ನು ಗ್ಯಾಸ್ಚ್ರಿಕ್ ಎಂದುಕೊಳ್ಳಬೇಡಿ ಎಂದಿದ್ದಾರೆ. ಎದೆ ನೋವಿಗೆ ಸ್ತನದ ನೋವಿಗೆ ವ್ಯತ್ಯಾಸ ಇರುತ್ತದೆ. ಗ್ಯಾಸ್ಟ್ರಿಕ್ ಇದ್ದಾಗ, ಎದೆಯ ಕೆಳ ಭಾಗದಲ್ಲಿ ನೋವಾಗುತ್ತದೆ. ಹೊಟ್ಟೆ ನೋವು, ಎದೆ ಉರಿ, ವಾಂತಿ ಬರುವ ಹಾಗಾಗುತ್ತದೆ. ಇದು ಗ್ಯಾಸ್ಟ್ರಿಕ್ ಲಕ್ಷಣಗಳು.
ಆದರೆ ಸ್ತನ ಕ್ಯಾನ್ಸರ್ ಆದಾಗ, ಸ್ತನದಲ್ಲಿ ನೋವಾಗುತ್ತದೆ. ಗಡ್ಡೆಯಾಗಿರುವ ರೀತಿ ಫೀಲ್ ಆಗುತ್ತದೆ. ಆ ನೋವು ಕೈಗೂ ಪಸರಿಸುತ್ತದೆ. ಇಂಥ ಲಕ್ಷಣ ಕಂಡುಬಂದಾಗ, ನೀವು ಆದಷ್ಟು ಬೇಗ, ವೈದ್ಯರ ಬಳಿ ಹೋಗಿ, ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಸ್ತನ ಕ್ಯಾನ್ಸರ್ ಮತ್ತು ಗ್ಯಾಸ್ಟ್ರಿಕ್ ಮಧ್ಯೆ ಇರುವ ವ್ಯತ್ಯಾಸವೇನು ಅನ್ನೋ ಬಗ್ಗೆ ವೈದ್ಯರು ಹೇಗೆ ವಿವರಿಸಿದ್ದಾರೆ ಅಂತಾ ತಿಳಿಯೋದಕ್ಕೆ ಈ ವೀಡಿಯೋ ನೋಡಿ..