Wednesday, April 22, 2026

Coalition Government karnataka

ಕಾಂಗ್ರೆಸ್ ಗೆ ಕೈ ಕೊಟ್ಟ ಶಾಸಕ- ಆನಂದ್ ಸಿಂಗ್ ರಾಜೀನಾಮೆ..!

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಇನ್ನೂ 4 ವರ್ಷ ಏನೂ ಆಗಲ್ಲ ಸುಭದ್ರವಾಗಿರುತ್ತೆ ಅಂತ ಹೇಳಿಕೊಂಡು ಓಡಾಡ್ತಿದ್ದ ಮೈತ್ರಿ ನಾಯಕರಿಗೆ ಕಾಂಗ್ರೆಸ್ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡೋ ಮೂಲಕ ದಂಗುಬಡಿಸಿದ್ದಾರೆ. ಬಳ್ಳಾರಿಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಮೈತ್ರಿ ಸರ್ಕಾರದ ಶಾಸಕರು ಸಾಮೂಹಿಕ...

‘ಜನ ನಿಮ್ಮನ್ನ ಯಾವ ಗುಂಡಿಯಲ್ಲಿ ಮುಚ್ಚುತ್ತಾರೋ ಗೊತ್ತಿಲ್ಲ’- ಮೈತ್ರಿ ವಿರುದ್ಧ ಈಶ್ವರಪ್ಪ ಕಿಡಿ

ಬಾಗಲಕೋಟೆ: ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೇ ನಿರ್ಲಕ್ಷ್ಯವಹಿಸಲಾಗುತ್ತಿದೆ ಅಂತ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿರೋ ಬಿಜೆಪಿ ಶಾಸಕ ಈಶ್ವರಪ್ಪ, ಜನ ನಿಮ್ಮನ್ನು ಯಾವ ಗುಂಡಿಯಲ್ಲಿ ಮುಚ್ಚುತ್ತಾರೋ ಗೊತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಶಾಸಕ ಕೆ.ಎಸ್ ಈಶ್ವರಪ್ಪ, ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಯತ್ತ ಜಿಲ್ಲಾ ಉಸ್ತುವಾರಿ ಸಚಿವರೂ ಗಮನ ಹರಿಸುತ್ತಿಲ್ಲ...

‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋ ಪ್ರಶ್ನೆಯೇ ಇಲ್ಲ’- ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೆ ಒಳ್ಳೆಯದ್ದು ಅನ್ನೋ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋ ಪ್ರಶ್ನೆಯೇ ಇಲ್ಲ. ಕೆಲವರಿಗೆ ದಿವ್ಯಜ್ಞಾನ ಇರುತ್ತೆ ಆದ್ರೆ ನಮಗೆ ಆ ಜ್ಞಾನವಿಲ್ಲ ಅಂತ ಜೆಡಿಎಸ್ ನ ಬಸವರಾಜ ಹೊರಟ್ಟಿಗೆ...

‘ರಾಜೀನಾಮೆ ಕೊಟ್ರೆ ಸಿಎಂ ಕೂಡ ಮಾತುಕೇಳ್ತಾರೆ, ಅವರಪ್ಪಾನೂ ಕೇಳ್ತಾರೆ’- ಸಿಎಂ ವಿರುದ್ಧ ಸ್ವಾಮೀಜಿ ಕಿಡಿ

ಬೆಂಗಳೂರು: ರಾಜೀನಾಮೆ ಕೊಟ್ಟು ಸರ್ಕಾರವನ್ನ ಉರುಳಿಸಿ ಅಂತ ವಾಲ್ಮೀಕಿ ಸಮಾಜದ ಪ್ರಸನ್ನಾನನಂದ ಪುರಿ  ಸ್ವಾಮೀಜಿ ಹೇಳಿಕೆ ನೀಡೋ ಮೂಲಕ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತಾಗಿ ಇಂದು ವಿಧಾನಸೌಧದೆರುರು ನಡೆಯುತ್ತಿರೋ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಂಗ್ರೆಸ್ ನ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಉರುಳಿಸಿ.ನನ್ನ ಕೈಗೆ...

‘ಹೋಗಿ ಅಂತ ಹೇಳೋಕೆ ಯಾರಿಗೂ ಅಧಿಕಾರವಿಲ್ಲ’- ‘ಹಳ್ಳಿ ಹಕ್ಕಿ’ಗೆ ಕುಟುಕಿದ ದೇವೇಗೌಡ

ಮೈಸೂರು: ಮೈತ್ರಿ ಸರ್ಕಾರದ ಕುರಿತಾಗಿ ಹೇಳಿಕೆ ನೀಡಿದ್ದ ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಜಿ.ಟಿ ದೇವೇಗೌಡ ಪ್ರತಿಕ್ರಿಸಿದ್ದಾರೆ. ಹೋಗಿ ಅಂತ ಹೇಳೋದಕ್ಕೆ ಯಾರಿಗೂ ಅಧಿಕಾರವಿಲ್ಲ ಅಂತ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ನಾಲ್ಕು ವರ್ಷ ಕುಮಾರಸ್ವಾಮಿಯವರೇ ಸಿಎಂ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಸುಭದ್ರ ಅಂತ ಕುಮಾರಸ್ವಾಮಿ ಕೂಡ ಭರವಸೆಯಿಂದಿದ್ದಾರೆ. ಹೀಗಿರುವಾಗ ಕಾಂಗ್ರೆಸ್...

‘ದೇವೇಗೌಡ್ರು ಸೋತರೆ ಚುನಾವಣೆ ಬರುತ್ತಾ..?’- ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ

ಚಾಮರಾಜನಗರ: ಮಧ್ಯಂತರ ಚುನಾವಣೆ ಎದುರಾಗೋದ್ರಲ್ಲಿ ಸಂಶಯವೇ ಇಲ್ಲ ಅಂತ ಹೇಳಿದ್ದ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರಿಗೆ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಸಂಸದ ಶ್ರೀನಿವಾಸಪ್ರಸಾದ್, ದೇವೇಗೌಡರು ಗೆದ್ದಾರ ಒಂದು ರೀತಿ, ಸೋತಾಗ ಮತ್ತೊಂದು ರೀತಿ ಮಾತನಾಡ್ತಾರೆ. ದೇವೇಗೌಡ ಮತ್ತು ಮಗ ಕುಮಾರಸ್ವಾಮಿ ಏನ್ ಹೇಳ್ತಾರೋ ಗೊತ್ತಾಗಲ್ಲ. ಅಷ್ಟರ...

‘ದೇವೇಗೌಡ್ರು ಹೇಗೆಬೇಕಾದ್ರೂ ಮಾತು ಬದಲಿಸ್ತಾರೆ’- ವೀರಪ್ಪ ಮೊಯ್ಲಿ

ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗೋದ್ರಲ್ಲಿ ಸಂಶಯವೇ ಇಲ್ಲ ಎಂದಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೋಯ್ಲಿ ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಮೊಯ್ಲಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಹೋಗಲು ಯಾವ ಶಾಸಕರೂ ತಯಾರಿಲ್ಲ. ಅಲ್ಲದೆ ಮತ್ತೆ ಚುನಾವಣೆ ಎದುರಾದರೆ ಜನರು ಕೂಡ ಸಹಿಸಿಕೊಳ್ಳೋದಿಲ್ಲ...

ನಿಗಮ ಮಂಡಳಿಯ 600 ಸದಸ್ಯರ ನೇಮಕಕ್ಕೆ ತೀರ್ಮಾನ

ಬೆಂಗಳೂರು: ರಾಜ್ಯದ 32 ನಿಗಮ ಮಂಡಳಿಗಳ ಸದಸ್ಯರ ನೇಮಕಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದ್ದು, ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಅವಕಾಶ ನೀಡುವ ಕುರಿತು ತೀರ್ಮಾನಿಸಲಾಗಿದೆ. ರಾಜ್ಯದ 32 ನಿಗಮ ಮಂಡಳಿಗಳ ಸುಮಾರು 600 ಸದಸ್ಯರನ್ನು ನೇಮಿಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. 600 ಸ್ಥಾನಗಳಲ್ಲಿ 300 ಕಾಂಗ್ರೆಸ್ ಹಾಗೂ 300 ಜೆಡಿಎಸ್ ಸದಸ್ಯರನ್ನು ನೇಮಿಸಿಕೊಳ್ಳಲಾಗುತ್ತದೆ....

‘ನಿಮ್ಮ ತೀಟೆ ತೀರಿಸ್ಕೊಳ್ಳೋಕೆ ಮತ್ತೆ ಚುನಾವಣೆ ಮಾಡ್ಬೇಕಾ?- ಯೋಗ್ಯತೆ ಇಲ್ದಿದ್ರೆ ಹೋಗಿ,- ಬಿಎಸ್ವೈ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಬಹುದೆನ್ನೋ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತೀಟೆ ತೀರಿಸಿಕೊಳ್ಳೋದಕ್ಕೆ ಮತ್ತೆ ರಾಜ್ಯದಲ್ಲಿ ಚುನಾವಣೆ ಮಾಡ್ಬೇಕಾ ಅಂತ ಪ್ರಶ್ನಿಸೋ ಮೂಲಕ ಮೈತ್ರಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಅಂತ ಹೇಳೋ ಮೂಲಕ ಸರ್ಕಾರ ಅಸ್ಥಿರವಾಗಿದೆ ಅಂತ ಪರೋಕ್ಷವಾಗಿ...

ಸದ್ದಿಲ್ಲದೆ ನಡೀತಿದೆ ಆಪರೇಷನ್ ಕಮಲ- ಸಿಎಂ ಕುಮಾರಸ್ವಾಮಿ ಹೊಸ ಬಾಂಬ್..!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಮೈತ್ರಿ ಶಾಸಕರಿಗೆ 10 ಕೋಟಿ ನೀಡುವ ಆಮಿಷವೊಡ್ಡಿ ಸೆಳೆಯಲು ಡೀಲ್ ಮಾಡ್ತಿದೆ ಅಂತ ಸಿಎಂ ಕುಮಾರಸ್ವಾಮಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ರಾತ್ರಿ 11 ಗಂಟೆಗೆ ಬಿಜೆಪಿಯ ಪ್ರಮುಖ ಮುಖಂಡರು ಮೈತ್ರಿ ಶಾಸಕರಿಗೆ ಕರೆ ಮಾಡಿ ಈಗಾಗಲೇ ಮೈತ್ರಿ ಪಕ್ಷದ 10...
- Advertisement -spot_img

Latest News

ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ: ಟ್ರಾಫಿಕ್‌ನಿಂದ ಬೇಸತ್ತು ಸಚಿವರಿಗೆ ತರಾಟೆ ತೆಗೆದುಕೊಂಡ ಮಹಿಳೆ

Mumbai Political News: ಬಿಜೆಪಿ ಪ್ರತಿಭಟನೆ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಚಲಿಸಲು ಅಡೆತಡೆಯಾದ ಪರಿಣಾಮ ಓರ್ವ ಯುವತಿ, ಸಚಿವರನ್ನೇ ಗೆಟ್ ಔಟ್ ಫ್ರಂ...
- Advertisement -spot_img