Health Tips: ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆ ಹಲವರನ್ನು ಕಾಡುತ್ತಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ಈ ಸಮಸ್ಯೆ ಕಾಡುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಹೇಗೆ ಆಗುತ್ತದೆ. ಇದಕ್ಕೆ ಪರಿಹಾರವೇನು..? ಈ ಎಲ್ಲ ಪ್ರಶ್ನೆಗೆ ಖ್ಯಾತ ವೈದ್ಯರಾದ ಆಂಜೀನಪ್ಪ ಉತ್ತರಿಸಿದ್ದಾರೆ.
ನಾವು ಸೇವಿಸಿದ ಆಹಾರ ಅನ್ನನಾಳದ ಮೂಲಕ ನಮ್ಮ ಹೊಟ್ಟೆಗೆ ತಲುಪುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಅಗಿದು ನುಂಗಬೇಕು. ಅಗಿದೇ ನುಂಗುವ ಆಹಾರ ನಮ್ಮ ಜಠರದಲ್ಲಿ ಗ್ರೈಂಡ್ ಆಗುತ್ತದೆ. ಇದು ಶಕ್ತಿಯುತವಾದ ದೇಹದ ಭಾಗವಾಗಿದ್ದು, ತಾಯಿ ಮಗುವಿಗೆ ಅನ್ನವನ್ನು ಹೇಗೆ ಅರಿದು ತಿನ್ನಿಸುತ್ತಾಳೋ, ಆ ರೀತಿ ನಾವು ಅರ್ಧಂಬರ್ಧ ಅಗಿದು ನುಂಗಿದ ಆಹಾರವನ್ನು, ಜಠರ ಅರಿಯುತ್ತದೆ.
ಹೀಗೆ ನಾವು ಅಗಿಯದೇ ತಿಂದ ಆಹಾರವನ್ನು ಜಠರ ಅರಿಯುವಾಗ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಗಲೇ ನಿಮಗೆ ಹೊಟ್ಟೆ ಉಬ್ಬರ ಬರುತ್ತದೆ. ಈ ಉಬ್ಬರ ಹೊರಬೇಕು ಅಂದ್ರೆ ನಮ್ಮ ದೇಹದಿಂದ ಆ ಗ್ಯಾಸ್ ಪಾಸ್ ಆಗಬೇಕು. ಹಾಗಾಗಬೇಕು ಎಂದರೆ, ಊಟವಾದ ಮೇಲೆ ನಾವು ವಾಕಿಂಗ್ ಮಾಡಬೇಕು. ಆಗ ತೇಗು ಬರುತ್ತದೆ. ಈ ಮೂಲಕ ಗ್ಯಾಸ್ ಪಾಸ್ ಆಗುತ್ತದೆ.
ಇನ್ನು ದೊಡ್ಡ ಕರುಳಿನಲ್ಲಿ ಗ್ಯಾಸ್ ತುಂಬಿಕೊಂಡಿರುತ್ತದೆ. ಈ ಗ್ಯಾಸ್ ಪಾಸ್ ಮಾಡದೇ ಹಾಗೆ ಬಿಟ್ಟರೆ, ಅಥವಾ ಗ್ಯಾಸ್ ಪಾಸ್ ಆಗದೇ ನಿಮಗೆ ತೊಂದರೆಯಾಗುತ್ತಿದ್ದರೆ, ನೀವು ವೈದ್ಯರ ಭೇಟಿ ಮಾಡುವುದು ಉತ್ತಮ. ಇಲ್ಲವಾಗಿದ್ದಲ್ಲಿ, ಇದು ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆ ತಂದಿಡುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
Dandruffನಿಂದ ತಲೆಬಿಸಿ ಆಗಿದ್ಯಾ? Tension ಬಿಡಿ, ಈ Tips Follow ಮಾಡಿ