Friday, September 20, 2024

Latest Posts

ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..

- Advertisement -

ಇಂದಿನ ಕಾಲದವರಲ್ಲಿ ಕೆಲವರು ಮೇಕಪ್‌ನಿಂದ ಚೆಂದ ಕಂಡ್ರೆ, ಇನ್ನು ಕೆಲವರು ಆಹಾರ ಸೇವಿಸುವ ರೀತಿಯಿಂದ ಚೆಂದಕಾಣಿಸುತ್ತಾರೆ. ನಾವು ಉತ್ತಮ ಆಹಾರ ಸೇವಿಸುವುದರೊಂದಿಗೆ, ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..

ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..

ಹೆಸರುಕಾಳನ್ನು ಪುಡಿ ಮಾಡಿ, ಒಂದು ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ಮುಖ ತೊಳೆಯುವಾಗ, ಸೋಪಿನ ಬದಲು ಈ ಪುಡಿಯನ್ನು ಬಳಸಿ. ಇದರಿಂದ ಮುಖ ಸಾಫ್ಟ್ ಆಗಿರುತ್ತದೆ. ಗುಳ್ಳೆ, ಮೊಡವೆ ಕಲೆಗಳಿದ್ದರೆ, ಅದು ಕೂಡ ಮಾಯವಾಗುತ್ತದೆ. ಒಂದು ವಾರಕ್ಕಾಗುವಷ್ಟು ಹೆಸರುಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು.

ರಾತ್ರಿ ಹೆಸರು ಕಾಳು ನೆನೆಹಾಕಿ, ಮರುದಿನ ಅದನ್ನ ಸ್ಮೂತ್ ಆಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಕೊಂಚ ಜೇನುತುಪ್ಪ ಬೆರೆಸಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ವಾರದಲ್ಲಿ ಒಮ್ಮೆ ಈ ಪ್ಯಾಕ್ ಹಾಕಿದ್ರೆ ಸಾಕು. ನೀವು ಜೇನುತುಪ್ಪದ ಬದಲು, ಮೊಸು ಕೂಡ ಬಳಸಬಹುದು.

ಕಾಳುಮೆಣಸನ್ನ ಅಡುಗೆಯಲ್ಲಿ ಸೇರಿಸಬೇಕು ಅಂತಾ ಹೇಳೋದು ಇದಕ್ಕೆ ನೋಡಿ..

ಇನ್ನು ಪ್ರತಿದಿನ ಮೊಳೆಕಟ್ಟಿದ ಹೆಸರುಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ, ನಿಮ್ಮ ದೇಹದ ತೂಕ ಕಡಿಮೆಯಾಗತ್ತೆ. ಇನ್ನು ಮೊಳಕೆ ಬರಿಸದೇ, ಹೆಸರು ಕಾಳು ನೆನೆಸಿ ತಿಂದ್ರೆ, ನಿಮ್ಮ ದೇಹದ ತೂಕ ಹೆಚ್ಚುತ್ತದೆ. ತ್ವಚೆ ಸುಂದರವಾಗತ್ತೆ. ಕೂದಲು ಆರೋಗ್ಯಕರವಾಗಿರತ್ತೆ.

- Advertisement -

Latest Posts

Don't Miss