Spiritual News: ಶ್ರೀರಾಮ ರಾಮ ರಾಮೇತಿ, ರಮೆ ರಾಮೆ ಮನೋರಮೆ, ಸಹಸ್ರನಾಮ ತತ್ತುಲ್ಯಂ ನಾಮನಾಮ ವರಾನನೇ.. ಈ ರೀತಿಯಾಗಿ ಶಿವ ಪಾರ್ವತಿಗೆ ರಾಮರಾಮ ಜಪದ ಬಗ್ಗೆ ವಿವರಿಸುತ್ತಾನೆ.
ರಾಮನಾಮ ಜಪಕ್ಕಿಂತ ಶ್ರೇಷ್ಠವಾದ ಜಪ ಇನ್ನೊಂದಿಲ್ಲ ಎಂದು ಶಿವ ಪಾರ್ವತಿಗೆ ವಿವರಿಸುತ್ತಾನೆ. ಹನುಮಂತ ನದಿ ದಾಟುವಾಗ ಹಲ್ಲಿನ ಮೇಲೆ ಶ್ರೀರಾಮನ ಹೆಸರು ಬರೆದಾಗ, ಕಲ್ಲು ಕೂಡ ತೇಲುವ ಪವಾಡ ನಡೆದಿತ್ತು. ಇದರಲ್ಲೇ ರಾಮನ ಹೆಸರಿಗಿರುವ ಶಕ್ತಿ ಎಂಥದ್ದು ಅಂತಾ ನಾವು ತಿಳಿದುಕೊಳ್ಳಬೇಕು. ಎಂಥ ಕಷ್ಟಕಾಲದಲ್ಲೂ, ಭಯದ ವಾತಾವರಣದಲ್ಲೂ ರಾಮನಾಮ ಜಪ ಮಾಡಿದ್ದಲ್ಲಿ, ಎಲ್ಲ ಕಷ್ಟಗಳಿಂದಲೂ ರಾಮ ಮುಕ್ತಿ ನೀಡುತ್ತಾನೆಂಬ ನಂಬಿಕೆ ಇದೆ. ಈ ನಂಬಿಕೆ ಹಲವರ ಜೀವನದಲ್ಲಿ ನಿಜವಾಾಗಿದೆ.
ರಾಮನಾಮ ಜಪ ಮಾಡುವುದರ ಜೊತೆಗೆ ನಾವು ರಾಮಕೋಟಿಯನ್ನು ಬರೆದಲ್ಲಿ, ಜೀವನದಲ್ಲಿ ಉದ್ಧಾರವಾಗುತ್ತೇವೆ ಎಂಬ ನಂಬಿಕೆ ಇದೆ. ಇದನ್ನು ರಾಮತಾರಕ ಮಂತ್ರ ಅಂತಾ ಕರೆಯಲಾಗುತ್ತದೆ. ಈ ರಾಮನಾಮ ಜಪವನ್ನು ಕೋಟಿ ಬಾರಿ ಬರೆದು, ಆ ಪುಸ್ತಕವನ್ನು ರಾಮತಾರಕ ಯಜ್ಞಕ್ಕೆ ಕೊಡಲಾಗುತ್ತದೆ. ಈ ಯಜ್ಞದಿಂದ ಲೋಕಕಲ್ಯಾಣವಾಗುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ.
ಈ ಯಜ್ಞಕ್ಕೆ ರಾಮನಾಮ ಬರೆದು ಕೊಟ್ಟವರು ಕೂಡ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ರಾಮತಾರಕ ಮಂತ್ರವನ್ನು ಬರೆಯಲು ನೀವು ಅನುಸರಿಸಬೇಕಾದ ನಿಯಮವಿಷ್ಟೇ. ಮೊದಲು ಒಂದು ಉತ್ತಮ ದಿನವನ್ನು ಕಂಡು ಅಂದು, ಸ್ನಾನಾದಿಗಳನ್ನು ಮಾಡಿ, ಹೊಸ ಪುಸ್ತಕ ಪೆನ್ನು ಖರೀದಿಸಿ, ಅದರಲ್ಲಿ ಚಿಕ್ಕದಾಗಿ ಶ್ರೀರಾಮ ಜೈರಾಮ ಜಯ ಜಯ ರಾಮ ಎಂದು ಬರೆಯಬೇಕು.
ಅರ್ಜೆಂಟ್‌ನಲ್ಲಿದ್ದಾಗ, ಅಥವಾ ಬರೆದು ಮುಗಿಸಲೇಬೇಕೆಂದು ಮನಸ್ಸಿಲ್ಲದ ಮನಸ್ಸಿನಿಂದ, ಸಿಟ್ಟಿನಲ್ಲಿದ್ದಾಗ, ಮನಸ್ಸು ಸರಿ ಇಲ್ಲದೇ ಇದ್ದಾಗ, ಇಂಥ ಸಮಯದಲ್ಲೆಲ್ಲಾ ರಾಮನಾಮ ಬರೆಯಬೇಡಿ. ಇದನ್ನು ಬರೆಯುವಾಗ ಮನಸ್ಸಿನಲ್ಲಿ ಭಕ್ತಿ ಇರಬೇಕು. ಮನಸ್ಸು ಶಾಂತವಾಗಿರಬೇಕು. ಅಕ್ಕಪಕ್ಕದ ವಾತಾವರಣ ಕೂಡ ಶಾಂತವಾಗಿರಬೇಕು. ಇಂಥ ವೇಳೆ ನೀವು ರಾಮನಾಮ ಬರೆಯಬೇಕು.
ಅಷ್ಟೇ ಅಲ್ಲದೇ, ಮನೆಯಲ್ಲಿ ಸೂತಕ, ಅಮೆ ಇರುವಾಗ, ಹೆಣ್ಣು ಮಕ್ಕಳು ಮುಟ್ಟಾದಾಗ ರಾಮತಾರಕ ಮಂತ್ರವನ್ನು ಬರೆಯುವಂತಿಲ್ಲ. ಹಾಗಾಗಿ ಈ ಪುಸ್ತಕ ಮತ್ತು ಪೆನ್ನನ್ನು ದೇವರ ಕೋಣೆಯಲ್ಲಿಡುವುದು ಸೂಕ್ತ. ಈ ಪುಸ್ತವನ್ನು ನೀವು ಬಿಟ್ಟು ಇನ್ಯಾರೂ ಮುಟ್ಟದಂತೆ ನೋಡಿಕೊಳ್ಳಿ. ಸಂಜೆ ಹೊತ್ತು ದೀಪ ಹಚ್ಚಿದ ಬಳಿಕ, ಕೊಂಚ ಹೊತ್ತು ರಾಮತಾರಕ ಮಂತ್ರವನ್ನು ಬರೆಯಿರಿ. ನೀವು ಈ ಮಂತ್ರವನ್ನು ಕೋಟಿ ಬಾರಿ ಬರೆದ ಬಳಿಕ, ರಾಮತಾರಕ ಯಜ್ಞ ನಡೆಯುವ ಜಾಗಕ್ಕೆ ಹೋಗಿ, ಇದನ್ನು ಅರ್ಪಿಸಿ ಬಿಡಿ. ಯಜ್ಞದ ಬಳಿಕ ಪ್ರಸಾದ ಸ್ವೀಕರಿಸಿ. ಈ ಕೆಲಸದಿಂದ ನಿಮ್ಮ ಜೀವನದಲ್ಲಿ ನೆಮ್ಮದಿ, ಉತ್ತಮ ಆರ್ಥಿಕ ಪರಿಸ್ಥಿತಿ ಎಲ್ಲವೂ ಸಿಗುತ್ತದೆ.
ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಈ ವಿಷಯಗಳನ್ನು ಮರೆತುಬಿಡಿ ಅಂತಾರೆ ಚಾಣಕ್ಯರು
ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ