International News: ರಷ್ಯಾದ ರಾಜಧಾನಿ ಮಾಸ್ಕೋದ ಮಾಲ್‌ನಲ್ಲಿಿ ನಡೆದ ಭಯೋತ್ಪಾದಕ ಕೃತ್ಯವನ್ನು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಖಂಡಿಸಿದ್ದಾರೆ. ಇದೊಂದು ಅನಾಗರಿಕ ಭಯೋತ್ಪಾದಕ ಕೃತ್ಯವೆಂದು ಅವರು ಹೇಳಿದ್ದಾರೆ.
ಈ ಕೃತ್ಯದಲ್ಲಿ ನೂರಾರು ಜನ ಮುಗ್ಧರು, ಶಾಂತಿಪ್ರಿಯರು ಸಾವಿಗೀಡಾಗಿದ್ದಾರೆ. ಮಾರ್ಚ್ 24ನ್ನು ರಾಷ್ಟ್ರೀಯ ಶೋಕ ದಿನವನ್ನಾಗಿ ಆಚರಿಸಲು ಘೋಷಿಸುತ್ತಿದ್ದೇನೆ. ತಪ್ಪಿತಸ್ಥರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಂಧನವಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಅಲ್ಲದೇ, ರಷ್ಯಾದಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಮೊದಲು ಈ ಕೃತ್ಯವನ್ನು ಉಕ್ರೇನ್ ಮಾಡಿದೆ ಎಂದು ರಷ್ಯಾ ಆರೋಪಿಸಿತ್ತು. ಈ ಕೃತ್ಯ ನಾವು ಮಾಡಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಉಕ್ರೇನ್ ಹೇಳಿತ್ತು. ಬಳಿಕ ಈ ಕೃತ್ಯ ನಾವು ಮಾಡಿದ್ದು ಎಂದು ಐಸಿಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಇನ್ನು ಕೆಲ ದಿನಗಳ ಹಿಂದೆ ಅಮೆರಿಕ ರಷ್ಯಾಗೆ ಭಯೋತ್ಪಾದಕ ಕೃತ್ಯದ ಬಗ್ಗೆ ಸೂಚನೆ ನೀಡಿ, ಎಚ್ಚರಿಸಿತ್ತು. ಆದರೂ ಅವಘಡ ನಡೆದು ಹೋಗಿದೆ.