Saturday, October 19, 2024

Latest Posts

ವಿವಾಹಿತ ಹೆಣ್ಣು ಮಕ್ಕಳು ಈ ವಸ್ತುವನ್ನು ಎಂದಿಗೂ ಯಾರಿಗೂ ನೀಡಬೇಡಿ..

- Advertisement -

Spiritual: ವಿವಾಹಕ್ಕಿಂತ ಮುಂಚೆ ನಮ್ಮ ಜೀವನ ಬೇರೆ ರೀತಿಯೇ ಇರುತ್ತದೆ. ಕುತ್ತಿಗೆಗೆ ತಾಳಿ ಬಿದ್ದ ಬಳಿಕ, ಜೀವನ ಬೇರೆ ರೀತಿಯಾಗುತ್ತದೆ. ಏಕೆಂದರೆ, ವಿವಾಹಕ್ಕೂ ಮುನ್ನ ಹೆಣ್ಣು ಮಕ್ಕಳು ಮನಬಂದಂತೆ ಇರುತ್ತಾರೆ. ಆದರೆ ವಿವಾಹವಾದ ಬಳಿಕ, ನಾವು ಹಲವಾರು ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಕೆಲ ವಸ್ತುಗಳನ್ನು ಸಹ ಇನ್ನೊಬ್ಬರಿಗೆ ಕೊಡಬಾರದು. ಹಾಗಾದರೆ ಯಾವ ವಸ್ತುವನ್ನು ವಿವಾಹಿತೆ ಇನ್ನೊಬ್ಬರಿಗೆ ಕೊಡಬಾರದು ಅಂತಾ ತಿಳಿಯೋಣ ಬನ್ನಿ..

ವಿವಾಹಿತೆ ಯಾವ ವಸ್ತುವನ್ನು ಇನ್ನೊಬ್ಬರಿಗೆ ಕೊಡಬಾರದು ಅಂದ್ರೆ, ಮುತ್ತೈದೆಯರು ತೊಡುವ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಬಾರದು. ಬಳೆ, ಅರಿಷಿನ- ಕುಂಕುಮ, ಮೂಗುತಿ, ತಾಳಿ, ಹೂವು. ಇವುಗಳನ್ನು ನೀವು ಧರಿಸಿದ್ದಲ್ಲಿ, ಇದನ್ನು ನೀವು ಇನ್ನೊಬ್ಬರಿಗೆ ನೀಡಬಾರದು.

ನೀವು ಧರಿಸುವ ಬಳೆಯನ್ನು ನೀವು ಇನ್ನೊಬ್ಬರಿಗೆ ನೀಡುವಂತಿಲ್ಲ. ನಿಮ್ಮ ಬಳಿ ಹಲವಾರು ಆಭರಣಗಳಿರಬಹುದು. ಅದನ್ನು ನೊಡಿ ಇನ್ನೊಬ್ಬರು, ನಮಗೂ ಹಾಕಲು ಕೊಡಿ ಎಂದು ಕೇಳಬಹುದು. ಆದರೆ ನೀವು ನಿಮ್ಮ ಬಳೆಯನ್ನ ಮಾತ್ರ ಯಾರಿಗೂ ಹಾಕಲು ಕೊಡಬಾರದು. ಇದರಿಂದ ಪತಿಗೆ ಕೆಡುಕುಂಟಾಗುತ್ತದೆ.

ಇನ್ನು ಅರಿಷಿನ- ಕುಂಕುಮ. ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಅರಿಷಿನ- ಕುಂಕುಮ ಕೊಡುವುದು ವಾಡಿಕೆ. ಆದರೆ ನೀವು ಬಳಸುವ ಅರಿಷಿನ- ಕುಂಕುಮವನ್ನು ಇನ್ನೊಬ್ಬರಿಗೆ ಕೊಡಬಾರದು. ಹಾಗಾಗಿ ನಿಮಗಾಗಿಯೇ ಮನೆಯಲ್ಲಿ ಬೇರೆ ಅರಿಷಿನ- ಕುಂಕುಮವನ್ನು ತೆಗೆದಿಟ್ಟುಕೊಳ್ಳಿ.

ಇನ್ನು ಹೂವು. ನೀವು ಮುಡಿದ ಹೂವು ಫ್ರೆಶ್ ಆಗಿದ್ದು, ಬಾಡದೇ ಹೋಗಿದ್ದಲ್ಲಿ, ಅದನ್ನು ಹಾಕಿಕೊಳ್ಳಲು ಇನ್ನೊಬ್ಬರು ಕೇಳಬಹುದು. ಆದರೆ ನೀವು ಆ ಹೂವನ್ನು ಗಿಡಕ್ಕೆ ಹಾಕಬೇಕು ಹೊರತು, ಬೇರೆ ಯಾರಿಗೂ ನೀಡಬಾರದು.

ಮೂಗುತಿ ಡಿಸೈನ್ ಚೆನ್ನಾಗಿದೆ ಎಂಬ ಕಾರಣಕ್ಕೆ, ಇನ್ನೊಬ್ಬರು ನಿಮ್ಮ ಬಳಿ ಮೂಗುತಿಯನ್ನು ಧರಿಸಲು ಕೇಳಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ಮೂಗುತಿಯನ್ನು ನೀಡಬಾರದು. ಏಕೆಂದರೆ, ಇದು ಕೂಡ ಮುತ್ತೈದೆಯ ಸಂಕೇತವಾಗಿದೆ. ಏಕೆಂದರೆ ಕೆಲವೆಡೆ ಮೂಗುತಿ ಧರಿಸದೇ, ವಿವಾಹವಾಗಲು ಅವಕಾಶವಿಲ್ಲ. ಹಾಗಾಗಿ ಇದು ಮುತ್ತೈದೆಯ ಸಂತೇಕವೆಂದು ಹೇಳಲಾಗುತ್ತದೆ.

ಇನ್ನು ತಾಳಿಯನ್ನು ಕೂಡ ಬದಲಾಯಿಸುವಂತಿಲ್ಲ. ನಿಮ್ಮ ಬಳಿ ಎರಡು ತಾಳಿ ಇರುವ ಕಾರಣ, ನೀವು ಇನ್ನೊಬ್ಬರು ಚೆಂದಗಾಣಿಸಲಿ ಎಂದು, ನಿಮ್ಮ ತಾಳಿಯನ್ನು ನೀಡುವಂತಿಲ್ಲ.

ಇವೆಲ್ಲ ಯಾಕೆ ಮಾಡಬಾರದು ಅಂದರೆ, ಇಂಥ ಕೆಲಸದಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು. ಪತಿ-ಪತ್ನಿ ಪದೇ ಪದೇ ಜಗಳವಾಡಬಹುದು. ಅಥವಾ ಪತಿಗೆ ಆರ್ಥಿಕ ನಷ್ಟ, ಅನಾರೋಗ್ಯದಂಥ ಕಷ್ಟ ಸಂಭವಿಸಬಹುದು. ಹಾಗಾಗಿ ಈ ವಸ್ತುಗಳನ್ನು ಬೇರೆ ಯಾರಿಗೂ ನೀಡಬೇಡಿ.

ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

ಸಾಧ್ವಿಗಳೆಂದರೆ ಯಾರು..? ಇವರ ಜೀವನದ ಉದ್ದೇಶಗಳೇನು..?

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

- Advertisement -

Latest Posts

Don't Miss