Tuesday, October 3, 2023

Latest Posts

ಹಾರಾಡುತ್ತಿದ್ದ ವಿಮಾನದ ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ..!- ತುರ್ತು ಭೂಸ್ಪರ್ಶ

- Advertisement -

ಭುವನೇಶ್ವರ್: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಏಕಾಏಕಿ ಗದ್ದಲವುಂಟು ಮಾಡಿ ವಿಮಾನದ ಬಾಗಿಲನ್ನೂ ತೆರೆಯಲೆತ್ನಿಸಿದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಹೈದರಾಬಾದ್ ನಿಂದ ಗುವಾಹಾಟಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್ ಲೈನ್ಸ್ ಫ್ಲೈಟ್ ನಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ. ಗುವಾಹಾಟಿಯತ್ತ ಸಾಗುತ್ತಿದ್ದ ವಿಮಾನದಲ್ಲಿದ್ದ 20ವರ್ಷದ ಪ್ರಯಾಣಿಕನೋರ್ವ ಏಕಾಏಕಿ ಗದ್ದಲವೆಬ್ಬಿಸಿದ್ದಾನೆ. ಕಾರಣವಿಲ್ಲದೆ ಗದ್ದಲ ಮಾಡುತ್ತಿದ್ದ ವ್ಯಕ್ತಿಯಿಂದ ಸಹ ಪ್ರಯಾಣಿಕರು ಗಲಿಬಿಲಿಗೊಂಡಿದ್ದಾರೆ. ಈ ವೇಳೆ ಆತ ವಿಮಾನದ ಬಾಗಿಲನ್ನೂ ತೆರೆಯಲೆತ್ನಿಸಿ ಆತಂಕ ಸೃಷ್ಟಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಭುವನೇಶ್ವರದ ಬಿಜು ಪಾಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವ ನಿರ್ಧಾರ ತೆರೆದುಕೊಳ್ಳಬೇಕಾಯ್ತು.

ಇನ್ನು ಗೊಂದಲ ಸೃಷ್ಟಿಸಿದ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಏರ್ ಪೋರ್ಟ್ ಪೊಲೀಸರಿಗೆ ಒಪ್ಪಿಸಲಾಯ್ತು. ಬಳಿಕ ತುರ್ತು ಭೂಸ್ಪರ್ಶ ಮಾಡಿದ್ದ ವಿಮಾನ ನಿಗದಿತ ಸ್ಥಳಕ್ಕೆ ತೆರಳಿತು.

ನೀವು ಮೊಬೈಲ್ ಜಾಸ್ತಿ ಬಳಸ್ತೀರಾ..? ಹಾಗಾದ್ರೆ ಈ ವಿಡಿಯೋ ಮಿಸ್ ಮಾಡದೇ ನೋಡಿ

https://www.youtube.com/watch?v=dLKs2vsS9pg
- Advertisement -

Latest Posts

Don't Miss