Wednesday, November 29, 2023

Latest Posts

ಸೂಪರ್ ಅಭಿಮಾನಿಗೆ ಗೌರವ ಸಲ್ಲಿಸಿದ ಕೊಹ್ಲಿ..!

- Advertisement -

ಇಂಗ್ಲೆಂಡ್: ನಿನ್ನೆಯ ಬಂಗ್ಲಾ-ಟೀಂ ಇಂಡಿಯಾ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ತಂಡವನ್ನು ಅತ್ಯಂತ ಹುಮ್ಮಸ್ಸಿನಿಂದ ಪ್ರೋತ್ಸಾಹಿಸಿದ್ದ ಹಿರಿಯ ಅಭಿಮಾನಿಯೊಬ್ಬರಿಗೆ ಕ್ಯಾಪ್ಟರ್ ವಿರಾಟ್ ಕೊಹ್ಲಿ ಗೌರವ ಸಲ್ಲಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಸೆಣಸಾಟದಲ್ಲಿ ಭಾರತ ತಂಡ ಪ್ರತಿಯೊಂದು ರನ್ ಬಾರಿಸಿದ್ರೂ ಕೂಡಲೇ ಸಂತಸದಿಂದ ಕುಣಿದಾಡಿದ್ದ 87 ವರ್ಷದ ಫ್ಯಾನ್ ಚಾರುಲತಾ ಎಂಬುವರನ್ನು ಕೊಹ್ಲಿ ಹಾಡಿಹೊಗಳಿದ್ದಾರೆ. ಪ್ರತಿಯೊಂದೂ ರನ್ ಬಾರಿಸಿದ್ರೂ ಹುಮ್ಮಸ್ಸಿನಿಂದ ಟೀಂ ಇಂಡಿಯಾವನ್ನು ಚೀರ್ ಅಪ್ ಮಾಡಿದ್ದ ಚಾರುಲತಾ ನಿನ್ನೆಯ ಮ್ಯಾಚ್ ನ ಕೇಂದ್ರ ಬಿಂದುವಾಗಿದ್ರು. ವಯಸ್ಸಾಗಿದ್ರೇನಂತೆ ಟೀಂ ಇಂಡಿಯಾ ಮೇಲಿನ ತಮ್ಮ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಅನ್ನೋದನ್ನ ಚಾರುಲತಾ ತೋರ್ಪಡಿಸಿದ್ರು.

ಇನ್ನು ಮ್ಯಾಚ್ ಮುಗಿದ ಬಳಿಕ ಚಾರುಲತಾರನ್ನು ಭೇಟಿ ಮಾಡಿದ ಕ್ಯಾಪ್ಟನ್ ಕೊಹ್ಲಿ ಅವರ ಆಶೀರ್ವಾದ ಪಡೆದುಕೊಂಡು ಸ್ವಲ್ಪಹೊತ್ತು ಮಾತನಾಡಿದ್ರು. ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರೋ ಕೊಹ್ಲಿ, ಕ್ರಿಕೆಟ್ ಜೀವನದಲ್ಲಿ ನಾನು ಕಂಡ ಅತ್ಯುತ್ಸಾಹಿ ಫ್ಯಾನ್ ಅಂದ್ರೆ ಈ ಹಿರಿಯ ಅಭಿಮಾನಿ ಚಾರುಲತಾ ಅವರು. ಇವರ ಆಶೀರ್ವಾದದೊಂದಿಗೆ ಮುಂದಿನ ಯುದ್ದಕ್ಕೆ ಸಜ್ಜಾಗುತ್ತೇವೆ ಅಂತ ಬರೆದುಕೊಂಡಿದ್ದಾರೆ.

ವಿಶ್ವಯುದ್ಧದಲ್ಲಿ ಅದ್ಭುತ ಆಟಗಾರನಾಗ್ತಾರಾ ಮಯಾಂಕ್..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ZtjSFmkmjFs
- Advertisement -

Latest Posts

Don't Miss