Tuesday, May 26, 2026

karnatakatv.net

ಮಾರಮ್ಮನಿಗೆ 11 ರೂ. ಹರಕೆ ಸಲ್ಲಿಸಿದ ಕೇಂದ್ರ ಸಚಿವ ಡಿವಿಎಸ್..!!

ನೆಲಮಂಗಲ:  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾಗಿರೋ ಸದಾನಂದಗೌಡ ಮಾರಮ್ಮ ದೇವಿಗೆ 11 ರೂಪಾಯಿ ಹರಕೆ ತೀರಿಸಿದ್ದಾರೆ. ಬೆಂಗಳೂರು ಹೊರವಲಯದ ತಾವರೆಕೆರೆಯ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೇವಿಗೆ ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ರು. ತಾವು ಗೆದ್ದರೆ 11 ರೂಪಾಯಿ ಕಾಣಿಕೆ ನೀಡೋದಾಗಿ ಹರಕೆ ಮಾಡಿಕೊಂಡು ವಿಶೇಷ...

2047ರವರೆಗೂ ಕೇಂದ್ರದಲ್ಲಿ ಬಿಜೆಪಿ ಆಡಳಿತ- ರಾಮ್ ಮಾಧವ್ ಭವಿಷ್ಯ

ತ್ರಿಪುರಾ: 2047ರ ಸ್ವಾತಂತ್ರ್ಯ ಶತಮಾನೋತ್ಸವದವರೆಗೂ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭವಿಷ್ಯ ನುಡಿದಿದ್ದಾರೆ. ತ್ರಿಪುರಾದಲ್ಲಿ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸ್ವತಂತ್ರ್ಯ ಬಂದ ನಂತರದಲ್ಲಿ , ಅಂದರೆ 1950ಯಿಂದ 1977 ವರೆಗೂ ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ ದಾಖಲೆ ಕಾಂಗ್ರೆಸ್ ಪಕ್ಷದ್ದು....

ಮನೆ ಡ್ಯಾಮೇಜ್ ಮಾಡಿದ್ದಾರಂತೆ ಯಶ್- ಮನೆ ಮಾಲೀಕ ಆರೋಪ…!?

ಬೆಂಗಳೂರು: ಬಾಡಿಗೆ ಮನೆಯನ್ನು ಮಾಲೀಕರಿಗೆ ಹಸ್ತಾಂತರಿಸಿದ ಮೇಲೂ ನಟ ರಾಕಿಂಗ್ ಸ್ಟಾರ್ ಯಶ್ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ಮನೆ ಖಾಲಿ ಮಾಡುವಾಗ ಯಶ್ ಮನೆಯ ಟ್ಯೂಬ್ ಲೈಟ್, ಬಾತ್ ರೂಂ ಫಿಟ್ಟಿಂಗ್ಸ್, ವಾರ್ಡ್ ರೋಬ್ ಬಾಗಿಲು, ಸ್ವಿಚ್ ಗಳು ಸೇರಿದಂತೆ ಇತರೆ ವಸ್ತುಗಳು ಡ್ಯಾಮೇಜ್ ಆಗಿವೆ ಅಂತ ಮನೆ ಮಾಲೀಕ ಆರೋಪಿಸುತ್ತಿದ್ದಾರೆ.  ಇನ್ನು ಮನೆ ಡ್ಯಾಮೇಜ್...

ಇಬ್ಬರು ಪಕ್ಷೇತರರಿಗೆ ದೋಸ್ತಿ ಸರ್ಕಾರ ಮಣೆ- ಸಂಪುಟ ವಿಸ್ತರಣೆ ಫಿಕ್ಸ್…!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತವಾಗಿದ್ದು ಈ ಬಗ್ಗೆ ಸಿಎಂ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಇಬ್ಬರು ಪಕ್ಷೇತರರನ್ನು ತಮ್ಮತ್ತ ಸೆಳೆಯಲು ಸಿಎಂ ಸಫಲರಾಗಿದ್ದಾರೆ. ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳೋ ನಿಟ್ಟಿನಲ್ಲಿ ಪಕ್ಷೇತರ ಶಾಸಕರನ್ನು ಸೆಳೆಯೋದು ಮೈತ್ರಿ ನಾಯಕರಿಗೆ ಬಹುಮುಖ್ಯವಾದ ಕೆಲಸ. ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ರೆ ಮಾತ್ರ ಈ ಇಬ್ಬರೂ...

‘ನಿಮಗೆ ಬೇಜಾರಾದ್ರೆ ರಾಜೀನಾಮೆ ಕೊಡಿ’- ಸಂಸದೆ ಸುಮಲತಾ ಟಾಂಗ್…!

ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಮನವಿ ಮಾಡಿಕೊಂಡ ಜನರ ಮೇಲೆ ಸಚಿವ ತಮ್ಮಣ್ಣ ಎಗರಾಡಿದ್ದಕ್ಕೆ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ತಮ್ಮಣ್ಣ ಜನರ ಮೇಲೆ ಅಕ್ರೋಶ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದೆ ಸುಮಲತಾ, ನಿಮಗೆ ಬೇಜಾರಿದ್ರೆ ರಾಜಿನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ. ನಿಮ್ಮ ಹೇಳಿಕೆಯೇ ಸೋಲಿಗೆ ಕಾರಣವಾಗಿರೋದನ್ನ...

ಮತ ಹಾಕದ್ದಕ್ಕೆ ಜನರ ಮೇಲೆ ಎಗರಿಬಿದ್ದ ಸಚಿವ…!

ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಕೇಳಿದ್ದಕ್ಕೆ ಗ್ರಾಮಸ್ಥರನ್ನೇ ಸಚಿವ ಡಿ.ಸಿ ತಮ್ಮಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಮದ್ದೂರಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರಿನ ಮದ್ದೂರಮ್ಮ ಕೆರೆಯಲ್ಲಿ ಬಹುಗ್ರಾಮ ಕುಡಿಯೋ ನೀರಿನ ಯೋಜನೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ವೇಳೆ ಗ್ರಾಮಸ್ಥರನ್ನು ಡಿ.ಸಿ ತಮ್ಮಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಉದ್ಘಾಟನೆ ವೇಳೆ ಅಲ್ಲಿ ಸೇರಿದ್ದ ಗ್ರಾಮಸ್ಥರು ರಸ್ತೆ ಮತ್ತು...

‘ಸೋತಿದ್ರೂ ನಾನು ಸುಮ್ನೆ ಕೂತಿಲ್ಲ’- ಎಚ್ಡಿಡಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದು ನಾನು ಮತ್ತೆ ಮಣ್ಣಿನಿಂದ ಎದ್ದು ಬರೋ ಶಕ್ತಿ ಹೊಂದಿರುವೆ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ, ನಾನು ಸುಖದ ಸುಪ್ಪತ್ತಿಗೆಯಲ್ಲಿ ನಾನು ಬಿಳಿ ಕನ್ನಡಕವೂ ಹಾಕಿಲ್ಲ, ಕರಿ ಕನ್ನಡಕವೂ ಹಾಕಿಲ್ಲ. ಪಕ್ಷಕ್ಕೆ ನಿಷ್ಠೆಯಿಂದಿರಿ ದ್ರೋಹ ಬಗೆಯಬೇಡಿ ಲಿಂಗಾಯತ, ಕುರುಬ, ಒಕ್ಕಲಿಗ...

ಮೈಸೂರು-ಬೆಂಗಳೂರು ವಿಮಾನ ಸಂಚಾರ ಪ್ರಾರಂಭ..!

ಮೈಸೂರು:  ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಲಾಗಿದೆ. ಇಂದು ವಿಮಾನ ಸಂಚಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನ ಸಂಚಾರ ಯೋಜನೆ ಉಡಾನ್ 3ರ ಯೋಜನೆಯಡಿಯಲ್ಲಿ ಮೈಸೂರಿನಿಂದ ಫ್ಲೈಟ್ ಸೇಲೆ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 11.145ಕ್ಕೆ ಮೈಸೂರಿಗೆ ಆಗಮಿಸೋ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯ...

ಕೊನೆಗೂ ಲಕ್ಕಿ ಮನೆ ಖಾಲಿ ಮಾಡಿದ ರಾಕಿ ಭಾಯ್…!

ಬೆಂಗಳೂರು: ಕೊನೆಗೂ ರಾಕಿಂಗ್ ಸ್ಟಾರ್ ಯಶ್ ತಮ್ಮ ಅದೃಷ್ಟದ ಮನೆಯನ್ನು ಖಾಲಿ ಮಾಡಿದ್ದಾರೆ. ಇಂದು ಅಧಿಕೃತವಾಗಿ ತಮ್ಮ ಮನೆಯ ಕೀಲಿಯನ್ನು ಮಾಲೀಕರಿಗೆ ಯಶ್ ಒಪ್ಪಿಸಿದ್ದು ವಿವಾದಕ್ಕೆ ತೆರೆ ಬಿದ್ದಿದೆ. 2ತಿಂಗಳ  ಬಾಕಿ ಬಾಡಿಗೆ 80ಸಾವಿರ ರೂಪಾಯಿ ಡಿಡಿಯನ್ನೂ ಮನೆ ಮಾಲೀಕರಿಗೆ ಪಾವತಿಸಿದ್ದಾರೆ. 2013ರರಿಂದಲೂ ಮನೆ ಬಾಡಿಗೆ ವಿಚಾರವಾಗಿ ಕಾನೂನು ಹೋರಾಟ ನಡೆಸಿದ್ದ ಮನೆ ಮಾಲೀಕರು ಕೊನೆಗೂ...

ಬಳ್ಳಾರಿಗೆ ಕಾಲಿಡಲು ಜನಾರ್ದನ ರೆಡ್ಡಿಗೆ ಗ್ರೀನ್ ಸಿಗ್ನಲ್..!

ಬಳ್ಳಾರಿ: ಗಣಿ ಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಮ್ಮ ಮಾವನ ಅನಾರೋಗ್ಯ ಕಾರಣ ಕೊಟ್ಟು ಬಳ್ಳಾರಿಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ರೆಡ್ಡಿಗೆ ಇದೀಗ ಬಳ್ಳಾರಿ ಪ್ರವೇಶಾವಕಾಶ ಸಿಕ್ಕಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ರೂ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img