ಈ ದಿನ ದೇವರಿಗೆ ನಿಮಗಿಷ್ಟವಾದ ಪ್ರಸಾದವನ್ನ ನೀವು ನೈವೇದ್ಯವನ್ನಾಗಿ ಇಡಬಹುದು. ಹಾಗಾಗಿ ನಾವಿಂದು ಬಂಗಾಳದ ಟ್ರೆಡಿಷನಲ್ ಸ್ವೀಟ್ ಆಗಿರುವಂಥ, ದಸರಾ ಸಮಯದಲ್ಲಿ ಇದನ್ನೇ ದುರ್ಗೆಗೆ ಪ್ರಸಾದವಾಗಿ ಇಡುವಂಥ ರಸಗುಲ್ಲಾ ರೆಸಿಪಿ ನೀಡಲಿದ್ದೇವೆ.
ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..
ಬೇಕಾಗುವ ಸಾಮಗ್ರಿ : 2 ಲೀಟರ್ ಹಾಲು, ಒಂದು ನಿಂಬೆ ಹಣ್ಣು ಅಥವಾ 5 ಸ್ಪೂನ್ ವಿನೇಗರ್, ಚಿಟಿಕೆ ಏಲಕ್ಕಿ, ಎರಡು ಕಪ್ ಸಕ್ಕರೆ.
ಮೊದಲು ಹಾಲನ್ನು ಚೆನ್ನಾಗಿ ಕುದಿಸಿ. ಅದು ಸರಿಯಾಗಿ ಕೆನೆ ಬಂದ ಮೇಲೆ ಅದು ಕುದಿಯುವಾಗಲೇ, ಅದಕ್ಕೆ ನಿಂಬೆ ರಸ ಅಥವಾ ವಿನೇಗರ್ ಸೇರಿಸಿ, ಹಾಲನ್ನು ಒಡೆಯಿರಿ. ಈಗ ಒಡೆದ ಹಾಲನ್ನು ಒಂದು ಕಾಟನ್ ಬಟ್ಟೆಗೆ ಹಾಕಿ, ಅದರ ನೀರು ಹೋಗುವ ಹಾಗೆ, ಅದರ ಮೇಲೆ ಭಾರವಾದ ವಸ್ತುವನ್ನಿಡಿ. ಈಗ ಪನೀರ್ ರೀತಿ ಮಿಶ್ರಣ ಸಿಗುತ್ತದೆ.
ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..
ಈ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಬೇಕಾದಲ್ಲಿ ಮೈದಾವನ್ನ ಕೂಡ ಸೇರಿಸಬಹುದು. ಈ ಮಿಶ್ರಣದಿಂದ ಸಣ್ಣ ಸಣ್ಣ ಲಾಡು ತಯಾರಿಸಿಡಿ. ಈಗ ಸಕ್ಕರೆ, ಏಲಕ್ಕಿ ಮತ್ತು ನೀರು ಹಾಕಿ ಹದವಾದ ಪಾಕ ತಯಾರಿಸಿ, ಅದರಲ್ಲಿ ತಯಾರಿಸಿಟ್ಟ ಪನೀರ್ ಲಾಡುವನ್ನು ಹಾಕಿ. 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ನಂತರ ಪ್ಲೇಟ್ ಮುಚ್ಚಿಡಿ. ಚೆನ್ನಾಗಿ ಸಕ್ಕರೆ ಪಾಕ ಮಿಶ್ರತವಾದ ಮೇಲೆ, ನೈವೇದ್ಯಕ್ಕೆ ಬೇಕಾದ ರಸಗುಲ್ಲಾ ರೆಡಿ.