Saturday, July 27, 2024

Latest Posts

ಗಜಮುಖನ ನೈವೇದ್ಯಕ್ಕಾಗಿ ಹಬೆ ಬರಿಸಿದ ಮೋದಕ ರೆಸಿಪಿ..

- Advertisement -

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಹಬೆ ಬರಿಸಿದ ಮೋದಕ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.

ಈ ಬಾರಿ ಗಣೇಶ ಚತುರ್ಥಿಗೆ ಮೋದಕವನ್ನು ಹೀಗೆ ತಯಾರಿಸಿ..

ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ತುಪ್ಪ, 1 ದೊಡ್ಡ ಕಪ್ ಕೊಬ್ಬರಿ ತುರಿ, 1 ಕಪ್ ಅಕ್ಕಿ ಹಿಟ್ಟು, 1 ಕಪ್ ಬೆಲ್ಲ, ಅರ್ಧ ಸ್ಪೂನ್ ಏಲಕ್ಕಿ ಪುಡಿ, ಚಿಟಿಕೆ ಉಪ್ಪು.

ಮಾಡುವ ವಿಧಾನ: ಮೊದಲು ಹೂರಣ ರೆಡಿ ಮಾಡಿಕೊಳ್ಳಿ. ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು ತುಪ್ಪ ಬಿಸಿ ಮಾಡಿ, ಅದಕ್ಕೆ ಕೊಬ್ಬರಿ ತುರಿ ಹಾಕಿ, ಹುರಿದುಕೊಳ್ಳಿ. ಈಗ ಅದಕ್ಕೆ ಬೆಲ್ಲ ಸೇರಿಸಿ, 5 ನಿಮಿಷ ಹುರಿಯಿರಿ. ನಂತರ ಗ್ಯಾಸ್ ಆಫ್ ಮಾಡಿ, ಏಲಕ್ಕಿ ಪುಡಿ ಸೇರಿಸಿದ್ರೆ, ಹೂರಣ ರೆಡಿ.

ವಾರಕ್ಕೊಮ್ಮೆಯಾದರೂ ರಾಜ್ಮಾ ತಿನ್ನಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಈಗ ಹಿಟ್ಟು ತಯಾರಿಸಬೇಕು. ಒಂದು ಗ್ಯಾಸ್ ಆನ್ ಮಾಡಿ, ಪ್ಯಾನ್‌ನಲ್ಲಿ ನೀರು ಬಿಸಿ ಮಾಡಿ, ನೂರು ಕೊಂಚ ಬಿಸಿಯಾದ ಬಳಿಕ ಅದಕ್ಕೆ ಚಿಟಿಕೆ ಉಪ್ಪು ಮತ್ತು ತುಪ್ಪ ಸೇರಿಸಿ, ಚೆನ್ನಾಗಿ ಕುದಿ ಬರಿಸಿ. ನೀರು ಕುದಿ ಬಂದ ಬಳಿಕ, ಅದಕ್ಕೆ ಅಕ್ಕಿ ಹಿಟ್ಟು ಸೇರಿಸಿ, ಗಂಟು ಬರದಂತೆ ಹಿಟ್ಟು ಕಲಿಸಿ. ಈ ಮಿಶ್ರಣ ಉಗುರು ಬೆಚ್ಚಗಾದ ಮೇಲೆ, ಕೈಗೆ ಎಣ್ಣೆ ಕಲಿಸಿ, ಹಿಟ್ಟು ಕಲಿಸಿ.

ಈಗ ಹಿಟ್ಟಿನಿಂದ ಗೋಲಾಕಾರದ ಪೂರಿಯ ರೀತಿ ಲಟ್ಟಿಸಿ, ಮೋದಕ ರೀತಿ ಶೇಪ್ ಮಾಡಿ, ಅದರಲ್ಲಿ ಕೊಬ್ಬರಿ ಹೂರಣದ ಮಿಶ್ರಣ ಸೇರಿಸಿ. ಈಗ ಹಬೆ ಬರಿಸಲು ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಿ, ನೀರು ಬಿಸಿಯಾದ ಬಳಿಕ ಪ್ಲೇಟ್ ಇರಿಸಿ, ಅದರ ಮೇಲೆ ಮೋದಕವನ್ನಿರಿಸಿ, 10 ನಿಮಿಷ ಮಮಂದ ಉರಿಯಲ್ಲಿ ಬೇಯಿಸಿದರೆ. ಹಬೆ ಬರಿಸಿದ ಮೋದಕ ರೆಡಿ. ಇದನ್ನು ನೈವೇದ್ಯ ಮಾಡಿ, ತುಪ್ಪದೊಂದಿಗೆ ಸವಿಯಿರಿ.

- Advertisement -

Latest Posts

Don't Miss