Thursday, June 19, 2025

Latest Posts

ಮಂಗಳೂರು ಶೈಲಿ ಪೇಲಕಾಯಿ ಗಟ್ಟಿ ರೆಸಿಪಿ

- Advertisement -

Recipe: ಮಂಗಳೂರಿನಲ್ಲಿ ಬರೀ ನಾನ್‌ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್‌ಗಳಿದೆ. ಗೋಳಿಬಜೆ, ನೀರ್‌ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಪೇಲಕಾಯಿ ಗಟ್ಟಿ, ಅಂದ್ರೆ ಹಲಸಿನ ಹಣ್ಣಿನಿಂದ ಮಾಡುವ ಕಡುಬು. ಈ ರೆಸಿಪಿಯ ಬಗ್ಗೆ ಹೇಳಲಿದ್ದೇವೆ.

20 ಹಲಸಿನ ಹಣ್ಣಿನ ಸೊಳೆ, ಒಂದು ಕಪ್ ತೆಂಗಿನ ತುರಿ, ಚಿಟಿಕೆ ಉಪ್ಪು, ಅರ್ಧ ಕಪ್ ಬೆಲ್ಲ, ಸಿಹಿ ಹೆಚ್ಚು ಬೇಕಾಗಿದ್ದಲ್ಲಿ, ಹೆಚ್ಚು ಬೆಲ್ಲ ಬಳಸಿ. 2 ಕಪ್ ಅಕ್ಕಿ 4 ಗಂಟೆ ನೆನೆಸಿಟ್ಟಿರಬೇಕು.

ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ನೆನೆಸಿಟ್ಟ ಅಕ್ಕಿಯನ್ನು ರುಬ್ಬಿಕೊಳ್ಳಿ. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಈಗ ಅದೇ ಮಿಕ್ಸಿ ಜಾರ್‌ನಲ್ಲಿ ಹಲಸಿನ ಹಣ್ಣಿನ ಸೊಳೆ, ತೆಂಗಿನ ತುರಿ, ಉಪ್ಪು, ಬೆಲ್ಲ ಇವಿಷ್ಟು ಹಾಕಿ, ಪೇಸ್ಟ್ ಮಾಡಿ. ಇದನ್ನು ರುಬ್ಬಿಕೊಂಡ ಅಕ್ಕಿಹಿಟ್ಟಿಗೆ ಸೇರಿಸಿ.

ಈಗ ಸಾಗುವಾನಿ ಎಲೆಯನ್ನ ತೊಳೆದು ಸ್ವಚ್ಛಗೊಳಿಸಿ. ಇದನ್ನು ಕೊಡಿಮರದ ಎಲೆ ಅಂತಲೂ ಕರೆಯುತ್ತಾರೆ. ಗ್ಯಾಸ್ ಆನ್ ಮಾಡಿ, ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ, 10 ನಿಮಿಷ ಪ್ರಿಹೀಟ್‌ ಮಾಡಿ. ಬಳಿಕ, ಎಲೆಯಲ್ಲಿ ಹಿಟ್ಟನ್ನು ಹಾಕಿ, ಎಲೆ ಮಡಿಚಿ, ಐಡ್ಲಿ ಪಾತ್ರೆಗೆ ಹಾಕಿ. ಎಲೆಯಿಂದ ಹಿಟ್ಟು ಸೋರಬಾರದು. ಬಳಿಕ ಮುಚ್ಚಳ ಮುಚ್ಚಿ, 45 ನಿಮಿಷ ಮಂದ ಉರಿಯಲ್ಲಿ ಇದನ್ನು ಬೇಯಿಸಿ. ಈಗ ಪೇಲಕಾಯಿ ಗಟ್ಟಿ ರೆಡಿ. ಇದರ ಜೊತೆ ಜೇನುತುಪ್ಪ ಅಥವಾ ತುಪ್ಪ ಒಳ್ಳೆ ಕಾಂಬಿನೇಷನ್ ಆಗಿರುತ್ತದೆ.

ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..

- Advertisement -

Latest Posts

Don't Miss