Saturday, June 21, 2025

Latest Posts

Ugadi Special: ಈ ಬಾರಿ ಯುಗಾದಿಗೆ ಈ ರೀತಿ ಕ್ಯಾರೆಟ್ ಹೋಳಿಗೆ ತಯಾರಿಸಿ..

- Advertisement -

ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಯುಗಾದಿ ಸ್ಪೆಶಲ್ ಸ್ವೀಟ್ ಹೋಳಿಗೆ ತಯಾರಿಸೋದು ಹೇಗೆ ಅಂತಾ ಹೇಳ್ತೇವೆ. ಪ್ರತೀ ವರ್ಷ ಬೇಳೆ ಹೋಳಿಗೆ ಅಥವಾ ಕಾಯಿ ಹೋಳಿಗೆ ತಿಂದಿರ್ತೀರಿ. ಆದ್ರೆ ಈ ಬಾರಿ ಕ್ಯಾರೆಟ್ ಹೋಳಿಗೆ ತಯಾರಿಸಿ ನೋಡಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ಚಿರೋಟಿ ರವೆ, ಕೊಂಚ ಅರಿಶಿನ, ಎಣ್ಣೆ, ಬೇಕಾದ್‌ರೆ ಉಪ್ಪು ಬಳಸಬಹುದು. ಇವಿಷ್ಟು ಹಿಟ್ಟಿಗೆ ಬೇಕಾದ ಸಾಮಗ್ರಿ. ಈಗ ಹೂರಣಕ್ಕೆ ಒಂದುವರೆ ಕಪ್ ತುರಿದ ಕ್ಯಾರೆಟ್‌, ಮುಕ್ಕಾಲು ಕಪ್ ಸಕ್ಕರೆ, ಕೊಂಚ ಹುರಿದ ರವಾ, ಅವಶ್ಯಕತೆ ಇದ್ದಲ್ಲಿ, ಎರಡು ಸ್ಪೂನ್ ಬಾದಾಮ್, ಪಿಸ್ತಾ, ಪುಡಿ ಬಳಸಬಹುದು. ಇದನ್ನ ಬಳಸಿದ್ರೆ, ರುಚಿ ಹೆಚ್ಚಾಗತ್ತೆ. ಕೊಂಚ ಏಲಕ್ಕಿ ಪುಡಿ, ತುಪ್ಪ.

ಮಾಡುವ ವಿಧಾನ: ಮೊದಲು ಮೈದಾ, ಚಿರೋಟಿ ರವೆ, ಅರಿಶಿನ, ಎಣ್ಣೆ, ಉಪ್ಪು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ. ಇದಕ್ಕೆ ನೀವು ಎಣ್ಣೆ ಬದಲು ತುಪ್ಪ ಕೂಡ ಬಳಸಬಹುದು. ಈ ಹಿಟ್ಟು ಕಲಿಸಿ, ಅರ್ಧ ಗಂಟೆ ಹಾಗೇ ಬಿಡಿ. ಈ ವೇಳೆ ನೀವು ಹೂರಣ ರೆಡಿ ಮಾಡಿಕೊಳ್ಳಿ. ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ರವೆ ಹುರಿದುಕೊಳ್ಳಿ. ನಂತರ ಕ್ಯಾರೆಟ್ ಹುರಿದುಕೊಳ್ಳಿ. ಕ್ಯಾರೆಟ್ ಹಸಿ ವಾಸನೆ ಹೋದ ಬಳಿಕ, ಇದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ, ಚೆನ್ನಾಗಿ ಹುರಿಯಿರಿ. ನಂತರ ಬಾದಾಮ್, ಪಿಸ್ತಾ ಪುಡಿ, ಏಲಕ್ಕಿ ಪುಡಿ, ಹುರಿದುಕೊಂಡ ರವೆ, ಹಾಕಿ ಹೂರಣ ತಯಾರಿಸಿ. ನಂತರ ಇವೆರಡನ್ನೂ ಬಳಸಿ, ಕ್ಯಾರೆಟ್ ಹೋಳಿಗೆ ತಯಾರಿಸಿ, ತುಪ್ಪದೊಂದಿಗೆ ಸವಿಯಿರಿ.

ಶವರ್ ಬಳಸಿ ಸ್ನಾನ ಮಾಡಿದ್ರೆ ಆರೋಗ್ಯಕ್ಕೆ ಆಗತ್ತೆ ಇಂಥ ನಷ್ಟ..

ಬೀಟ್ರೂಟ್ನಿಂದ ಈ ಸ್ವಾದಿಷ್ಟಕರ ತಿಂಡಿ ಮಾಡಬಹುದು ನೋಡಿ..

ಪಲಾವ್, ಜೀರಾರೈಸ್ಗೆ ಸಖತ್ ಮ್ಯಾಚ್ ಆಗತ್ತೆ ಈ ಗ್ರೇವಿ..

- Advertisement -

Latest Posts

Don't Miss