Health Tips: ಗರ್ಭಿಣಿಯಾಗುವುದು, ಡಿಲೆವರಿ, ಬಾಣಂತನ ಇವೆಲ್ಲ ಹೆಣ್ಣಿನ ಬಾಳಿನ ಒಂದು ಅತ್ಯುತ್ತಮ ಮತ್ತು ಸೂಕ್ಷ್ಮ ಸಂದರ್ಭ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸರಿಯಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಜೀವನ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಿಲೆವರಿ, ಬಾಣಂತನದ ವೇಳೆ ಸರಿಯಾಗಿ ಆರೋಗ್ಯ ಕಾಳಜಿ ಮಾಡಬೇಕು. ಇದಾದ ಬಳಿಕ ಶುರುವಾಗುವ ಸಮಸ್ಯೆ ಅಂದರೆ ಕೂದಲು ಉದುರುವ ಸಮಸ್ಯೆ. ಹಾಗಾದರೆ ಮಗುವಾಗ ಬಳಿಕ ಕೂದಲು ತುಂಬಾ ಉದುರಲು ಶುರುವಾದಾಗ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಹೆಣ್ಣು ಗರ್ಭಿಣಿಯಾಗಿದ್ದಾಗ, ಆಕೆಯ ಕೂದಲ ಆರೋಗ್ಯ ಎಷ್ಟು ಅತ್ಯುತ್ತಮವಾಗಿ ಇರುತ್ತದೆಯೋ, ಬಾಣಂತನವಾದ ಮೂರು ತಿಂಗಳ ಬಳಿಕ, ಅದಕ್ಕಿಂತ ದುಪ್ಪಟ್ಟು ಕೂದಲು ಉದುರಲು ಶುರುವಾಗುತ್ತದೆ. ಇದಕ್ಕೆ ಕಾರಣ ಹಾರ್ಮೋನಲ್ ಇಂಬ್ಯಾಲೆನ್ಸ್. ಇದು ಸಾಮಾನ್ಯವಾಗಿದ್ದು, ಕೆಲ ತಿಂಗಳಲ್ಲೇ ಈ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು.
ಹಾಗಾಗಿ ಸಿಕ್ಕ ಸಿಕ್ಕ ಶ್ಯಾಂಪೂ, ಹೇರ್ ಆಯ್ಲ್ ಬಳಸಬೇಡಿ. ತೆಂಗಿನ ಎಣ್ಣೆ, ಬಿಸಿ ಮಾಡಿದ ಹರಳೆಣ್ಣೆ, ಆಲಿವ್ ಎಣ್ಣೆ, ಪ್ಯೂರ್ ಬಾದಾಮ್ ಎಣ್ಣೆ ಬಿಟ್ಟು, ಮಾರುಕಟ್ಟೆಯಲ್ಲಿ ಸಿಗುವ ಯಾವ ಎಣ್ಣೆಯನ್ನೂ ಬಳಸಬೇಡಿ. ಇಷ್ಟೇ ಅಲ್ಲದೇ, ಶ್ಯಾಂಪೂ ಬದಲು, ಸೀಗೆಕಾಯಿ ಪುಡಿ, ನೆಲ್ಲಿಕಾಯಿ ಪುಡಿಯಂಥ ಮನೆಯಲ್ಲೇ ಇರುವ ವಸ್ತುಗಳಿಂದಲೇ ಹೇರ್ ವಾಶ್ ಮಾಡಿ. ಇದೆಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ, ನೀವು ಸರಿಯಾಗಿ ಆಹಾರ ಸೇವನೆ ಮಾಡುವುದು.
ಬಾಣಂತನದಲ್ಲಿ ಇಷ್ಟು ದಿನ ಸಪ್ಪೆ ಸಪ್ಪೆ ಊಟ ಮಾಡಿದ್ದೇನೆ. ಇನ್ನು ಚೆನ್ನಾಗಿ ಖಾರ, ಮಸಾಲೆಯುಕ್ತ ಪದಾರ್ಥ, ಜಂಕ್ ಫುಡ್ ತಿನ್ನೋಣವೆಂದು ನೀವು ತಿಂದರೆ, ಅದರ ಎಫೆಕ್ಟ್ ನಿಮ್ಮ ಸ್ಕಿನ್ ಮತ್ತು ಹೇರ್ ಮೇಲೆ ಬೀಳುತ್ತದೆ. ಹಾಗಾಗಿ ನೀವು ಒಳ್ಳೆಯ, ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಹಸಿ ತರಕಾರಿ, ನೆನೆಸಿಟ್ಟ ಡ್ರೈಫ್ರೂಟ್ಸ್, ಹಾಲು, ಮೊಸರು, ತುಪ್ಪ, ಮಜ್ಜಿಗೆ, ಎಳನೀರು, ಮೊಳಕೆ ಕಾಳುಗಳನ್ನು ಹೆಚ್ಚೆಚ್ಚು ಸೇವಿಸಿ. ಎಣ್ಣೆ ಪದಾರ್ಥ, ಖಾರ, ಮಸಾಲೆಯುಕ್ತ ತಿಂಡಿಗಳಿಂದ ದೂರವಿರಿ. ಇದರಿಂದ ನೀವು ಆದಷ್ಟು ಬೇಗ ನಿಮ್ಮ ಮೊದಲಿನ ಸೌಂದರ್ಯವನ್ನು ತೆದುಕೊಳ್ಳಬಹುದು.
ಪ್ರಸವದ ನಂತರ ಕೂದಲು ಉದುರುವು ಸಾಮಾನ್ಯ ಹಾಗಾಗಿ ಅದರ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ. ಇರುವ ಕೂದಲಾದರೂ ಚೆಂದಗಾಣಿಸಲಿ ಎಂದು ಹೇರ್ ಸ್ಟ್ರೇಟ್ನರ್, ಹೇರ್ ಡ್ರೈಯರ್ ಬಳಕೆ ಖಂಡಿತ ಮಾಡಬೇಡಿ. ಬದಲಾಗಿ ನೀಟ್ ಆಗಿ ಜಡೆ ಕಟ್ಟಿಕೊಳ್ಳಿ. ತೆಂಗಿನ ಎಣ್ಣೆ ಹಾಕಿ, ಜಡೆ ಹೆಣೆದುಕೊಳ್ಳುದಕ್ಕಿಂತ, ಉತ್ತಮ ಪರಿಹಾರ ಮತ್ತೊಂದಿಲ್ಲ.
ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಅತ್ಯುತ್ತಮ ಲಾಭಗಳೇನು..?