Political News: ಇಂದು ಸುಮಲತಾ ಅಂಬರೀಶ್ ತಮ್ಮ ಅಭಿಮಾನಿಗಳ ಜೊತೆ ಚರ್ಚಿಸಿ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, ಅಷ್ಟು ದೂರದಿಂದ ನೀವು ಇಲ್ಲಿಯವರೆಗೆ ಬಂದಿದ್ದೀರಾ. ನಿಮ್ಮ ಆಶೀರ್ವಾದ ಪ್ರೀತಿಯಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಈ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು. ಅಂಬರೀಶ್ ಅವರ ರಾಜಕೀಯ ಜೀವನದಿಂದ ಇಲ್ಲಿಯವರೆಗೆ ಇದ್ದ ಎಲ್ಲ ಮುಖಂಡರು ಇವತ್ತು ನಮ್ಮ ಜೊತೆಯಲ್ಲಿದ್ದಾರೆ. 2019 ರ ಚುನಾವಣೆಯಲ್ಲಿ ಇದೇ ಶಕ್ತಿ ಎಲೆಕ್ಷನ್ ನಲ್ಲಿ ನಿಲ್ಲೋಕೆ ನನಗೆ ಧೈರ್ಯ ತುಂಬಿತ್ತು. ಮೊದಲ ದಿನದಿಂದಲೂ ಇವರೇ ಇದ್ದಿದ್ದು.
ಅವತ್ತು ನನ್ನ ಜೊತೆ ಯಾವ ಸಚಿವರು, ಮುಖಂಡರು, ಶಾಸಕರು ಇರಲಿಲ್ಲ. ಈ ಜನರಿಂದಲೇ ನಾನು ಗೆದ್ದಿದ್ದೇನೆ. ಮಾತನಾಡುವಾಗ ಇಲ್ಲಿ ಒಬ್ಬರು ಹೇಳುತ್ತಿದ್ರು. 5 ವರ್ಷ ಎಷ್ಟು ಕಷ್ಟಗಳನ್ನ ಅನುಭವಿಸಿದ್ದೀರಾ. ಆದ್ರಲ್ಲೂ ನಿಮ್ಮ ಕೈಲಾದ ಕೆಲಸ ಮಾಡಿದ್ದೀರಾ ಅಂತ ಹೇಳಿದ್ರು. 5 ವರ್ಷದಲ್ಲಿ ಹೌದು ಸಾಕಷ್ಟು ತೇಜೋವಧೆ ಆಗಿದೆ. ನಾನು ಸ್ವಾರ್ಥಿಯಾಗಿ ಇದ್ದಿದ್ರೆ. ನಾನು , ನನ್ನ ಮಗ ಅಂತ ಇದ್ದಿದ್ರೆ. ನನ್ನ ನಡೆ ಬೇರೆಯದೇ ಆಗಿರುತ್ತಿತ್ತು. ನಾನು ಇಲ್ಲಿಯವರೆಗೆ ಯಾವ ಮಾತನ್ನು ಬದಲಾಯಿಸಿಲ್ಲ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಚುನಾವಣೆ ಸಂದರ್ಭದಿಂದ ಇಲ್ಲಿಯವರೆಗೆ ನುಡಿದಂತೆ ನಡೆದಿದ್ದೇನೆ. ನಿಮಗೆ ಕೊಟ್ಟ ಮಾತಿನಲ್ಲಿ ಎಲ್ಲವನ್ನು ನಿರ್ವಹಿಸಿದ್ದೇನೆ. ಸಂಸದೆಯಾಗಿ ಏನೆಲ್ಲ ಕೆಲಸ ಮಾಡಬೇಕು ಅಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಇವತ್ತಿನ ದಿನಕ್ಕೆ ಯಾರಾದ್ರೂ ಮಂಡ್ಯ ಬೇಡ. ನಿಮಗೆ ಬೇರೆ ಕಡೆ ಟಿಕೆಟ್ ಕೊಡುತ್ತೇವೆ, ನೀವು ಬೇರೆ ಕಡೆ ನಿಂತುಕೊಳ್ಳಿ ಅಂದ್ರೆ ಬಿಡುತ್ತಾರಾ..? ಆದ್ರು ನಾನು ಆ ಅವಕಾಶವನ್ನು ಬಿಟ್ಟಿದ್ದೇನೆ. ಇದ್ರು ,ಹೋದ್ರು ನನಗೆ ಮಂಡ್ಯ ಸಾಕು. ಮಂಡ್ಯ ಅಂದ್ರೆ ನಮಗೆ ಭಾವನೆ , ಪ್ರೀತಿ ಅಭಿಮಾನ ಮುಖ್ಯ. ಮಂಡ್ಯದಲ್ಲಿ ನಾನು ಇದ್ದಾಗ ಅಂಬರೀಶ್ ,ನನ್ನ ಜೊತೆಯಲ್ಲೇ ಇದ್ದ ಹಾಗೆ ಎಂದು ಸುಮಲತಾ ಹೇಳಿದ್ದಾರೆ.
ಇದ್ರಲ್ಲಿ ನನ್ನ ಸ್ವಾರ್ಥ ಏನು ಇಲ್ಲ. ಸ್ವಾರ್ಥ ಅನ್ನೋದು ಇದ್ರೆ ನನಗೆ ಮಂಡ್ಯನೇ ಮಾತ್ರ. ನಾನು ಚುನಾವಣೆಗೆ ನಿಂತಾಗ ಸಾಕಷ್ಟು ಸವಾಲು ಎದುರಿಸಿದ್ದೇನೆ. ನಿಮ್ಮ ಅಭಿಪ್ರಾಯ ಪಡೆಯದೇ ಸುಮಲತ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ರಾಜಕೀಯ ಇರುತ್ತೆ ಇರಲ್ಲ, ಅಧಿಕಾರ ಬರುತ್ತೆ ಹೋಗುತ್ತೆ. ಆದ್ರೆ ನಮ್ಮ ನಿರ್ಧಾರಗಳು ಮಂಡ್ಯದ ಜೊತೆಯಲ್ಲಿಯೇ ಇರುತ್ತೆ. ನಿಮ್ಮ ಅನಿಸಿಕೆಗಳನ್ನ ಇವತ್ತು ಹೇಳಿದ್ದೀರಾ. ಆದ್ರ ಬಗ್ಗೆ ಇವತ್ತು ಸ್ವಲ್ಪ ಚರ್ಚೆ ಮಾಡಬೇಕಿದೆ. ಆದ್ರೆ ನಿಮಗೆ ಯಾವುದೇ ಕಾರಣಕ್ಕೂ ನೋಯಿಸಲ್ಲ. ನನ್ನ ನಿರ್ಧಾರ ಇನ್ನು ಕೆಲವೇ ದಿನಗಳಲ್ಲಿ ಮಂಡ್ಯದಲ್ಲಿ ಸಭೆ ಕರೆದು ನಿರ್ಧಾರ ತಿಳಿಸುತ್ತೇನೆ. ಆಪ್ತರ ಜೊತೆಯಲ್ಲಿ ಚರ್ಚೆಮಾಡಿ ಇದೇ ಏಪ್ರಿಲ್ 3 ರಂದು ಮಂಡ್ಯದಲ್ಲಿ ಸಭೆ ಮಾಡಿ ತಿಳಿಸುತ್ತೇನೆ. ನಿಮ್ಮ ಆಶೀರ್ವಾದ ಪಡೆಯುತ್ತೇವೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಅಭಿಮಾನಿಗಳು ಇಲ್ಲಿಗೆ ಬರಬೇಕು. ನಮ್ಮ ಅನಿಸಿಕೆ ಹಂಚಿಕೊಳ್ಳಬೇಕು ಅಂತ ರಿಕ್ವೇಸ್ಟ್ ಮಾಡಿದ್ರು. ಆದ್ರೆ ನಾನೇ ತಡೆದಿದ್ದೆ. ಇವತ್ತು ಎಲ್ಲರೂ ಬಂದು ಅವರವರ ಅನಿಸಿಕೆ ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ನಾನು ಜನರ ಅಭಿಪ್ರಾಯ ಪಡೆದೆ ನಿರ್ಧಾರ ತೆಗೆದುಕೊಂಡಿದ್ದೆ. ಇವತ್ತು ಮಂಡ್ಯದಿಂದ ಬಂದವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಾನು ಆಪ್ತ ಬಳಗದಲ್ಲಿ ಚರ್ಚಿಸಿ ಮಂಡ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ.
2019 ರಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲು ಆಗಲ್ಲ ಅಂತ ಹೇಳಿದ್ರು. ಇವತ್ತು ಅದೇ ರೀತಿ ನಿರ್ಧಾರ ಮಾಡಿದೆ. ಬಿಜೆಪಿ ಮಂಡ್ಯವನ್ನು ಉಳಿಸಿಕೊಳ್ಳುತ್ತೆ ಅಂತ ಅಂದುಕೊಂಡಿದ್ದೆ. ನಮ್ಮ ನಡೆ ಏನು, ನಮ್ಮ ಭವಿಷ್ಯ ಏನು..? ಬಿಜೆಪಿ ಮುಖಂಡರಿಗೆ ನಮ್ಮ ಭವಿಷ್ಯ ಅಲ್ಲ ಮಂಡ್ಯದಲ್ಲಿ ನಮ್ಮನ್ನು ನಂಬಿಕೊಂಡು ಲಕ್ಷಾಂತರ ಜನ ಇದ್ದಾರೆ. ಅವರ ಭವಿಷ್ಯ ಏನು ಅನ್ನೋದು ಮುಖ್ಯ. ನಮಗೆ ಸಹಕಾರ ಕೊಟ್ಟರೆ, ಉನ್ನತ ಮಟ್ಟದಲ್ಲಿ ಸ್ಥಾನಮಾನ ಸಿಗುತ್ತೆ. ಹೈಕಮಾಂಡ್ ನಲ್ಲಿ ನನಗೆ ಸೂಚನೆ ಸಿಕ್ಕಿದೆ ಅಂತ ವಿಜಯೇಂದ್ರ ಹೇಳಿದ್ದಾರೆ. ನಾನು ಅಮಿತ್ ಶಾ ಅವರನ್ನ ಭೇಟಿಯಾದಾಗಲೂ ಕಾರ್ಯಕರ್ತರ ಗತಿ ಏನು ಅಂತ ಕೇಳಿದ್ದೆ. ಅವತ್ತು ನಿಮ್ಮ ಕಾರ್ಯಕರ್ತರನ್ನು ನಾನು ಕೈಬಿಡಲ್ಲ ಅಂತ ಹೇಳಿದ್ರು. ನನ್ನ ನಿರ್ಧಾರ ಯಾವ ಪಕ್ಷಕ್ಕೆ ಅನುಕೂಲ ಆಗುತ್ತೆ ಅನ್ನೋದ್ರ ಮೇಲೆ ನಾನು ನಿರ್ಧಾರ ಮಾಡಲ್ಲ. ಬಿಜೆಪಿ ಸೇರಿ ಅಂತ ಆಹ್ವಾನ ಬಂದಿದೆ ಎಂದು ಸುಮಲತಾ ಹೇಳಿದ್ದಾರೆ.
ಮಂಡ್ಯದಲ್ಲಿ ರಾಧ ಮೋಹನ್ ದಾಸ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಷ್, ಅವರ ಜೊತೆ ನಾನು ಇನ್ನು ಮಾತನಾಡಿಲ್ಲ.ಬೆಂಬಲಿಗರ ಸಭೆಯಲ್ಲಿ ಈ ರೀತಿ ನಿರ್ಧಾರವಾಗಿದೆ ನೀವು ಏನು ಹೇಳ್ತಿರಾ ಅಂತ ಕೇಳುತ್ತೇನೆ. ಎಲ್ಲ ಪಕ್ಷಕ್ಕೆ ಸೇರಲು ಆಹ್ವಾನ ಬಂದಿದೆ. ಬಿಜೆಪಿ ಪರವಾಗಿ ವಿಧಾನಸಭೆ ಎಲೆಕ್ಷನ್ ನಲ್ಲಿ ನಾನು ಬಿಜೆಪಿ ಪರವಾಗಿ ಕೆಲಸ ಮಾಡಿದ್ದೇ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಸುಮಲತಾಗೆ ಟಿಕೆಟ್ ಸಿಗಲಿಲ್ಲ ಅಂದ್ರೆ ನನಗೆ ಟಿಕೆಟ್ ಕೇಳುತ್ತಿದ್ದೇ ಎಂಬ ನಾರಾಯಣ ಗೌಡ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ, ನಾರಾಯಣ ಗೌಡರಿಗೆ ಎಲ್ಲವೂ ಗೊತ್ತಿದೆ. ಅವರು ಮೊದಲಿನಿಂದಲೂ ನಮ್ಮ ಜೊತೆಯಲ್ಲಿಯೇ ಇದ್ರು. ಅವರು ಈಗ ಮೈಂಡ್ ಚೇಂಜ್ ಮಾಡಿಕೊಂಡಿದ್ದಾರೆ ಎಂದರು.
ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ
ಯಾವುದೇ ಗೊಂದಲಗಳಿಲ್ಲ. ಈ ಸಭೆಯ ಮೂಲಕ ಎಲ್ಲರಿಗೂ ಸ್ಟ್ರಾಂಗ್ ಮೆಸೇಜ್ ಹೋಗಿದೆ: ಪ್ರಜ್ವಲ್ ರೇವಣ್ಣ