Biography: ಈ ಮೊದಲ ಭಾಗದಲ್ಲಿ ನಾವು ಅಂಬಾನಿ ಬಜ್ಜಿ ಮಾರಿದ ಬಗ್ಗೆ, ಯಮನ್‌ಗೆ ಕೆಲಸಕ್ಕೆ ಹೋದ ಬಗ್ಗೆ ಹೇಳಿದ್ದೆವು. ಈಗ ಯಮನ್‌ನಲ್ಲಿ ಏನೇನಾಯಿತು..? ಯಾಕೆ ಅಂಬಾನಿ ಯಮನ್‌ನಲ್ಲಿ ಕೆಲಸ ಬಿಟ್ಟು, ಭಾರತಕ್ಕೆ ಬಂದರು ಅನ್ನೋ ಬಗ್ಗೆ ಹೇಳಲಿದ್ದೇವೆ.
ಯಮನ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಬಳಸಲಾಗುತ್ತಿತ್ತು. ಮತ್ತು ಲಂಡನ್‌ನಲ್ಲಿ ಬೆಳ್ಳಿ ನಾಣ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಇದನ್ನರಿತ ಅಂಬಾನಿ, ಯಮನ್‌ನ ಬೆಳ್ಳಿ ನಾಣ್ಯವನ್ನು ಲಂಡನ್‌ಗೆ ಹೇಗೆ ಕಳುಹಿಸೋದು ಅನ್ನೋದನ್ನು ತಿಳಿದುಕೊಂಡು, ಆ ಕೆಲಸ ಮಾಡಿದರು. ಇದರಿಂದ ಧೀರುಭಾಯ್ ಲಾಭ ಮಾಡತೊಡಗಿದರು. ಯಮನ್‌ನಲ್ಲಿ ಗಲಾಟೆಯಾದಾಗ, ಅಲ್ಲಿಂದ ಅಂಬಾನಿ ಭಾರತಕ್ಕೆ ಮರಳಿದರು.
ಆದರೆ ಧೀರುಭಾಯ್ ಈಗಾಗಲೇ ಸಾಕಷ್ಟು ಹಣ ಗಳಿಸಿದ್ದರು. ಉದ್ಯಮ ಮಾಡುವ ಬಗ್ಗೆ ತಿಳುವಳಿಕೆ ಹೊಂದಿದ್ದರು. ಭಾರತಕ್ಕೆ ಬಂದ ಅಂಬಾನಿ, ಭಾರತದಲ್ಲಿ ಪಾಲಿಸ್ಟಾರ್ ಬಟ್ಟೆಗೆ ಬೇಡಿಕೆ ಇದೆ ಅನ್ನುವುದನ್ನ ಅರಿತುಕೊಂಡು, ಬಟ್ಟೆ ಬ್ಯುಸಿನೆಸ್ ಶುರು ಮಾಡಿದರು. ಮತ್ತು ವಿದೇಶದಲ್ಲಿ ಮಸಾಲೆಗೆ ಬೇಡಿಕೆ ಇರುವುದನ್ನು ಅರಿತು, ಅದರ ಉದ್ಯಮ ಕೂಡ ಆರಂಭಿಸಿದರು.
ಇಷ್ಟೇ ಅಲ್ಲದೇ, ಅರಬ್ ರಾಷ್ಟ್ರದ ಶೇಕ್ ಓರ್ವ, ಗುಲಾಬಿ ಗಿಡಗಳನ್ನು ನೆಟ್ಟು, ದೊಡ್ಡ ಉದ್ಯಾನ ನಿರ್ಮಿಸಬೇಕು ಎಂದುಕೊಂಡ. ಇದಕ್ಕಾಗಿ ಅವನಿಗೆ ಉತ್ತಮ ಕ್ವಾಲಿಟಿಯ ಮಣ್ಣಿನ ಅವಶ್ಯಕತೆ ಇತ್ತು. ಇದು ಅಂಬಾನಿಗೆ ಗೊತ್ತಾದ ತಕ್ಷಣ, ಅಂಬಾನಿ ಮಣ್ಣನ್ನು ಅವನಿಗೆ ರಫ್ತು ಮಾಡಿದರು. ಹೀಗೆ ಎಲ್ಲೇ ವ್ಯಾಪಾರದ ಅವಕಾಶ ಸಿಕ್ಕರೂ ಬಿಡದ ಅಂಬಾನಿ, ಹಲವು ಬ್ಯುಸಿನೆಸ್ ಮಾಡಿ ಕೋಟಿ ಕೋಟಿ ಹಣ ಗಳಿಸಿದರು.
ನಾಯಕತ್ವದ ಗುಣ ಹೊಂದಿದ್ದ ಅಂಬಾನಿ ತಮ್ಮ ನಿಧನದ ಹೊತ್ತಿಗೆ 60 ಸಾವಿರ ಕೋಟಿ ಒಡೆಯರಾಗಿದ್ದರು. ಯಾವ ವ್ಯಕ್ತಿ ಸಂಬಳಕ್ಕಾಗಿ ಇನ್ನೊಬ್ಬರ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದರೋ, ಇಂದು ಇಡೀ ದೇಶದಲ್ಲಿ ಹಲವಾರು ಪೆಟ್ರೋಲ್ ಪಂಪ್‌ಗಳು ಅವರ ಹೆಸರಿನಲ್ಲಿದೆ. ರಿಲಯನ್ಸ್ ಕಂಪನಿ, ದೇಶದ ಉದ್ದಗಲಕ್ಕೂ ವಿಸ್ತರಿಸಿ, ಉದ್ಯಮದ ರಾಜನಾಗಿ ಮೆರೆಯುತ್ತಿದೆ.