ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣಿಯ ಪೂಜೆ ಮಾಡಲಾಗುತ್ತದೆ. ಈ ದೇವಿಗೆ ಸಕ್ಕರೆ ಅರ್ಪಿಸಬೇಕು. ಸಕ್ಕರೆಯನ್ನು ಬಳಸಿ ಯಾವುದೇ ಪ್ರಸಾದವನ್ನು ತಯಾರಿಸಬಹುದು. ಹಾಗಾಗಿ ನಾವಿಂದು ಸಜ್ಜಿಗೆ ಶೀರಾ ರೆಸಿಪಿ ತಿಳಿಸಿಕೊಡಲಿದ್ದೇವೆ.

ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ..

ಅರ್ಧ ಕಪ್ ರವಾ, ¾ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, 4 ಸ್ಪೂನ್ ತುಪ್ಪ, ಬೇಕಾದಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, 1 ಕಪ್ ಹಾಲು, ಇವಿಷ್ಟು ಶೀರಾ ಮಾಡಲು ಬೇಕಾದ ಸಾಮಗ್ರಿ.

ಮೊದಲು ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಅರ್ಧ ಕಪ್ ನೀರು ಮತ್ತು ಒಂದು ಕಪ್ ಹಾಲನ್ನು ಮಿಕ್ಸ್ ಮಾಡಿ, ಕುದಿಯಲು ಇಡಿ. ಇನ್ನೂ ಸ್ವಲ್ಪ ನೀರನ್ನು ಕುದಿಸಿಟ್ಟುಕೊಂಡಿರಿ. ಈಗ ಒಂದು ಪ್ಯಾನ್‌ ಬಿಸಿ ಮಾಡಿ, ಅದರಲ್ಲಿ ಎರಡು ಸ್ಪೂನ್ ತುಪ್ಪ ಹಾಕಿ, ರವೆಯನ್ನು ಹುರಿದುಕೊಳ್ಳಿ. ಘಮ ಬರುವವರೆಗೂ ರವೆಯನ್ನು ಹುರಿದು, ಅದಕ್ಕೆ ಕುದಿಸಿದ ಹಾಲನ್ನ ಮಿಕ್ಸ್ ಮಾಡಿ. ನಿಮಗೆ ಹಾಲು ಸೇರಿಸಿದ್ದು, ಕಡಿಮೆ ಎನ್ನಿಸಿದ್ದಲ್ಲಿ, ಕುದಿಸಿದ ನೀರನ್ನೂ ಕೊಂಚ ಮಿಕ್ಸ್ ಮಾಡಬಹುದು. ಹೀಗೆ ಹಾಲು ಮಿಕ್ಸ್ ಮಾಡಿ, ಚೆನ್ನಾಗಿ ಕೈಯಾಡಿಸಿ. ಇದಾದ ಬಳಿಕ ಸಕ್ಕರೆ ಬೆರೆಸಿ.

ನವರಾತ್ರಿಯ ಮೊದಲ ದಿನಕ್ಕೆ ಈ ಪ್ರಸಾದ ಮಾಡಿ..

ಸಜ್ಜಿಗೆ ಸರಿಯಾದ ಹದಕ್ಕೆ ಬರುವವರೆಗೂ ತಿರುವುತ್ತಿರಿ.  ಈಗ ಏಲಕ್ಕಿ ಪುಡಿ, ಹುರಿದುಕೊಂಡ ಗೋಡಂಬಿ, ದ್ರಾಕ್ಷಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಉಳಿದ 2 ಸ್ಪೂನ್ ತುಪ್ಪವನ್ನು ಸೇರಿಸಿ, ಗ್ಯಾಸ್ ಆಫ್ ಮಾಡಿ. ಈಗ ದೇವಿಗೆ ಅರ್ಪಿಸಲು ಶೀರಾ ಪ್ರಸಾದ ರೆಡಿ.

About The Author