Health tips: ಗರ್ಭಿಣಿಯಾದವರು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಇಂದಿನ ಕಾಲದಲ್ಲಿ ಹಲವು ರೋಗಗಳಿಂದ, ಗರ್ಭಿಣಿಯರು ದೂರವಿರಬೇಕು. ಹಾಗಾಗಿ ಇಂದು ನಾವು ಗರ್ಭಿಣಿಯರು ಝೀಕಾ ವೈರಸ್ ಬಗ್ಗೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಅಂತಾ ಹೇಳಲಿದ್ದೇವೆ.
ಝೀಕಾ ವೈರಸ್ ಎಂದರೆ, ಸೊಳ್ಳೆಯಿಂದ ಹರಡುವ ರೋಗ. ಇದು ಆಫ್ರಿಕಾದಲ್ಲಿ ಮೊದಲ ಬಾರಿಗೆ, ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗ 4ರಿಂದ 5 ವರ್ಷದಲ್ಲಿ ನಮ್ಮ ದೇಶದ ಹಲವೆಡೆ ಝೀಕಾ ವೈರಸ್ ಕಾಣಿಸಿದೆ. ಕರ್ನಾಟಕದ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಝೀಕಾ ವೈರಸ್ ರೋಗ ಹೆಚ್ಚಾಗಿ ಹರಡುತ್ತಿದೆ.
ವೈದ್ಯರು ಹೇಳುವ ಪ್ರಕಾರ, ಗರ್ಭಿಣಿಯರು ಝೀಕಾ ವೈರಸ್ ಬಗ್ಗೆ ಎಚ್ಚರಿಕೆಯಿಂದಿರಬೇಕು. ಇಲ್ಲವಾದಲ್ಲಿ, ತಾಯಿ ಮಗು ಇಬ್ಬರಿಗೂ ಇದರಿಂದ, ಆರೋಗ್ಯ ಸಮಸ್ಯೆಯಾಗುತ್ತದೆ. ಗರ್ಭಿಣಿಗೆ ಝೀಕಾ ವೈರಸ್ ತಗುಲಿದರೆ, ಮಗುವಿನ ತಲೆ ಸಣ್ಣದಾಗುವ ಸಾಧ್ಯತೆ ಇದೆ. ಮಗುವಿನ ಬೆಳವಣಿಗೆ ಸರಿಯಾಗಿ ಆಗದಿರುವ ಸಾಧ್ಯತೆ ಇದೆ.
ಝೀಕಾ ವೈರಸ್ ಪ್ರಾಣಿಗಳಲ್ಲಿ ಬರುವ ಸಾಧ್ಯತೆ ಹೆಚ್ಚಿದೆ. ಮನುಷ್ಯರಿಗೆ ಇದು ಬರುವ ಸಾಧ್ಯತೆ ಕಡಿಮೆ. ಬಂದರೂ, ನಾವು ವೈದ್ಯರ ಬಳಿ ಚಿಕಿತ್ಸೆ ಪಡೆದು, ಸರಿ ಮಾಡಿಸಿಕೊಳ್ಳಬಹುದು. ಆದರೆ ಝೀಕಾ ವೈರಸ್ ಗರ್ಭಿಣಿಯರಿಗೆ ಬಂದರೆ ಮಾತ್ರ, ಅದರಿಂದ ಮಗುವಿನ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಕುತ್ತು ಬರುತ್ತದೆ. ಝೀಕಾ ವೈರಸ್ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂಬ ಬಗ್ಗೆ ತಿಳಿಯಲು ವೀಡಿಯೋ ನೋಡಿ..