Spiritual Story: ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಲೋಕಕಲ್ಯಾಣಕ್ಕಾಗಿ, ಹಲವು ರಾಕ್ಷಸರ ಸಂಹಾರಕ್ಕಾಗಿ ಶ್ರೀವಿಷ್ಣು ಮನುಷ್ಯ ರೂಪ ತಾಳಿ, ಶ್ರೀರಾಮನಾಗಿ ಅವತರಿಸಿದ.
ರಾಮನ ಜನ್ಮ ದಿನವನ್ನೇ ರಾಮನವಮಿ ಎಂದು ಆಚರಿಸಲಾಗುತ್ತದೆ. ಆದರೆ ರಾಮ ಜನಿಸಿದ್ದಕ್ಕೆ ಒಂದು ರೋಚಕ ಕಥೆಯೇ ಇದೆ. ದಶರಥನಿಗೆ ಓರ್ವ ಮಗಳಿದ್ದಳು. ಆಕೆಯ ಹೆಸರು ಶಾಂತಾ. ಆಕೆಯನ್ನು ಓರ್ವ ರಾಜ ದತ್ತು ತೆಗೆದುಕೊಂಡ. ಅದಾದ ಬಳಿಕ ದಶರಥ ರಾಜನಿಗೆ ಪುತ್ರ ಸಂತಾನವಿರಲಿಲ್ಲ. ಹಾಗಾಗಿ ದಶರಥ ರಾಜ ಪತ್ನಿಯರೊಂದಿಗೆ ಸೇರಿ ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದ.
ಈ ವೇಳೆ ಪ್ರಜಾಪತಿಯಿಂದ ಸಿಕ್ಕ ಪಾಯಸ ಪ್ರಸಾದವನ್ನು ತನ್ನ ಪತ್ನಿಯರಿಗೆ ಸೇವಿಸಲು ಹೇಳಿದ. ಕೌಸಲ್ಯಾ, ಕೈಕೆ, ಸುಮಿತ್ರೆ ಮೂವರು ಪಾಯಸದ ಸೇವನೆ ಮಾಡಲು ಮುಂದಾದರು. ಆದರೆ ಸುಮಿತ್ರೆಯ ಪಾಯಸ ಪ್ರಸಾದ ಚೆಲ್ಲಿಹೋಗುತ್ತದೆ. ಹಾಗಾಗಿ ಕೈಕೆ ಮತ್ತು ಕೌಸಲ್ಯಾ ತಮ್ಮ ಪ್ರಸಾದದಲ್ಲಿ ಅರ್ಧ ಭಾಗವನ್ನು ಸುಮಿತ್ರೆಗೆ ನೀಡುತ್ತಾರೆ.
ಹಾಗಾಗಿಯೇ ಕೌಸಲ್ಯೆಗೆ ರಾಮ, ಕೈಕೆಗೆ ಭರತ ಹುಟ್ಟಿದರೆ, ಇಬ್ಬರ ಪಾಲಿನ ಪಾಯಸ ಕುಡಿದಿದ್ದ ಸುಮಿತ್ರೆಗೆ ಮಾತ್ರ ಲಕ್ಷ್ಮಣ ಮತ್ತು ಶತ್ರುಘ್ನ ಜನಿಸಿದರು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಪುನರ್ವಸು ನಕ್ಷತ್ರದಲ್ಲಿ ರಾಮ, ಪುಷ್ಯ ನಕ್ಷತ್ರದಲ್ಲಿ ಭರತ, ಆಶ್ಲೇಷ ನಕ್ಷತ್ರದಲ್ಲಿ ಲಕ್ಷ್ಮಣ ಮತ್ತು ಶತ್ರುಘ್ನ ಜನಿಸಿದರು. ಈ ದಿನವನ್ನೇ ರಾಮನವಮಿ ಎಂದು ಆಚರಿಸಲಾಗುತ್ತದೆ.
ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ