Thursday, December 12, 2024

Latest Posts

ರೆಸ್ಟೋರೆಂಟ್ ಸ್ಟೈಲ್ ಮ್ಯಾಂಗೋ ಮಸ್ತಾನಿ ರೆಸಿಪಿ..

- Advertisement -

ಇನ್ನೇನು ಮಾವಿನ ಹಣ್ಣಿನ ಸೀಸನ್ ಹತ್ತಿರ ಬರುತ್ತಿದೆ. ಮಾವಿನ ಹಣ್ಣಿನಿಂದ ತರಹೇವಾರಿ ತಿಂಡಿ, ಜ್ಯೂಸ್, ಐಸ್‌ಕ್ರೀಮ್ ರೆಡಿ ಮಾಡಬಹುದು. ಹಾಗಾಗಿ ನಾವು ರೆಸ್ಟೋರೆಂಟ್ ಸ್ಟೈಲ್ ಮ್ಯಾಂಗೋ ಮಸ್ತಾನಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾದ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಎರಡು ಮಾಡಿವನ ಹಣ್ಣು, 2ರಿಂದ 3 ಸ್ಕೂಪ್‌ ವೆನಿಲ್ಲಾ ಐಸ್‌ಕ್ರೀಮ್, 2 ಕಪ್ ಕಾಯಿಸಿ, ಫ್ರಿಜ್‌ನಲ್ಲಿರಿಸಿದ ಹಾಲು, ಒಂದು ಕಪ್ ಚಿಕ್ಕದಾಗಿ ಕತ್ತರಿಸಿದ ಡ್ರೈಫ್ರೂಟ್ಸ್, ಟೂಟಿ ಫ್ರೂಟಿ,

ಮಾಡುವ ವಿಧಾನ: ಮೊದಲು ಮಾವಿನ ಹಣ್ಣು, ವೆನಿಲ್ಲಾ ಐಸ್‌ಕ್ರೀಮ್, ಹಾಲು ಬ್ಲೆಂಡರ್‌ಗೆ ಹಾಕಿ ಬ್ಲೆಂಡ್ ಮಾಡಿ. ಥಿಕ್ ಮ್ಯಾಂಗೋ ಮಿಲ್ಕ್‌ ಶೇಕ್ ರೆಡಿಯಾಗತ್ತೆ. ಈಗ ಒಂದು ದೊಡ್ಡ ಗಾಜಿನ ಗ್ಲಾಸ್ ತೆಗೆದುಕೊಂಡು, ಅದರಲ್ಲಿ ಕೊಂಚ ಮಾವಿನ ಹಣ್ಣಿನ ಪೀಸ್‌ಗಳು, ಕೊಂಚ ಡ್ರೈಫ್ರೂಟ್ಸ್, ಟೂಟಿ ಫ್ರೂಟಿ, ಒಂದು ಸ್ಕೂಪ್ ವೆನಿಲ್ಲಾ ಐಸ್‌ಕ್ರೀಮ್, ಹಾಕಿ. ಇದರ ಮೇಲೆ ಮ್ಯಾಂಗೋ ಮಿಲ್ಕ್ ಶೇಕ್ ಹಾಕಿ. ಮತ್ತೆ ಅದರ ಮೇಲೆ ಐಸ್ಕ್ರೀಮ್, ಕಾಜು, ಬಾದಾಮ್, ಪಿಸ್ತಾ, ಟೂಟಿ ಫ್ರೂಟಿ ಹಾಕಿದ್ರೆ, ಮ್ಯಾಂಗೋ ಮಸ್ತಾನಿ ರೆಡಿ..

ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..

ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ..

- Advertisement -

Latest Posts

Don't Miss