National Political News: ಗೋವಾ ರಾಜ್ಯದಿಂದ ಮೊದಲ ಬಾರಿ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಉದ್ಯಮಿ ಪಲ್ಲವಿ ಡೆಂಪೋಗೆ ಈ ಬಾರಿ ಟಿಕೇಟ್ ಸಿಕ್ಕಿದೆ.
ಪಲ್ಲವಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದು, ಇವರ ಆಸ್ತಿಯೇ 1,400 ಕೋಟಿ ರೂಪಾಯಿಯಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಕೆಲವು ಬಿಜೆಪಿ ನಾಯಕರು ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ಕೂಡ ಜೊತೆಗಿದ್ದರು.
ಪಲ್ಲವಿ ಪತಿ ಶ್ರೀನಿವಾಸ್ ಅವರ ಆಸ್ತಿ ಸೇರಿಸಿ, 1,400 ಕೋಟಿ ಇದೆ. ಪಲ್ಲವಿಯವರು 225.4 ಕೋಟಿ ಚರಾಸ್ಥಿ ಹೊಂದಿದ್ದಾರೆ. ದುಬೈನಲ್ಲಿ ಒಂದು ಅಪಾರ್ಟ್‌ಮೆಂಟ್ ಇದ್ದು ಅದರ ಬೆಲೆ 2.5 ಕೋಟಿ ಇದೆ. ಲಂಡನ್‌ನಲ್ಲೂ ಒಂದು ಅಪಾರ್ಟ್‌ಮೆಂಟ್ ಖರೀದಿಸಿದ್ದು, ಅದರ ಬೆಲೆ 10 ಕೋಟಿ ಇದೆ. ಕೋಟಿ ಕೋಟಿ ಬೆಲೆ ಬಾಳುವ ಮೂರು ಮರ್ಸಿಡೀಸ್ ಬೆಂಜ್ ಕಾರ್ ಒಡತಿ ಈ ಪಲ್ಲವಿ. ಪಲ್ಲವಿ ಬಳಿ ಕ್ಯಾಡಿಲಾಕ್ ಕಾರ್, ಮಹಿಂದ್ರಾ ಥಾರ್ ಇದ್ದು, 5.7 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವಿದೆ.
ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು
ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು