Sunday, September 8, 2024

Latest Posts

ಮುಟ್ಟಿನ ದಿನಗಳಲ್ಲಿ ಅತೀ ಕಡಿಮೆ ಬ್ಲೀಡಿಂಗ್ ಆದಾಗ ಏನು ಮಾಡಬೇಕು..?

- Advertisement -

Health Tips: ನಾವು ನಿಮಗೆ ಈಗಾಗಲೇ ಹೆಚ್ಚು ಬ್ಲೀಡಿಂಗ್ ಆದಾಗ ಏನು ಮಾಡಬೇಕು ಎಂದು ಹೇಳಿದ್ದೇವೆ. ಇದೀಗ ಕಡಿಮೆ ಬ್ಲೀಡಿಂಗ್ ಆಗುತ್ತಿದ್ದರೆ, ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ. ಅಲ್ಲದೇ, ಕಡಿಮೆ ಬ್ಲೀಡಿಂಗ್ ಯಾವಾಗ ಆಗುತ್ತದೆ. ಇದಕ್ಕೆ ಕಾರಣವೇನು ಅಂತಲೂ ಹೇಳಲಿದ್ದೇವೆ.

ಮೊದಲನೇಯದಾಗಿ ಯಾವಾಗ ಕಡಿಮೆ ಬ್ಲೀಡಿಂಗ್ ಆಗುತ್ತದೆ ಎಂದು ತಿಳಿಯೋಣ. ನೀವು ಸಣ್ಣ ವಯಸ್ಸಿನವರಾಗಿದ್ದು ನೀವು ಇತ್ತೀಚಿಗಷ್ಟೇ ಋತುಮತಿಯಾಗಿದ್ದರೆ, ಅಂಥ ವೇಳೆ ಕಡಿಮೆ ಬ್ಲೀಡಿಂಗ್ ಆಗುತ್ತದೆ. ಇನ್ನು ನಿಮ್ಮ ಮುಟ್ಟು ನಿಲ್ಲುವ ವೇಳೆಯೂ ಹೀಗೆ ಆಗುತ್ತದೆ. ದೇಹದಲ್ಲಿ ರಕ್ತ ಕಡಿಮೆ ಇದ್ದಾಗ, ನೀವು ಗರ್ಭಿಣಿಯಾಗುತ್ತಿದ್ದರೆ, ಈ ರೀತಿ ಕಡಿಮೆ ಬ್ಲೀಡಿಂಗ್ ಆಗುತ್ತದೆ. ತಾಯಿ ಮಗುವಿಗೆ ಹಾಲುಣಿಸುತ್ತಿದ್ದರೆ, ಪಿಸಿಓಡಿ ಸಮಸ್ಯೆ ಇದ್ದರೆ ಕಡಿಮೆ ಬ್ಲೀಡಿಂಗ್ ಆಗುತ್ತದೆ.

ಒಂದು ಸ್ಪೂನ್ ಕರಿಎಳ್ಳು, ಒಂದು ಗ್ಲಾಸ್ ನೀರು ಮತ್ತು ಕೊಂಚ ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ, ಕಶಾಯ ತಯಾರಿಸಬೇಕು. ಇದನ್ನು ಸೋಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನೀವು ಹೊರಗಾಗಲು ಇನ್ನು ಒಂದು ವಾರವಿದೆ ಎನ್ನುವಾಗ ನೀವು ಇದನ್ನು ಸೇವಿಸಬೇಕು. ಮತ್ತೆ ಮುಂದಿನ ತಿಂಗಳು ಇದೇ ರೀತಿ ಮುಟಟ್ಟಾಗುವುದಕ್ಕೆ ಇನ್ನು ಒಂದು ವಾರವಿರುವಾಗ ನೀವು ಇದನ್ನು ಸೇವಿಸಬೇಕು.

ಇನ್ನೊಂದು ಟಿಪ್ಸ್ ಅಂದ್ರೆ, ಸೋಂಪನ್ನು ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಒಂದು ಸ್ಪೂನ್ ತುಪ್ಪದೊಂದಿಗೆ ಎರಡು ಹೊತ್ತು ಊಟದ ಬಳಿಕ ಸೇವಿಸಬೇಕು. ಇದು ಕೂಡ ಮುಟ್ಟಿನ ಸಮಯಕ್ಕೆ ಇನ್ನೂ ಒಂದು ವಾರವಿರುವಾಗ ತೆಗೆದುಕೊಳ್ಳಬೇಕು. ಹೀಗೆ ಮಾಡಿದ್ದಲ್ಲಿ, ನಿಮಗೆ ಸರಿಯಾಗಿ ಬ್ಲೀಡಿಂಗ್ ಆಗುತ್ತದೆ. ಇನ್ನು ನೀವು ಏನೇ ಮನೆ ಮದ್ದು ಮಾಡಿದರೂ, ನಿಮ್ಮ ಈ ಸಮಸ್ಯೆ ನಿಲ್ಲುತ್ತಿಲ್ಲವೆಂದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸುವುದು ಉತ್ತಮ.

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

- Advertisement -

Latest Posts

Don't Miss