ಇಂದಿನ ಕಾಲದಲ್ಲಿ ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವವರು ತುಂಬಾ ವಿರಳ. ಪ್ಲಾಸ್ಟಿಕ್ ಬಾಟಲಿ ಅಥವಾ ಗ್ಲಾಸಿನಲ್ಲಿ ಹಾಕಿಟ್ಟ ನೀರನ್ನ ಕುಡಿಯುತ್ತಾರೆ. ಇನ್ನು ತಣ್ಣೀರು ಬೇಕಂದ್ರೆ ಫ್ರಿಜ್ ನೀರೇ ಕುಡಿಯೋದು. ಆದ್ರೆ ಫ್ರಿಜ್ ನೀರು, ಆ ಸಮಯಕ್ಕೆ ನಿಮ್ಮ ದಾಹವನ್ನು ತಣಿಸಿ, ನಿಮ್ಮ ಹಾಯಾಗಿಸಬಹುದು. ಆದರೆ ಅದು ಹಲವು ರೋಗಗಳನ್ನ ಬರಲು ದಾರಿ ಮಾಡಿಕೊಡುತ್ತದೆ. ಹಾಗಾಗಿ ಮಣ್ಣಿನ ಮಡಿಕೆಯಲ್ಲಿಟ್ಟ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಅದರಿಂದ ಯಾವ ಆರೋಗ್ಯಕಾರಿ ಪ್ರಯೋಜನಗಳಿದೆ ಅಂತಾ ತಿಳಿಯೋಣ ಬನ್ನಿ..
ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..
ಮಣ್ಣಿನಲ್ಲಿ ಮನುಷ್ಯನ ಆರೋಗ್ಯ ಕಾಪಾಡುವಂಥ ಆರೋಗ್ಯಕಾರಿ ಅಂಶಗಳಿರುತ್ತದೆ. ಹಾಗಾಗಿ ಸಾತ್ವಿಕ ಆಹಾರವನ್ನು ಮಣ್ಣಿನ ಮಡಿಕೆಯಲ್ಲೇ ತಯಾರಿಸುತ್ತಾರೆ. ನೀರನ್ನು ಮಣ್ಣಿನ ಮಡಿಕೆಯಲ್ಲಿಟ್ಟೇ ಕುಡಿಯುತ್ತಾರೆ. ಯಾಕಂದ್ರೆ ನೀರಿನಲ್ಲಿರುವ ವಿಷಕಾರಿ ಅಂಶವನ್ನು ಮಣ್ಣಿನ ಮಡಿಕೆ ತನ್ನಲ್ಲಿ ಎಳೆದುಕೊಳ್ಳುತ್ತದೆ. ಹಾಗಾಗಿ ಅಂಥ ನೀರು ಕುಡಿದ್ರೆ, ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ.
ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ ಎಂದರೆ ಈ ಸೂಚನೆ ಸಿಗುತ್ತದೆ ನೋಡಿ..
ಇನ್ನು ಮಡಿಕೆಯ ನೀರು ಕುಡಿದರೆ, ಹೊಟ್ಟೆ ನೋವಿನ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಎಂದಿಗೂ ಬರುವುದಿಲ್ಲ. ಇಂಥ ನೀರು ದೇಹಕ್ಕೂ ತಂಪು ನೀಡುತ್ತದೆ. ಆದ್ರೆ ನೀವು ಮಣ್ಣಿನ ಮಡಿಕೆಯಲ್ಲಿ ಯಾವ ರೀತಿ ನೀರು ಇಟ್ಟು ಕುಡಿಯಬೇಕು ಅಂದ್ರೆ. ಮಣ್ಣಿನ ಮಡಿಕೆಯನ್ನು ಒಂದು ದಿನ ಪೂರ್ತಿ ನೀರಿನಲ್ಲಿ ನೆನೆಸಿಡಬೇಕು. ನಂತರ ಅದರಲ್ಲಿ ಕಾದು ತಣಿಸಿದ ನೀರನ್ನು ಹಾಕಿಡಬೇಕು. ರಾತ್ರಿ ನೀವು ನೀರು ಹಾಕಿದ್ರೆ, ಬೆಳಿಗ್ಗೆ ಅಂದ್ರೆ ನಿಮ್ಮ ನೀರು ತಣ್ಣಗಾಗಿರತ್ತೆ.




