Wednesday, October 15, 2025

Latest Posts

ಪುರುಷರು ಈ 5 ಸೂಪರ್ ಫುಡ್ ಸೇವಿಸಿದ್ರೆ ಅಶಕ್ತತೆ ದೂರವಾಗುತ್ತದೆ..

- Advertisement -

Health Tips: ವಯಸ್ಸು 30 ದಾಟಿದ ಬಳಿಕ, ಪುರುಷರ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡುತ್ತದೆ. ಏಕಂದರೆ, ಈ ಸಮಯದಲ್ಲಿ ಕೆಲಸದ ಒತ್ತಡ, ಮನೆಯ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಅಲ್ಲದೇ, ಹೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡಲು ಆಗುವುದಿಲ್ಲ. ಹಾಗಾಗಿ ಅನಾರೋಗ್ಯವೂ ಆಗಾಗ ಕಾಡುತ್ತದೆ. ಹಾಗಾಗಿ ನಾವಿಂದು ಪುರುಷರು ಸೇವಿಸಬಹುದಾದ 5 ಸೂಪರ್ ಫುಡ್ ಬಗ್ಗೆ ವಿವರಿಸಲಿದ್ದೇವೆ.

ಮೊದಲನೇಯ ಆಹಾರ ಕಲೋಂಜಿ. ಕಲೋಂಜಿಯನ್ನು ಹೆಚ್ಚಿನವರು ಎಣ್ಣೆ ತಯಾರಿಸಲು ಉಪಯೋಗಿಸುತ್ತಾರೆ. ಏಕೆಂದರೆ, ಕಲೋಂಜಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ, ಕೂದಲ ಬುಡ ಗಟ್ಟಿಯಾಗಿ, ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದೇ ರೀತಿ ಪುರುಷರು ಇದನ್ನು ಸೇವಿಸಿದರೆ, ಅವರ ಆರೋಗ್ಯ ಉತ್ತಮವಾಗಿರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್‌ ಕಲೋಂಜಿಯನ್ನು ಚೆನ್ನಾಗಿ ಜಜ್ಜಿ, 1 ಗ್ಲಾಸ್ ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು.

ಎರಡನೇಯ ಆಹಾರ ಜಿನ್ಸಿಂಗ್. ಜಿನ್ಸಿಂಗ್‌ ಎಂದರೆ, ಇದೊಂದು ವಿಶೇಷವಾದ ಬೇರು. ಇದರಿಂದ ಪೌಡರ್ ತಯಾರಿಸಿ, ಮಾರಾಟ ಮಾಡಲಾಗುತ್ತದೆ. ಇದು ಪುರುಷರ ಆರೋಗ್ಯಕ್ಕೆ ತುಂಬಾ ಉತ್ತಮ. ಗುಳಿಗೆ ರೂಪದಲ್ಲೂ ಜಿನ್ಸಿಂಗ್ ಸಿಗುತ್ತದೆ. ಇದನ್ನು ನೀವು ಖರೀದಿಸಿ, ಅದರಲ್ಲಿ ನೀಡಿರುವ ಸಲಹೆಯಂತೆ ಇದನ್ನು ತೆಗೆದುಕೊಳ್ಳಬಹುದು.

ಮೂರನೇಯ ಆಹಾರ ಜೇನುತುಪ್ಪ. ಇದು ದೇಹಕ್ಕೆ ಉಷ್ಣ ನೀಡುವ ಆಹಾರ. ಹಾಗಾಗಿ ಜೇನನ್ನು ಲಿಮಿಟಿನಲ್ಲಿ ಸೇವಿಸಬೇಕು. ಪ್ರತಿದಿನ 1 ಸ್ಪೂನ್ ಜೇನುತುಪ್ಪ ಸೇವಿಸಿದರೆ, ಪುರುಷರ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಗಂಟಲ ಬೇನೆಕೂಡ ಕಡಿಮೆಯಾಗುತ್ತದೆ.

ನಾಲ್ಕನೇಯ ಆಹಾರ ಒಣ ಅಂಜೂರ. ಒಣ ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಎಲ್ಲರ ಆರೋಗ್ಯಕ್ಕೂ ಉತ್ತಮವಾಗಿದೆ. ಬಿಪಿ ಶುಗರ್ ಗೆ ಪರಿಹಾರ, ಹೆಣ್ಣು ಮಕ್ಕಳ ಎಲ್ಲ ಸಮಸ್ಯೆಗೆ ಪರಿಹಾರ, ಪುರುಷರಿಗೆ ಶಕ್ತಿ ನೀಡುವಲ್ಲಿ ಒಣ ಅಂಜೂರ ಸಹಕಾರಿಯಾಗಿದೆ. ಹಾಗಾಗಿ ಪ್ರತಿದಿನ ಒಂದು ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ತಿಂಡಿಯೊಂದಿಗೆ ಅಥವಾ ತಿಂಡಿ ತಿನ್ನುವ ಮುನ್ನ ಸೇವಿಸಿ.

ಐದನೇಯ ಆಹಾರ ಆಲಿವ್ಸ್. ನೀವು ಪ್ರತಿದಿನ ಒಂದು ಆಲಿವ್ ಸೇವಿಸಬಹುದು. ಅಥವಾ ತಿನ್ನುವ ಅಡುಗೆ, ಸಲಾಡ್‌ನಲ್ಲಿ ಆಲಿವ್ ಎಣ್ಣೆ ಬಳಸಿದರೆ ಉತ್ತಮ. ಇನ್ನು ನಿಮಗೆ ಇಲ್ಲಿ ಹೇಳಿರುವ ಯಾವುದಾದರೂ ಆಹಾರ ತಿಂದರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.

ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?

- Advertisement -

Latest Posts

Don't Miss