Sunday, September 8, 2024

Latest Posts

ಬುದ್ಧಿವಂತರಿಗಿರುವ ಮೂರು ಲಕ್ಷಣಗಳಿವು..

- Advertisement -

ಅಳಿಲನ್ನು ನೋಡಿ, ಪರ್ವತ ನಗುತ್ತಿತ್ತಂತೆ. ಆಗ ಅಳಿಲು ನಿನ್ನ ನಗುವಿಗೆ ಕಾರಣವೇನು ಎಂದು ಕೇಳಿತು. ಆಗ ಪರ್ವತ ನೀನು ನನ್ನಷ್ಟು ದೊಡ್ಡ ಆಕಾರದವನಲ್ಲವಲ್ಲ ಎಂದಿತು. ಅದಕ್ಕೆ ಉತ್ತರಿಸಿದ ನವಿಲು, ನಾನು ಆಕಾರದಲ್ಲಿ ನಿನಗಿಂತ ಚಿಕ್ಕವನಿರಬಹುದು. ಆದ್ರೆ ನೀನು ನನ್ನಂತೆ, ಗಟ್ಟಿಯಾಗಿರುವ ಒಣ ಹಣ್ಣನ್ನು ಕತ್ತರಿಸಲಾಗುವುದಿಲ್ಲ ಎಂದಿತಂತೆ. ಅದರಂತೆ ಒಬ್ಬೊಬ್ಬರಿಗೆ ಒಂದೊಂದು ಅರ್ಹತೆ ಇರುತ್ತದೆ. ಹಾಗಾಗೇ ನಾನೇ ಜಾಣನೆಂದು ಎಂದಿಗೂ ಬೀಗಬೇಡಿ. ಇಂದು ನಾವು ಈ ವಿಷಯ ಹೇಳುವ ಮೂಲಕ ಬುದ್ಧಿವಂತರಿಗೆ ಇರುವ 3 ಲಕ್ಷಣಗಳ ಬಗ್ಗೆ ವಿವರಿಸಲಿದ್ದೇವೆ.

ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 1

ಮೊದಲನೇಯ ಲಕ್ಷಣ, ಬುದ್ಧಿವಂತರು, ತಾವು ಬುದ್ಧಿವಂತರೆಂದು ಹೇಳಿ ತೋರಿಸುವುದಿಲ್ಲ. ಬದಲಾಗಿ ತಮ್ಮ ಕೆಲಸದಿಂದ ಬುದ್ಧಿವಂತರೆಂದು ತೋರಿಸುತ್ತಾರೆ. ಅಂಥವರು ಹೆಚ್ಚು ಸಮಯ ವ್ಯರ್ಥ ಮಾಡದೇ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ, ತಮ್ಮ ಗುಣದ ಮೂಲಕ ಬುದ್ಧಿವಂತರೆಂದು ತೋರಿಸುತ್ತಾರೆ.

ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 2

ಎರಡನೇಯ ಲಕ್ಷಣ, ಬುದ್ಧಿವಂತರು ತಮ್ಮ ಜೀವನದ ಬಗ್ಗೆ ಸರಿಯಾಗಿ ಯೋಚಿಸಿ, ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮಗೆ ಆರಮದಾಯಕವಾಗಿರಲಿ ಎಂದು ತಮ್ಮ ಯೋಚನೆಯನ್ನು ಬದಲಾಯಿಸುವುದಿಲ್ಲ. ಬದಲಾಗಿ, ತಮ್ಮ ಯಶಸ್ಸಿಗಾಗಿ ಏನು ಮಾಡಬೇಕೋ, ಅದನ್ನು ಮಾಡುತ್ತಾರೆ. ಜೀವನದಲ್ಲಿ ಗುರಿ ಮುಟ್ಟುವ ಬಗ್ಗೆ ಒಂದು ಧೃಡ ನಿರ್ಧಾರ ತೆಗೆದುಕೊಳ್ಳುತ್ತಾರೆ.

ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ..

ಮೂರನೇಯ ಲಕ್ಷಣ, ಇವರು ಎಲ್ಲರೊಂದಿಗೂ ಉತ್ತಮವಾದ ಸಂಬಂಧವನ್ನ ಹೊಂದಿರುತ್ತಾರೆ. ಆದ್ರೆ ಯಾರಿಗೂ ಹೆಚ್ಚು ಸಲುಗೆಯನ್ನು ಕೊಡುವುದಿಲ್ಲ. ಬುದ್ಧಿವಂತರೆಂಬ ಅಹಂಕಾರ ಇವರಿಗೆ ಇಲ್ಲದಿದ್ದರೂ, ಆ ಒಂದು ಗಾಂಭೀರ್ಯ ಅವರ ಮುಖದಲ್ಲಿರುತ್ತದೆ. ಎಲ್ಲರೊಂದಿಗೂ ಪ್ರೀತಿ, ಕಾಳಜಿ, ತಮಾಷೆಯಿಂದ ಮಾತನಾಡಿದರೂ, ಅದು ಆ ಗಾಂಭೀರ್ಯದ ಗೆರೆ ದಾಟಿ ಬರದಂತೆ ಅವರು ನೋಡಿಕೊಳ್ಳುತ್ತಾರೆ.

- Advertisement -

Latest Posts

Don't Miss