ನವದೆಹಲಿ: ಬಾಲಾಕೋಟ್ ನಲ್ಲಿ ಉಗ್ರರ ಮೇಲೆ ಅಟ್ಯಾಕ್ ಮಾಡಿ ಹುತಾತ್ಮ ಸಿಆರ್ ಪಿಎಫ್ ಯೋಧರ ಆತ್ಮಕ್ಕೆ ಪ್ರಧಾನಿ ಮೋದಿ ಶಾಂತಿ ದೊರಕಿಸಿದ್ದು ಇತಿಹಾಸದ ಪುಟಗಳಲ್ಲಿ ಬರೆಯಲಾಗಿದೆ. ಸಿಆರ್ ಪಿಎಫ್ ಮೇಲೆ ದಾಳಿ ನಡೆಸಿದ್ದ ಉಗ್ರರನ್ನು ನುಗ್ಗಿ ನುಗ್ಗಿ ಮಟ್ಟಹಾಕುತ್ತೇವೆ ಅಂತ ಹೇಳಿದಂತೆಯೇ ನರೇಂದ್ರ ಮೋದಿ ಮಾಡಿ ತೋರಿಸಿದ್ದರು. ಆದ್ರೆ ಮೋದಿ ಮಾಡಿದ್ದ ಈ ಅಚಲ...
ತಿರುವನಂತಪುರ: ತ್ರಿಶ್ಶೂರ್ ನ ಗುರುವಾಯೂರು ಶ್ರೀ
ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ತಾವರೆ ಹೂವಿನ ತುಲಾಭಾರ ಸೇವೆ
ಸಲ್ಲಿಸಿದರು.
ಇಂದು ಬೆಳಗ್ಗೆ ಶ್ರೀಕೃಷ್ಣ ದೇಗುಲಕ್ಕೆ ಬಂದ ನರೇಂದ್ರ ಮೋದಿ ಪೂಜೆ ಸಲ್ಲಿಸಿ ಬಳಿಕ ದೇವರಿಗೆ ತಮ್ಮ ಪಕ್ಷದ ಚಿಹ್ನೆಯಾದ ಕಮಲದ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದ್ರು. ತುಲಾಭಾರ ಸೇವೆಗೆಂದು ಬಳಸಲಾದ ತಾವರೆ ಹೂವುಗಳನ್ನು ತಮಿಳುನಾಡಿನ...
ತ್ರಿಪುರಾ: 2047ರ ಸ್ವಾತಂತ್ರ್ಯ ಶತಮಾನೋತ್ಸವದವರೆಗೂ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭವಿಷ್ಯ ನುಡಿದಿದ್ದಾರೆ.
ತ್ರಿಪುರಾದಲ್ಲಿ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸ್ವತಂತ್ರ್ಯ ಬಂದ ನಂತರದಲ್ಲಿ , ಅಂದರೆ
1950ಯಿಂದ 1977 ವರೆಗೂ ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ ದಾಖಲೆ ಕಾಂಗ್ರೆಸ್ ಪಕ್ಷದ್ದು....
ಮೈಸೂರು: ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಲಾಗಿದೆ. ಇಂದು ವಿಮಾನ ಸಂಚಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನ ಸಂಚಾರ ಯೋಜನೆ ಉಡಾನ್ 3ರ ಯೋಜನೆಯಡಿಯಲ್ಲಿ ಮೈಸೂರಿನಿಂದ ಫ್ಲೈಟ್ ಸೇಲೆ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 11.145ಕ್ಕೆ ಮೈಸೂರಿಗೆ ಆಗಮಿಸೋ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯ...
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ
ಮರಕೋತಿ ಆಡೋದಕ್ಕೆ ಸರಿ ಅಂತ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಚುನಾವಣೆ ವೇಳೆ ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕಂತೆ ಮಾತನಾಡದೆ, ಪ್ರಧಾನಿ ಮೋದಿಯವರಿಂದ ಹಿಡಿದು ಯಡಿಯೂರಪ್ಪರವರ ವರೆಗೂ ಏಕಪಾತ್ರಾಭಿನಯ ಮಾಡಿ ಟೀಕಿಸಿದ್ರು. ಸಿದ್ದರಾಮಯ್ಯ ರಾಹುಲ್ ಗಾಂಧಿಯವರ ಭಟ್ಟಂಗಿ ರೀತಿ ವರ್ತಿಸಿದ್ರು....
ಬೆಂಗಳೂರು:ಕಾಂಗ್ರೆಸ್ ಮುಖಂಡರಿಗೆ ಛೀಮಾರಿ ಹಾಕಿ ಬಿಜೆಪಿ ಸೇರೋ ಬಗ್ಗೆ ಸುಳಿವು ನೀಡಿದ್ದ ಕಾಂಗ್ರೆಸ್
ನ ಹಿರಿಯ ಮುಖಂಡ ರೋಷನ್ ಬೇಗ್ ಇದೀಗ ಮತ್ತೆ ಮೋದಿವರನ್ನ ಹೊಗಳಿದ್ದಾರೆ.
ಕೇಂದ್ರ ಸಚಿವರಾಗಿ
ಪ್ರಮಾಣವಚನ ಸ್ವೀಕಾರ ಮಾಡಿದ ಇಬ್ಬರು ಸಚಿವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸೋ ಬೇಗ್ ಟ್ವೀಟ್ ಮೂಲಕ
ಶುಭ ಕೋರಿದ್ದಾರೆ.
ಡಾ.ಜೈಶಂಕರ್ ಮತ್ತು ಹರ್ದೀಪ್
ಪುರಿಯವರಂತಹವರನ್ನು ಮೋದಿ ಸಂಪುಟದಲ್ಲಿ ನೋಡದಕ್ಕೆ ನನಗೆ ಖುಷಿಯಾಗುತ್ತದೆ....
ನವದೆಹಲಿ: 2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಪ್ರಮಾಣವಚನ ಸ್ವೀಕರಿಸಿದ್ರು. ನವದೆಹಲಿಯ ರಾಷ್ಟ್ರಪತಿ ಭವನದೆದುರಿನ ಫೋರ್ ಕೋರ್ಟ್ ನಲ್ಲಿ ಸಜ್ಜಾಗಿದ್ದ ಬೃಹತ್ ವೇದಿಕೆಯಲ್ಲಿ ಮೋದಿ ಸೇರಿದಂತೆ 58 ಮಂದಿ ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕರಿಸಿದ್ರು.
ಇವತ್ತು ನವದೆಹಲಿಯ ರಾಷ್ಟ್ರಪತಿ ಭವನದೆದುರು ಹಬ್ಬದ ಸಂಭ್ರಮ. ಎಲ್ಲೆಡೆ ಮೋದಿ ಮೋದಿ ಎಂಬ ಕೂಗು ಕವಿಗಡಚಿಕ್ಕುತ್ತಿತ್ತು. ಸರಿಯಾಗಿ...
ನವದೆಹಲಿ: ನರೇಂದ್ರ ಮೋದಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ಇದರ ಜೊತೆಗೆ ಕೇಂದ್ರ ಸಂಪುಟಕ್ಕೆ ಸಚಿವರನ್ನೂ ಆಯ್ಕೆ ಮಾಡಲಾಗಿದ್ದು, ರಾಜ್ಯದ 4 ಮಂತಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಘಟಾನುಘಟಿಗಳಿಗೆ ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ಸ್ಥಾನ ನೀಡಿದೆ. ಕಳೆದ ಬಾರಿ ಸಚಿವ ಸಂಪುಟದಲ್ಲಿದ್ದ ಶೇ.70 ರಷ್ಚು ಮಂದಿಗೆ ಈ ಬಾರಿಯೂ...
ಮೈತ್ರಿ ಸರ್ಕಾರ
ಉರುಳಿಸೋದಕ್ಕೆ ಬಿಜೆಪಿ ಮೆಗಾ
ಸ್ಕೆಚ್ ಹಾಕಿದೆ. ಈಗಾಗಲೇ ಆಪರೇಷನ್ ಕಮಲಕ್ಕೆ
ದೆಹಲಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಆಪರೇಷನ್ ಕಮಲಕ್ಕೆ ಡೇಟ್ ಫಿಕ್ಸ್ ಆಗಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಲಹೆ ನೀಡಿದ್ದು, ಸದ್ಯ ಸುಮ್ಮನಿರಿ ದೋಸ್ತಿ ಸರ್ಕಾರ ತಾನಾಗಿಯೇ ಪತನವಾಗುತ್ತೆ, ಒಂದು ವೇಳೆ ಮೈತ್ರಿ ಸರ್ಕಾರ ಪತನವಾಗದಿದ್ದಲ್ಲಿ ಒಂದು ತಿಂಗಳ ಬಳಿಕ...
ನವದೆಹಲಿ: ಚುನಾವಣೋತ್ತರ ಸಮೀಕ್ಷಾ ವರದಿಗಳಲ್ಲಿ ಬಿಜೆಪಿ ಬಹುಮತ ಗಳಿಸಿದ್ದೇ ತಡ ಬಿಜೆಪಿ ಕಾರ್ಯಕರ್ತರಲ್ಲಿ ಅದೇನೋ ಉತ್ಸಾಹ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಹೊರತಾಗಿಲ್ಲ. ಸಮೀಕ್ಷಾ ವರದಿಯಿಂದ ಖುಷಿಯಾಗಿರೋ ಅಮಿತ್ ಶಾ ನಾಳೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುಂಚೆಯೇ ವಿಜಯೋತ್ಸವ ಆಚರಿಸುವ ರೀತಿ ಅಮಿತ್ ಶಾ ಪಾರ್ಟಿ ಆಯೋಜಿಸಿದ್ದಾರೆ....