Shopping Tips: ನಾವು ಈಗಾಗಲೇ ನಿಮಗೆ ಕಡಿಮೆ ಬೆಲೆಗೆ ಅತ್ಯುತ್ತಮ ಕ್ವಾಲಿಟಿಯ ಬಟ್ಟೆ, ಚಪ್ಪಲಿ, ಸೀರೆ ಎಲ್ಲೆಲ್ಲಿ ಸಿಗತ್ತೆ ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ನಾವು ವೆರೈಟಿ ವೆರೈಟಿ ಬ್ರೈಡಲ್ ಲೆಹೆಂಗಾ ಖರೀದಿಸಬೇಕಾದ್ರೆ, ಎಲ್ಲಿ ಹೋಗಬೇಕು ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ಚಿಕ್ಕಪೇಟೆಯ, ರಾಜಲಕ್ಷ್ಮೀ ಸಿಲ್ಕ್ಸ್ ನಲ್ಲಿ, ನಿಮಗೆ ತರಹೇವಾರಿ ಬ್ರೈಡಲ್ ಲೆಹೆಂಗಾ ಸಿಗುತ್ತದೆ. ಸಾವಿರದ ಐನೂರು ರೂಪಾಯಿಯಂದ ಶುರುವಾಗುವ ಲೆಹೆಂಗಾ ಬೆಲೆ, 50 ಸಾವಿರದವರೆಗೆ ಇದೆ. ರಿಸೆಪ್ಶನ್, ಮದುವೆ, ಪೂಜೆ ಸೇರಿ ಹಲವು ಕಾರ್ಯಕ್ರಮಗಳಿಗೆ ಧರಿಸಬಹುದಾದ ಲೆಹೆಂಗಾಗಳು ಇಲ್ಲಿ ಸಿಗುತ್ತದೆ. ನೀವು ಬ್ರೈಡ್ ಅಲ್ಲದಿದ್ದರೂ, ನೀವು ಧರಿಸಬಹುದಾದ, ಸಿಂಪಲ್ ಲೆಹೆಂಗಾ ಕೂಡ ಇಲ್ಲಿ ಸಿಗುತ್ತದೆ.
ಆದರೆ ಇಲ್ಲಿ ಸಿಗುವ ಲೆಹೆಂಗಾ ಸೆಮಿ ಸ್ಟಿಚ್ ಆಗಿದ್ದು, ಬ್ಲೌಸ್ ಕೂಡ ನೀವೇ ಸ್ಟಿಚ್ ಮಾಡಿಸಿಕೊಳ್ಳಬೇಕಾಗುತ್ತದೆ. ಅಂದರೆ, ಇಲ್ಲಿ ಲೆಹೆಂಗಾ ಮೆಟಿರಿಯಲ್‌ಗಳು ನಿಮಗೆ ಸಿಗುತ್ತದೆ. ನೀವು ಯಾವ ಪ್ಯಾಟರ್ನ್‌ನಲ್ಲಿ ಬೇಕಾದರೂ, ಲೆಹೆಂಗಾದ ಬ್ಲೌಸ್ ಹೊಲಿಸಿಕೊಳ್ಳಬಹುದು.
ಬೇರೆ ಬೇರೆ ಪ್ಯಾಟರ್ನ್ ಲೆಹೆಂಗಾಗಳು ಇಲ್ಲಿ ಖರೀದಿಸಬಹುದಾಗಿದ್ದು, ಕೆಲವು ವಾಶೇಬಲ್ ಮತ್ತು ಕೆಲವು ಡ್ರೈ ವಾಶ್ ಮಾಡಬಹುದಾದ ಲೆಹೆೆಂಗಾಗಳಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..