ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಉತ್ತರ ಭಾರತದ ಸಿಹಿ ತಿನಿಸಾದ ಚೂರ್ಮಾ ಲಡ್ಡು ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ..
ಬೇಕಾಗುವ ಸಾಮಗ್ರಿ: ಒಂದುವರೆ ಕಪ್ ತರಿ ತರಿಯಾದ ಗೋಧಿ ಹಿಟ್ಟು, ಅರ್ಧ ಕಪ್ ತುಪ್ಪ, 1 ಕಪ್ ಉಗುರು ಬೆಚ್ಚಗಿನ ಹಾಲು, ಎರಡು ಸ್ಪೂನ್ ಕಡಲೆ ಹಿಟ್ಟು ಮತ್ತು ರವೆ, ನಿಮಗೆ ಅಗತ್ಯವಿದ್ದಷ್ಟು ಬಾದಾಮ್, ದ್ರಾಕ್ಷಿ, ಗೋಡಂಬಿ, ಅರ್ಧ ಕಪ್ ಬೆಲ್ಲ, ಸಿಹಿ ಹೆಚ್ಚು ಬೇಕಾದ್ರೆ ಮತ್ತೂ ಬೆಲ್ಲವನ್ನೂ ಸೇರಿಸಿಕೊಳ್ಳಿ. ಅಥವಾ ಸಕ್ಕರೆ ಬಳಸಿ. ಕೊನೆಯದಾಗಿ ಚಿಟಿಕೆ ಏಲಕ್ಕಿ ಪುಡಿ.
ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ..
ಮಾಡುವ ವಿಧಾನ: ಮೊದಲು ಒಂದು ದೊಡ್ಡ ಬೌಲ್‌ಗೆ ಗೋಧಿ ಹಿಟ್ಟು ಮತ್ತು ತುಪ್ಪ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಆಮೇಲೆ ಹಾಲು ಹಾಕಿಹಿಟ್ಟು ಕಲಿಸಿ. ಹಿಟ್ಟು ಹೆಚ್ಚು ಮೆತ್ತಗಾಗೋದು ಬೇಡ. ಈಗ ಇದನ್ನು ಚಪಾತಿ ರೀತಿ ಲಟ್ಟಿಸಿ, ತವ್ವಾದ ಮೇಲೆ ಎಣ್ಣೆ, ತುಪ್ಪ, ಬೆಣ್ಣೆ ಏನನ್ನೂ ಹಾಕದೇ ಹಾಗೆ ಹುರಿಯಿರಿ. ಈ ಚಪಾತಿ ಗರಿ ಗರಿಯಾಗಿರಲಿ. ಇದೇ ರೀತಿ 5 ಚಪಾತಿಯಾದಲೂ ತಯಾರಿಸಬಹುದು.
ಹೀಗೆ ಗರಿಗರಿಯಾಗಿ ರೆಡಿಯಾದ ಚಪಾತಿಯನ್ನು ತುಂಡು ತುಂಡು ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಿಕೊಳ್ಳಿ. ಸ್ಮೂತ್ ಆಗಿ ಪುಡಿಯಾಗಲಿ. ಈಗ ಈ ಪುಡಿಯನ್ನು ಜರಡಿ ಮಾಡಿಕೊಳ್ಳಿ. ಕ್ಲೀನ್ ಆಗಿರುವ ಹಿಟ್ಟಿನ ಜೊತೆಗೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ ಸೇರಿಸಿ. ಇದಕ್ಕಿಂತ ಮುಂಚೆ ತುಪ್ಪ ಬಿಸಿ ಮಾಡಿ, ಅದರಲ್ಲಿ ಎರಡು ಸ್ಪೂನ್ ಕಡ್ಲೆ ಹಿಟ್ಟು ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಬಾರೀಕ ರವೆ ಹಾಕಿ ಹುರಿದುಕೊಳ್ಳಿ. ಹುರಿದ ಮಿಶ್ರಣವನ್ನು, ಚಪಾತಿ ಪುಡಿಗೆ ಸೇರಿಸಿಕೊಳ್ಳಿ.
ಕರ್ಚಿಕಾಯಿಯನ್ನು ಈ ರೀತಿ ಮಾಡಿದ್ದಲ್ಲಿ ಹೆಚ್ಚು ಟೇಸ್ಟಿಯಾಗಿರತ್ತೆ ನೋಡಿ..
ಈಗ ಅದೇ ಪ್ಯಾನ್‌ಗೆ ಮಮತ್ತೆ ತುಪ್ಪ ಹಾಕಿ ಬೆಲ್ಲ ಹಾಕಿ, ಮಂದ ಉರಿಯಲ್ಲಿ ಬೆಲ್ಲದ ಪಾಕ ತಯಾರಿಸಿ. ಇದನ್ನೂ ಕೂಡ ಹಿಟ್ಟಿಗೆ ಆ್ಯಡ್ ಮಾಡಿ. ಈಗ ಕೊಂಚ ಏಲಕ್ಕಿ ಪುಡಿ ಸೇರಿಸಿದ್ರೆ, ಲಾಡು ಮಾಡಲು ಬೇಕಾಗುವ ಮಿಶ್ರಣ ರೆಡಿ. ಇದರಿಂದ ಲಡ್ಡು ತಯಾರಿಸಿರಿ. ಈಗ ಒಂದು ಪ್ಲೇಟಿನಲ್ಲಿ ಸ್ವಲ್ಪ ಗಸಗಸೆ ತೆಗೆದುಕೊಂಡು, ಲಾಡುವನ್ನು ಇದರಿಂದ ಕೋಟ್ ಮಾಡಿ. ಇದೇ ಚೂರ್ಮಾ ಲಡ್ಡು. ಇದನ್ನು ಗಣಪತಿ ಹಬ್ಬಕ್ಕೆ ನೈವೇದ್ಯಕ್ಕಿಡಲಾಗುತ್ತದೆ.