ಮನುಷ್ಯನ ಮರ್ಯಾದೆ ಕಾಪಾಡುವುದು ಬಟ್ಟೆ. ನಾವು ಹಾಕುವ ಬಟ್ಟೆ ಸ್ವಚ್ಛವಾಗಿದ್ರೆ, ಜನ ನಮಗೆ ಗೌರವಿಸುತ್ತಾರೆ. ಲಕ್ಷ್ಮೀದೇವಿ ನಮ್ಮ ಮೇಲೆ ಕೃಪೆ ತೋರುತ್ತಾಳೆ. ಸ್ವಚ್ಛ ಬಟ್ಟೆ ಧರಿಸುವುದರಿಂದ ನಾವು ಆರೋಗ್ಯವಾಗಿರುತ್ತೇವೆ. ಹಾಗಾಗಿಯೇ ಬಟ್ಟೆಯಲ್ಲಿ ಮನುಷ್ಯನ ಭಾಗ್ಯ ಮತ್ತು ದೌರ್ಭಾಗ್ಯ ಅಡಗಿದೆ ಎಂದು ಹೇಳೋದು. ಇಂದು ನಾವು ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು. ಯಾಕೆ ಧರಿಸಬೇಕು ಅಂತಾ ಹೇಳಲಿದ್ದೇವೆ.
ಸೋಮವಾರದಂದು ಬಿಳಿ ಬಣ್ಣದ ಬಟ್ಟೆಯನ್ನ ಧರಿಸಬೇಕು. ಸೋಮವಾರ ಚಂದ್ರದೇವನ ದಿನವಿರುವ ಕಾರಣ, ಈ ದಿನ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಈ ದಿನ ಶಿವನನ್ನು ಪೂಜಿಸುವ ಕಾರಣ, ಬಿಳಿ ಬಟ್ಟೆ ಧರಿಸಿದ್ದಲ್ಲಿ, ಉತ್ತಮವಾಗಿರುತ್ತದೆ.
ನಿಮಗೆ ಅಯ್ಯಪ್ಪಸ್ವಾಮಿಯ ಕಥೆ ಗೊತ್ತಾ..?
ಮಂಗಳವಾರದಂದು ಕೆಂಪು, ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಬೇಕು. ಮಂಗಳವಾರ ಮಂಗಳನಿಗೆ ಸಂಬಂಧಪಟ್ಟ ದಿನವಾಗಿದ್ದು, ಈ ದಿನ ಮಂಗಳನಿಗೆ ಇಷ್ಟವಾಗುವ ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಬಹುದು. ಈ ದಿನ ಹನುಮನನ್ನು ಪೂಜಿಸುವ ದಿನವಾಗಿದ್ದು, ಹನುಮನಿಗೂ ಈ ಬಣ್ಣದ ಬಟ್ಟೆ ಇಷ್ಟವಾಗಿದೆ.
ಬುಧವಾರದಂದು ಹಸಿರು ಬಣ್ಣದ ಬಟ್ಟೆ ಧರಿಸಬೇಕು. ಹಸಿರು ಬಣ್ಣದ ಬುಧಗ್ರಹದ ದಿನವಾದ ಬುಧವಾರದಂದು ಹಸಿರು ಬಣ್ಣದ ಬಟ್ಟೆ ಧರಿಸಬೇಕು. ಈ ದಿನ ಗಣಪತಿಯನ್ನು ಪೂಜಿಸಬೇಕಾಗುತ್ತದೆ. ಈ ವೇಳೆ ಹಸಿರು ಬಣ್ಣದ ಬಟ್ಟೆ ಧರಿಸಿದರೆ ಉತ್ತಮ ಅಂತಾ ಹೇಳಲಾಗಿದೆ.
ಈ 5 ಕೆಲಸಗಳನ್ನು ಅಗತ್ಯಕ್ಕಿಂತ ಹೆಚ್ಚು ಹೊತ್ತು ಮಾಡಿದರೆ, ಬೇಗ ಸಾವು ಸಂಭವಿಸುತ್ತದೆ..
ಗುರುವಾರದಂದು ಹಳದಿ ಬಣ್ಣದ ಬಟ್ಟೆ ಧರಿಸಬೇಕು. ಬ್ರಹಸ್ಪತಿಯ ವಾರವಾದ ಗುರುವಾರದಂದು ಹಳದಿ ಬಣ್ಣದ ಬಟ್ಟೆ ಧರಿಸಿ ಗುರುವಿನ ಪೂಜೆ ಮಾಡಿದ್ರೆ, ಗುರುಕೃಪೆಗೆ ಪಾತ್ರರಾಗುತ್ತಾರೆ.
ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆ ಅಥವಾ ನೇರಳೆ ಬಣ್ಣದ ಬಟ್ಟೆ ಧರಿಸಬೇಕು. ಈ ದಿನ ದೇವಿಯ ಪೂಜೆ ಮಾಡುವ ಕಾರಣ, ಲಕ್ಷ್ಮೀ ದೇವಿಗೆ ಕೆಂಪು ಬಣ್ಣವೆಂದರೆ ಬಲು ಇಷ್ಟ. ಹಾಗಾಗಿ ಕೆಂಪು ಬಣ್ಣದ ಬಟ್ಟೆ ಧರಿಸಿ, ಲಕ್ಷ್ಮೀ ದೇವಿಗೆ ಕೆಂಪು ಹೂವನ್ನು ಅರ್ಪಿಸಿದರೆ, ದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
ಶನಿವಾರದಂದು ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆ ಧರಿಸಬೇಕು. ಶನಿ ಪೂಜೆ ಮಾಡುವಾಗ ಮಾತ್ರ ಕಪ್ಪು ಬಣ್ಣದ ಬಟ್ಟೆ ಧರಿಸಿ. ಆದ್ರೆ ಕಪ್ಪಿಗಿಂತ ನೀಲಿ ಬಮ್ಣದ ಬಟ್ಟೆ ಧರಿಸಿದರೆ, ಇನ್ನೂ ಉತ್ತಮ.
ರವಿವಾರದಂದು ಹಳದಿ ಬಣ್ಣದ ಬಟ್ಟೆ ಧರಿಸಬೇಕು. ಈ ದಿನ ಸೂರ್ಯನಿಗೆ ಸಂಬಂಧಿಸಿದ ದಿನವಾಗಿದ್ದು, ಈ ದಿನ ಹಳದಿ ಅಥವಾ ಬಂಗಾರದ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ.