Health Tips: ತಾಯಿಯಾಗುವುದೆಂದರೆ ಅಷ್ಟು ಸುಲಭವಾದ ವಿಷಯವಲ್ಲ. ಅದರಲ್ಲೂ ಇಂದಿನ ಮೊಬೈಲ್ ಯುಗದಲ್ಲೂ, ತಾಯಿಯಾಗುವುದೆಂದರೆ ಅದೃಷ್ಟವೇ ಸರಿ. ಏಕೆಂದರೆ, ಮೊಬೈಲ್ ಬಳಕೆ, ಆಹಾರ ಸೇವನೆಯ ಕ್ರಮ ಇವೆಲ್ಲವುಗಳು ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿಯೇ ಬಂಜೆತನ ಹೆಚ್ಚಾಗುತ್ತಿದೆ. ಮೊದಲೆಲ್ಲ 10 ಹೆಣ್ಣು ಮಕ್ಕಳಲ್ಲಿ ಒಬ್ಬರು ಸಂತಾನಕ್ಕಾಗಿ ಹಪಹಪಿಸುತ್ತಿದ್ದರು.
ಆದರೆ ಈಗ 10 ಹೆಣ್ಣು ಮಕ್ಕಳಲ್ಲಿ ಒಬ್ಬರು ತಾಯಿಯಾದರೆ ಅದೇ ದೊಡ್ಡದು. ಅಷ್ಟು ಅನಾರೋಗ್ಯಕರ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಮದುವೆಯಾದ ಬಳಿಕ ಬೇಗ ತಾಯಂದಿರಾಗಿ ಎಂದು ಹಿರಿಯರು ಸಲಹೆ ಕೊಡುತ್ತಿದ್ದಾರೆ. ಇನ್ನು ಗರ್ಭಿಣಿಯಾದ ಬಳಿಕ ಹೆಣ್ಣು ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತು, ವಾಕರಿಗೆ, ಸುಸ್ತು, ನಿದ್ರೆ, ಕಾಲುಗಳು ಊದಿಕೊಳ್ಳುವುದು. ಹೀಗೆಲ್ಲ ಆಗುತ್ತದೆ. ಇಂದು ನಾವು ಗರ್ಭಾವಸ್ಥೆಯಲ್ಲಿ ಕಾಲು ಯಾಕೆ ಊದಿಕೊಳ್ಳುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಗರ್ಭಿಣಿಯಾಗಿದ್ದಾಗ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಹೊಟ್ಟೆಯಲ್ಲಿ ಮಗು ಬೆಳೆಯುವ ಕಾರಣಕ್ಕೆ, ಗರ್ಭಾಶಯದ ಭಾರ, ಸೊಂಟ ಮತ್ತು ಕಾಲುಗಳ ಮೇಲೆ ಬೀಳುತ್ತದೆ. ಆಗ ಕಾಲು ಮತ್ತು ಪಾದದಲ್ಲಿ ದ್ರವ ಸಂಗ್ರಹವಾಗಿ, ಕಾಲು ಉಬ್ಬಿಕೊಳ್ಳುತ್ತದೆ.
ಗರ್ಭಿಣಿಯಾಗಿದ್ದಾಗ ಸಾಕಷ್ಟು ನೀರು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಅಂದರೆ ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಮೂತ್ರ ವಿಸರ್ಜನೆಯಾಗಿ, ಆ ಮೂಲಕ ನಿಮ್ಮ ದೇಹದಲ್ಲಿ ತುಂಬಿರುವ ನೀರು, ಹೊರಹೋಗುತ್ತದೆ. ಆಗ ಕಾಲು ಊದಿಕೊಳ್ಳುವುದು ಕಡಿಮೆಯಾಗುತ್ತದೆ. ಹಾಗಾಗಿ ನೀರು, ಎಳನೀರು, ಮಜ್ಜಿಗೆ, ಜ್ಯೂಸ್‌ನಂಥ ಪೇಯ ಕುಡಿಯಬೇಕು ಅಂತಾ ಹೇಳುವುದು.
ಎರಡನೇಯ ಪರಿಹಾರ ಅಂದ್ರೆ, ಪಾದ ಉಬ್ಬಿಕೊಂಡಾಗ, ಹೆಚ್ಚು ಕೊತ್ತು ಕೂರಬೇಡಿ. ಹೆಚ್ಚು ಹೊತ್ತು ನಿಲ್ಲಬೇಡಿ. ಪದೇ ಪದೇ ಎದ್ದು ಓಡಾಡಿ, ಆಗ ಊದಿಕೊಂಡ ಪಾದ ಸರಿಯಾಗಿ ಆಗುತ್ತದೆ. ಹೆಚ್ಚು ಜಂಕ್ ಫುಡ್ ಸೇವಿಸಬೇಡಿ. ಒಳ್ಳೆಯ ಆಹಾರಗಳನ್ನೇ ಸೇವಿಸಿ. ಇದರೊಂದಿಗೆ ವೈದ್ಯರು ಸೂಚಿಸಿದ ವ್ಯಾಯಾಮ, ಯೋಗ ಮಾಡುವುದು ಉತ್ತಮ. ಕೊನೆಯದಾಗಿ ನಿಮ್ಮ ಕಾಲಿಗೆ ತೆಂಗಿನ ಎಣ್ಣೆಯ ಮಸಾಜ್ ಮಾಡಿ ನಿದ್ರಿಸಿ. ಇದರಿಂದ ಪಾದಕ್ಕೂ ಎಣ್ಣೆ ತಾಕುತ್ತದೆ. ಆಗ ನಿಮ್ಮ ಹಲವು ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?