Wednesday, February 5, 2025

Latest Posts

ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆ

- Advertisement -

International News: 2020ರಲ್ಲಿ ಚೀನಾದ ಮೂಲಕ ಭಾರತಕ್ಕೆ ಒಕ್ಕರಿಸಿದ್ದ ಕೊರೋನಾ, ಹಲವರ ಆರೋಗ್ಯ ಹಾಳು ಮಾಡುವುದರ ಜೊತೆಗೆ, ಹಲವರ ಜೀವನವನ್ನೂ ಹಾಳು ಮಾಡಿತ್ತು. ಕೊರೊನಾ ಬಂದು ಸತ್ತು ಹೋದವರಿಗಿಂತ, ಹಸಿವಿನಿಂದ ಸತ್ತವರೇ ಹೆಚ್ಚಾಗಿದ್ದರು. ಸದ್ಯ ಜನ ಕೊರೋನಾ ತೊಂದರೆಯಿಂದ ಮುಕ್ತಿ ಪಡೆದು, ಮೊದಲಿನಂತೆ ಜೀವನ ನಡೆಸುತ್ತಿದ್ದಾರೆ. ವ್ಯಾಪಾರ, ಕೆಲಸ ಮಾಡಿಕೊಂಡು ಆರಾಮವಾಗಿದ್ದಾರೆ. ಆದರೆ ಮತ್ತೆ ಕೊರೋನಾ ವಕ್ಕರಿಸುವ ಎಲ್ಲಾ ಸೂಚನೆಗಳು ಸಿಕ್ಕಿದೆ.

ಈಗಾಗಲೇ ಭಾರತದ ಕೇರಳ ರಾಜ್ಯದಲ್ಲಿ ಹಲವರಿಗೆ ಮತ್ತೆ ಕೊರೋನಾ ಬಂದಿದ್ದು, ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಇನ್ನು ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆಯಾಗಿದೆ. ಹಾಗಾಗಿ ಮೊದಲಿನಂತೆ, ಮಾಸ್ಕ್ ಧರಿಸುವುದು. ಡಿಸ್ಟೆನ್ಸ್ ಮೆಂಟೇನ್ ಮಾಡುವ ಕ್ರಮವೆಲ್ಲ ಶುರುವಾಗಿದೆ. ಸಿಂಗಾಪುರ ಆರೋಗ್ಯ ಸಚಿವಾಲಯವು, ಅನಾರೋಗ್ಯ ಪೀಡಿತರಲ್ಲದವರೂ ಕೂಡ, ಮಾಸ್ಕ್ ಧರಿಸಿಯೇ ಓಡಾಡಬೇಕು ಎಂದು ಆದೇಶಿಸಿದೆ.

ಈ ಬಗ್ಗೆ ಈಗಲೇ ಮುನ್ನೆಚ್ಚರಿಕೆ ವಹಿಸಿರುವ ಸಿಂಗಾಪುರ ಆರೋಗ್ಯ ಸಚಿವಾಲಯ, ಈಗಿಂದಲೇ, ರೋಗಿಗಳ ಸಂಖ್ಯೆ ಹೆಚ್ಚಾದರೆ, ಹೇಗೆ ಚಿಕಿತ್ಸೆ ಕೊಡಬೇಕು..? ಎಲ್ಲೆಲ್ಲಿ ಬೆಡ್ ವ್ಯವಸ್ಥೆ ಮಾಡಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ನಿರ್ಧಾರ ಮಾಡಿ, ಕೆಲಸವೂ ಶುರು ಮಾಡಿದೆ.

ಉಳ್ಳಾಗಡ್ಡಿಮಠ ಬೆಂಬಲಿಗರಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಭರ್ಜರಿ ಸ್ವಾಗತ: ರಜತ್‌ಗೆ ಟಿಕೆಟ್ ನೀಡುವಂತೆ ಮನವಿ

‘ನಡ್ಡಾ ಅವರಿಗೆ ದಮ್ಮು-ತಾಕತ್ ಇದ್ದರೆ, ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ’

ರೈತರಿಗೆ ಗುಡ್ ನ್ಯೂಸ್: ಸಹಕಾರಿ ಸಾಲದ ಮೇಲಿನ ಬಡ್ಡಿ ಮನ್ನಾ

- Advertisement -

Latest Posts

Don't Miss