Summer Special: ಮ್ಯಾಂಗೋ ಕುಲ್ಫಿ ರೆಸಿಪಿ

Recipe: ಮೊದಲೆಲ್ಲ ಐಸ್‌ಕ್ರೀಮ್, ಐಸ್‌ಕ್ಯಾಂಡಿ, ಕುಲ್ಫಿ ತಿನ್ನಬೇಕು ಅನ್ನಿಸಿದ್ರೆ, ಅಂಗಡಿಯಿಂದ ತಂದು ತಿನ್ನುತ್ತಿದ್ದೆವು. ಆದರೆ ಈಗ ಮಾರುಕಟ್ಟೆಯಲ್ಲಿ, ಮನೆಯಲ್ಲಿ ಸಿಗುವ ಕೆಲ ವಸ್ತುಗಳನ್ನು ಖರೀದಿಸಿ, ಮನೆಯಲ್ಲೇ ನಾವು ಐಸ್‌ಕ್ರೀಮ್, ಕುಲ್ಫಿ ತಯಾರಿಸಬಹುದು. ಇಂದು ನಾವು ಮನೆಯಲ್ಲೇ ಮ್ಯಾಂಗೋ ಕುಲ್ಫಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

3 ಕಪ್ ಗಟ್ಟಿ ಹಾಲನ್ನು ಪಾತ್ರೆಗೆ ಹಾಕಿ, ಕಾಯಿಸಲು ಇಡಿ. ಹಾಲು ಚೆನ್ನಾಗಿ ಕಾದ ಬಳಿಕ, ಮಂದ ಉರಿಯಲ್ಲಿ ಇಟ್ಟು, ಅದಕ್ಕೆ ಎರಡು ಟೇಬಲ್ ಸ್ಪೂನ್ ಸಕ್ಕರೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಹಾಕಿರುವ ಹಾಲು ಅರ್ಧ ಭಾಗವಾದ ಮೇಲೆ, ಗ್ಯಾಸ್ ಆಫ್ ಮಾಡಿ.

ಈಗ ಮಾವಿನ ಹಣ್ಣಿನ ಹೋಳನ್ನು ಬ್ಲೆಂಡರ್‌ಗೆ ಹಾಕಿ, ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಹಾಲು ತಣ್ಣಗಾದ ಬಳಿಕ, ಮಾವಿನ ಹಣ್ಣಿನ ಪೇಸ್ಟ್‌ನ್ನು ಹಾಕಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಡ್ರೈ ಫ್ರೂಟ್ಸ್, ಮತ್ತು ಮಾವಿನ ಹಣ್ಣಿನ ಹೋಳನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ ಕುಲ್ಫಿ ಅಚ್ಚಿನಲ್ಲಿ ಈ ಮಿಶ್ರಣ ಹಾಕಿ, 8 ಗಂಟೆಗಳ ಕಾಲ ಫ್ರೀಜರ್‌ನಲ್ಲಿರಿಸಿದರೆ, ಮ್ಯಾಂಗೋ ಕುಲ್ಫಿ ರೆಡಿ.

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 2

Summer Special: ಬಾಳೆಹಣ್ಣು, ಆ್ಯಪಲ್‌ ಮಿಲ್ಕ್ ಶೇಕ್ ರೆಸಿಪಿ

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 1

About The Author