Sunday, June 1, 2025

Latest Posts

ಇತ್ತೀಚೆಗೆ ಬಂಜೆತನ ಹೆಚ್ಚಾಗಲು ಕಾರಣವೇನು..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತೆಯರ ಸಮಸ್ಯೆ ಎಂದರೆ, ಮಕ್ಕಳಾಗದಿರುವುದು. ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ವೈದ್ಯೆಯಾದ ಡಾ.ವಿದ್ಯಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಂಜೆತನ ಈಗ ಕಾಮನ್‌ ಪ್ರಾಬ್ಲಂ ಎಂದಿದ್ದಾರೆ. ಬಂಜೆತನ ಬರೀ ಹೆಣ್ಣು ಮಕ್ಕಳಲ್ಲಿ ಅಷ್ಟೇ ಅಲ್ಲ. ಗಂಡು ಮಕ್ಕಳಲ್ಲೂ ಬರುತ್ತದೆ. ಇಂದಿನ ಜನರ ಆಹಾರ ಪದ್ಧತಿ, ಜೀವನ ಶೈಲಿ ಸೇರಿ ಹಲವು ಕಾರಣಗಳಿಂದಾಗಿಯೂ ಬಂಜೆತನ ಬರುತ್ತದೆ. ಕೆಲವರಿಗೆ ಪಿಸಿಓಡಿ, ಪಿಸಿಓಎಸ್ ಸಮಸ್ಯೆ ಇರುತ್ತದೆ. ಇನ್ನು ಕೆಲವರಿಗೆ ವಯಸ್ಸಾಗುತ್ತದೆ.

ಮೊದಲೆಲ್ಲ 22ರಿಂದ 28ನೇ ವಯಸ್ಸಾಗುವುದರೊಳಗಾಗಿ ಮದುವೆ ಮಾಡುತ್ತಿದ್ದರು. 30 ವಯಸ್ಸಾಗುವುದೊರಳಗೆ ಮಕ್ಕಳಾಗುತ್ತಿತ್ತು. ಆದರೆ ಈಗ ಹೆಣ್ಣು ಮಕ್ಕಳು ಹೆಚ್ಚು ಕಲಿತು, ಕೆಲಸಕ್ಕೆ ಸೇರಿ, ಲೈಫ್ ಸೆಟಲ್ ಆದ ಮೇಲೆ ವಿವಾಹವಾಗೋಕ್ಕೆ ರೆಡಿಯಾಗುತ್ತಾರೆ. ಆಗ ಮಕ್ಕಳು ಮಾಡಿಕೊಳ್ಳುವ ವಯಸ್ಸು ದಾಟಿ ಹೋಗಿರುತ್ತದೆ. ಹಾಗಾಗಿ ಹಲವರು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹೀಗೆ ವಯಸ್ಸಾದ ಮೇಲೆ ಸ್ತ್ರೀಯರಲ್ಲಿ ಅಂಡಾಣು ಪ್ರಮಾಣ ಕಡಿಮೆಯಾದರೆ, ಪುರುಷರಲ್ಲಿ ವೀರ್ಯಾಣು ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ, ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಪತಿ-ಪತ್ನಿ ಇಬ್ಬರೂ ನಾರ್ಮಲ್ ಆಗಿದ್ದರೂ ಕೂಡ, ಇಬ್ಬರಿಗೂ ಪರಸ್ಪರ ಸಮಯ ಕಳೆಯಲು ಆಗುವುದಿಲ್ಲ. ಅವರು ಹೆಚ್ಚು ಪ್ರಯಾಣಿಸುತ್ತಿರುತ್ತಾರೆ. ಅಥವಾ ಪತಿ ಪತ್ನಿ ಬೇರೆ ಬೇರೆ ಊರಿನಲ್ಲಿ ಕೆಲಸ ಮಾಡುತ್ತಾರೆ. ಇಂತ ಸಮಯ ಮೀರಿ ಹೋದಾಗ, ಅವರ ದೇಹದಲ್ಲಿ ಉತ್ತಮ ಸಂತಾನೋತ್ಪತ್ತಿಯ ಗುಣಗಳು ಹೊರಟು ಹೋಗುತ್ತದೆ. ಹಾಗಾಗಿ ಬಂಜೆತನ ಹೆಚ್ಚಾಗುತ್ತಿದೆ.  ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ

ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ಕ್ರಮ ಅನುಸರಿಸಿ..

ಕೂದಲಿಗೆ ಮೊಸರು ಹಚ್ಚುವುದರಿಂದೇನು ಪ್ರಯೋಜನ..?

- Advertisement -

Latest Posts

Don't Miss