Sunday, September 8, 2024

Latest Posts

ಈ ಕೃಷ್ಣ ಜನ್ಮಾಷ್ಠಮಿಗೆ ಮಾಡಿ ಸಿಹಿ ಅವಲಕ್ಕಿ ಪ್ರಸಾದ..

- Advertisement -

ಶ್ರೀಕೃಷ್ಣನ ಸ್ನೇಹಿತ ಮತ್ತು ಪರಮ ಭಕ್ತ ಕುಚೇಲ, ಕೃಷ್ಣನಿಗಾಗಿ ಅವಲಕ್ಕಿಯನ್ನ ತಂದು ಕೊಟ್ಟ. ಮತ್ತು ಕೃಷ್ಣ ಅದನ್ನು ಇಷ್ಟಪಟ್ಟು ತಿಂದ. ಅಂದಿನಿಂದಲೇ, ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ನೀವು ಈ ಬಾರಿ ಕೃಷ್ಣ ಜನ್ಮಾಷ್ಠಮಿಗೆ ಅವಲಕ್ಕಿ ಪಂಚಕಜ್ಜಾಯವನ್ನೇ ನೈವೇದ್ಯಕ್ಕಿಡಿ. ಹಾಗಾದ್ರೆ ಸಿಹಿ ಅವಲಕ್ಕಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಗೊತ್ತೇ..?

ಬೇಕಾಗುವ ಸಾಮಗ್ರಿ: 2 ಕಪ್ ಅವಲಕ್ಕಿ, ಅರ್ಧ ಕಪ್ ಕೊಬ್ಬರಿ ತುರಿ, ಸಿಹಿ ಬೇಕಾದಷ್ಟು ಬೆಲ್ಲ, ಎರಡರಿಂದ ಮೂರು ಏಲಕ್ಕಿ, ಅರ್ಧ ಸ್ಪೂನ್ ಎಳ್ಳು, ಒಂದು ಸ್ಪೂನ್ ತುಪ್ಪ.

ಮೊದಲು ಎಳ್ಳನ್ನು ಹುರಿದಿಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ಗೆ ಚೂರು ತುಪ್ಪ ಮತ್ತು ಬೆಲ್ಲ, ಅವಶ್ಯಕತೆ ಇದ್ದಷ್ಟು ನೀರು ಹಾಕಿ, ಪಾಕ ಬರಿಸಿಕೊಳ್ಳಿ. ಕರೆಕ್ಟ್ ಆಗಿ ಪಾಕ ಬಂದು, ಅವಲಕ್ಕಿ ತಯಾರಿಸಿದ್ರೆ, ಎರಡರಿಂದ ಮೂರು ದಿನ ಹಾಳಾಗುವುದಿಲ್ಲ. ಹಾಗಾಗಿ ಬೆಲ್ಲವನ್ನು ಸರಿಯಾಗಿ ಪಾಕ ಬರಿಸಿಕೊಳ್ಳಿ. ಬೆಲ್ಲದ ಪಾಕ ತಯಾರಾದ ಮೇಲೆ ಅದಕ್ಕೆ ಏಲಕ್ಕಿ ಪುಡಿ, ಕೊಬ್ಬರಿ ತುರಿ ಹಾಕಿ, 3 ನಿಮಿಷ ಮಿಕ್ಸ್ ಮಾಡಿ, 2 ನಿಮಿಷ ಬೇಯಿಸಿ. ಈ ಸಮಯ ನೀವು ಪಾಕವನ್ನ ತಿರುವುತ್ತಿರಬೇಕು. ಇಲ್ಲವಾದಲ್ಲಿ ಪಾಕ ಸೀದು ಹೋಗುತ್ತದೆ.

ಗರ್ಭಿಣಿಯರು ಯಾವ ಆಹಾರವನ್ನು ಸೇವಿಸಬಾರದು..?

ಇದಾದ ಬಳಿಕ, ಹುರಿದಿಟ್ಟುಕೊಂಡ ಎಳ್ಳು, ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಗೆ ಇದಕ್ಕೆ ಒಂದು ಸ್ಪೂನ್ ತುಪ್ಪ ಸೇರಿಸಿದರೆ, ಸಿಹಿ ಅವಲಕ್ಕಿ ರೆಡಿ. ಇದನ್ನು ದೇವಿ ಪೂಜೆ ಇದ್ದಾಗ, ಕೃಷ್ಣ ಜನ್ಮಾಷ್ಠಮಿಗೆ, ಮತ್ತಿತರ ಪೂಜೆಗಳಿಗೆ ಪ್ರಸಾದವಾಗಿ ತಯಾರಿಸಬಹುದು. ಈ ಪದಾರ್ಥಕ್ಕೆ ಎಳ್ಳು ಹುರಿದೇ ಸೇರಿಸಬೇಕು ಎಂದಿಲ್ಲ. ನೀವು ಬಿಳಿ ಎಳ್ಳು ಬಳಸುತ್ತಿದ್ದರೆ, ಹುರಿಯದೇ ಸೇರಿಸಬಹುದು.

ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..

- Advertisement -

Latest Posts

Don't Miss