Thursday, June 19, 2025

Latest Posts

ನವರಾತ್ರಿಯ ಏಳನೇಯ ದಿನದ ಪ್ರಸಾದ ರೆಸಿಪಿ: ಸರಸ್ವತಿಗೆ ಬಲು ಇಷ್ಟ ಇದು..

- Advertisement -

ನವರಾತ್ರಿಯ ಏಳನೇಯ ದಿನ ಕಾಲರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ದೇವಿಗೆ ಬೆಲ್ಲವನ್ನು  ನೈವೇದ್ಯದ ರೂಪದಲ್ಲಿ ಕೊಡಲಾಗುತ್ತದೆ. ಈ ದಿನ ಸರಸ್ವತಿ ಪೂಜೆಯನ್ನು ಮಾಡುವ ಕಾರಣಕ್ಕೆ, ಆಕೆಗೆ ಇಷ್ಟವಾದ ಸೌತೇಕಾಯಿಯ ಸಿಹಿ ದೋಸೆ ಅಥವಾ ಇಡ್ಲಿಯನ್ನು ನೈವೇದ್ಯದ ರೂಪದಲ್ಲಿ ಇಡಲಾಗುತ್ತದೆ. ಹಾಗಾಗಿ ನಾವಿಂದು ಸೌತೇಕಾಯಿಯ ಸಿಹಿ ದೋಸೆಯ ರೆಸಿಪಿಯನ್ನ ಹೇಳಲಿದ್ದೇವೆ.

ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..

ಬೇಕಾಗುವ ಸಾಮಗ್ರಿ- ಒಂದು ಕಾಲು ಕಪ್ ಅಕ್ಕಿ, ತುರಿದ ಸೌತೇಕಾಯಿ ಒಂದು ಕಪ್, ಅರ್ಧ ಕಪ್ ಬೆಲ್, ಅರ್ಧ ಕಪ್ ಕಾಯಿತುರಿ, ಕೊಂಚ ಉಪ್ಪು, ನೀರು, ದೋಸೆ ಮಾಡಲು ತುಪ್ಪ.

ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ರಾತ್ರಿ ನೆನೆಸಿಡಿ. ಮರುದಿನ ನೆನೆಸಿದ ಅಕ್ಕಿ, ತುರಿದ ಸೌತೇಕಾಯಿ, ಕಾಯಿ ತುರಿ, ಬೆಲ್ಲ, ಉಪ್ಪು ಹಾಕಿ, ದೋಸೆ ಹಿಟ್ಟು ತಯಾರಿಸಿಕೊಳ್ಳಿ. ಕಾವಲಿ ಬಿಸಿ ಮಾಡಿ, ದೋಸೆ ತಯಾರಿಸಿ, ತುಪ್ಪ ಸೇರಿಸಿ. ಈಗ ಸರಸ್ವತಿಗೆ ಇಷ್ಟವಾಗುವ ಸೌತೇಕಾಯಿ ಸಿಹಿ ದೋಸೆ ಸಿದ್ಧ.

- Advertisement -

Latest Posts

Don't Miss