Sunday, September 8, 2024

Latest Posts

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

- Advertisement -

Health Tips: ಮದುವೆಯಾಗಿ ಮಕ್ಕಳಾಗುವುದಕ್ಕೆ ಸರಿಯಾದ ಸಮಯ ಅಂದ್ರೆ 25ರಿಂದ 30 ವರ್ಷ. 30 ವರ್ಷ ತುಂಬುವುದರೊಳಗೆ 2 ಮಕ್ಕಳಾಗಿಬಿಟ್ಟರೆ, ಮುಂದೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಆಫೀಸು ಕೆಲಸಕ್ಕಾಗಿಯೋ, ಅಥವಾ ಕೇರಿಯರ್ ರೂಪಿಸಿಕೊಳ್ಳುವ ಭರದಲ್ಲೋ, 40 ವಯಸ್ಸಾದರೂ ತಾಯಿಯಾಗಲು ಹಿಂದೆ ಮುಂದೆ ಯೋಚಿಸುತ್ತಾರೆ. ಹಾಗಾಗಿ ಇಂದು ನಾವು 40ರ ವಯಸ್ಸಿನಲ್ಲಿ ತಾಯಿಯಾಗಬೇಕು ಎನ್ನುವವರಿಗೆ ಎಂಥ ಸಮಸ್ಯೆಗಳು ಎದುರಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ನಾವು ಈ ಮೊದಲೇ ಹೇಳಿದ ಹಾಗೆ 25ರಿಂದ 30 ವರ್ಷದೊಳಗೆ ಮಕ್ಕಳಾದರೆ, ತಾಯಿ ಮಗು ಇಬ್ಬರ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ. ಅದರಲ್ಲೂ ಮೊದಲನೇಯ ಮಗುವಾಗಿ 2ರಿಂದ 3 ವರ್ಷಕ್ಕೆ ನೀವು ಎರಡನೇಯ ಮಗುವಿಗೆ ಸಿದ್ಧರಾಗಬೇಕು. ಆದರೆ ಕೆಲವರು ಮೊದಲನೇಯ ಮಗು ಜನಿಸಿ, ಹಲವು ವರ್ಷಗಳಾದ ಮೇಲೆ ಎರಡನೇಯ ಮಗುವಿಗೆ ಸಿದ್ಧರಾಗುತ್ತಾರೆ. ಇದು ತಪ್ಪು. ಇದರಿಂದ ಎರಡನೇಯ ಮಗುವಿನ ಭವಿಷ್ಯವೂ ಸರಿಯಾಗಿ ಇರುವುದಿಲ್ಲ. ಹಾಗಾಗಿ ಮಕ್ಕಳ ವಯಸ್ಸಿನ ಅಂತ 2ರಿಂದ 3 ವರ್ಷವಷ್ಟೇ ಇರಲಿ.

ಇನ್ನು 30 ವರ್ಷದೊಳಗೇ ಮಗುವಾಗಲಿ ಎಂದು ಹೇಳುವುದು ಯಾಕೆ ಎಂದರೆ, ಈ ಸಮಯದಲ್ಲಿ ಪತಿ-ಪತ್ನಿ ಇಬ್ಬರೂ ಶಕ್ತಿಯುತರಾಗಿರುತ್ತಾರೆ. ಅಂಡಾಣುಗಳ ಸಂಖ್ಯೆ ಸರಿಯಾಗಿ ಇರುತ್ತದೆ. ಈ ಸಮಯದಲ್ಲಿ ಹುಟ್ಟುವ ಮಗುವಿನ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಆದರೆ ನಿಮಗೆ 35 ಮೀರಿದ್ದಲ್ಲಿ, ನಿಮ್ಮ ಅಂಡಾಶಯದಲ್ಲಿನ ಅಂಡಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ವೇಳೆ ಮಗುವಾಗುವುದು ಕಷ್ಟವಾಗುತ್ತದೆ. ಅಥವಾ ಈ ವಯಸ್ಸಿನಲ್ಲಿ ಹುಟ್ಟುವ ಮಗುವಿನ ಆರೋಗ್ಯ ಅಷ್ಟು ಸರಿಯಾಗಿ ಇರುವುದಿಲ್ಲ. ಹಾಗಾಗಿ 30ರೊಳಗೆ ತಾಯಿಯಾಗುವುದು ಉತ್ತಮ.

ವಯಸ್ಸಾದ ಬಳಿಕ ನೀವು ಮಗು ಮಾಡಿಕೊಳ್ಳಲು ನಿರ್ಧರಿಸಿ, ಅದು ಫೇಲ್ ಆದರೆ, ಲಕ್ಷ ಲಕ್ಷ ಸುರಿದು ಐವಿಎಫ್‌ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ. ಇಷ್ಟೇ ಅಲ್ಲದೇ, ವಯಸ್ಸು ಮೀರಿ ತಾಯಿಯಾಗಲು ಹೋದರೆ, ಕೆಲವೊಮ್ಮೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಅದರ ಬದಲು, 30 ದಾಟುವುದರೊಳಗೆ ನೀವೇ ನ್ಯಾಚುರಲ್ ಆಗಿ ತಾಯ್ತನ ಅನುಭವಿಸಿ.

ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಅತ್ಯುತ್ತಮ ಲಾಭಗಳೇನು..?

ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?

- Advertisement -

Latest Posts

Don't Miss