Monday, December 23, 2024

Latest Posts

ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..

- Advertisement -

ನವರಾತ್ರಿಯ ಒಂಭತ್ತನೇಯ ದಿನ ಸಿದ್ಧಿಧಾತ್ರಿಯ ಪೂಜೆ ಮಾಡಲಾಗುತ್ತದೆ. ಈ ದಿನ ದೇವಿಗೆ ಎಳ್ಳಿನ ಅಥವಾ ಎಳ್ಳಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಎಳ್ಳಿನ ಬರ್ಫಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಎಳ್ಳು, ಅರ್ಧ ಕಪ್ ಶೇಂಗಾ, ಚಿಟಿಕೆ ಏಲಕ್ಕಿ ಪುಡಿ, ನಾಲ್ಕು ಸ್ಪೂನ್ ತುಪ್ಪ, ಮುಕ್ಕಾಲು ಕಪ್ ಬೆಲ್ಲ. ನೀವು ಬೆಲ್ಲ ಬೇಕಾದಷ್ಟು ಬಳಸಬಹುದು. ಹೆಚ್ಚು ಸಿಹಿ ಬೇಕಾದಲ್ಲಿ ಹೆಚ್ಚು ಬೆಲ್ಲ ಬಳಸಿ, ಕಡಿಮೆ ಬೇಕಾದಲ್ಲಿ, ಕಡಿಮೆ ಬೆಲ್ಲ ಬಳಸಿ.

ನವರಾತ್ರಿಯ ಏಳನೇಯ ದಿನದ ಪ್ರಸಾದ ರೆಸಿಪಿ: ಸರಸ್ವತಿಗೆ ಬಲು ಇಷ್ಟ ಇದು..

ಮೊದಲು ಪ್ಯಾನ್ ಬಿಸಿ ಮಾಡಿ, ಎಳ್ಳು ಹುರಿದು ಕೊಳ್ಳಿ, ನಂತರ ಶೇಂಗಾ ಹುರಿದುಕೊಳ್ಳಿ. ನೀವು ಈ ಎರಡೂ ಸಾಮಗ್ರಿಯನ್ನು ಹಾಗೇ ಬಳಸಬಹುದು. ಅಥವಾ ಪುಡಿ ಮಾಡಿ ಬಳಸಬಹುದು. ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ಈಗ ಅದೇ ಪ್ಯಾನ್‌ನಲ್ಲಿ ತುಪ್ಪ ಮತ್ತು ಬೆಲ್ಲ ಹಾಕಿ, ಹದವಾದ ಪಾಕ ತಯಾರಿಸಿಕೊಳ್ಳಿ.

ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..

ಈ ಪಾಕಕ್ಕೆ ಪುಡಿ ಮಾಡಿದ ಎಳ್ಳು ಮತ್ತು ಶೇಂಗಾ ಪುಡಿ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಲ್ಲಿ ಇನ್ನೂ ತುಪ್ಪ ಸೇರಿಸಬಹುದು. ಹೀಗೆ ಬರ್ಫಿ ಮಿಶ್ರಣ ರೆಡಿಯಾದಾಗ, ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ, ಬರ್ಫಿ ಶೇಪ್‌ನಲ್ಲಿ ಕತ್ತರಿಸಿ. ಅಥವಾ ಲಾಡುವನ್ನ ತಯಾರಿಸಬಹುದು.

- Advertisement -

Latest Posts

Don't Miss