ಊಟವನ್ನ ಹಿಂದೂಗಳು ಅನ್ನಪೂರ್ಣೇಶ್ವರಿಯ ರೂಪ, ಪೂರ್ಣಬ್ರಹ್ಮನೆಂದು ಕರೆಯುತ್ತಾರೆ. ಹಾಗಾಗಿ ಊಟ ಮಾಡುವ ಮುನ್ನ, ಊಟ ಮಾಡುವಾಗ ಮತ್ತು ಊಟವಾದ ಬಳಿಕ ನಾವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಊಟಕ್ಕೂ ಮುನ್ನ ದೇವರಿಗೆ ಪಾರ್ಥಿಸಬೇಕು. ಊಟ ಮಾಡುವಾಗ, ನೆಲದ ಮೇಲೆ ಕುಳಿತು, ಸ್ವಚ್ಛ ಕೈಗಳಿಂದ ಉಣ್ಣಬೇಕು. ಅದೇ ರೀತಿ ಉಂಡ ಬಳಿಕ, ಬಟ್ಟಲಲ್ಲಿ ಕೈ ತೊಳೆಯಬಾರದು. ಹಾಗಾದ್ರೆ ಯಾಕೆ ಉಂಡ ತಟ್ಟೆಯಲ್ಲಿ ಕೈ ತೊಳೆಯಬಾರದು ಅಂತಾ ತಿಳಿಯೋಣ ಬನ್ನಿ..
ಸನಾತನ ಧರ್ಮದಲ್ಲಿ ಊಟ, ತಿಂಡಿ ಮಾಡುವುದಕ್ಕೂ ಪದ್ಧತಿ ಇದೆ. ಏಕೆಂದರೆ, ಆ ಪದ್ಧತಿಯನ್ನು ನಾವು ಅನುಸರಿಸುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಊಟಕ್ಕೂ ಮುನ್ನ ಪ್ರಾರ್ಥಿಸಬೇಕು ಅಂತಾ ಹೇಳುವುದಕ್ಕೂ ಕಾರಣವಿದೆ. ಈ ವೇಳೆ ನಮ್ಮ ಏಕಾಗೃತೆ ಊಟದ ಮೇಲಾಗುತ್ತದೆ. ಆಗ ನಾವು ಸರಿಯಾದ ರೀತಿಯಲ್ಲಿ ಊಟ ಸೇವಿಸಬಹುದು. ಅದಕ್ಕಾಗಿ ಊಟ ಮಾಡುವಾಗ, ಟಿವಿ, ಮೊಬೈಲ್ ನೋಡಬಾರದು ಅಂತಾ ಹೇಳುತ್ತಾರೆ. ಹೀಗೆ ಮಾಡಿದ್ದಲ್ಲಿ, ಊಟದ ಮೇಲಿರಬೇಕಾದ ಏಕಾಗೃತೆ, ಟಿವಿಯ ಮೇಲಾಗುತ್ತದೆ. ಆಗ ನಾವು ಏನು ತಿಂತಿದ್ದೇವೆ. ಎಷ್ಟು ತಿನ್ನುತ್ತಿದ್ದೇವೆ ಅನ್ನೋದರ ಮೇಲೆ ಗಮನವಿರುವುದಿಲ್ಲ. ಆಗಲೇ ಆರೋಗ್ಯ ಹಾಳಾಗುತ್ತದೆ.
ಇನ್ನು ಊಟ ಮಾಡುವಾಗ, ಎಷ್ಟು ಬೇಕೋ, ಅಷ್ಟೇ ಆಹಾರವನ್ನು ನಾವು ಹಾಕಿಸಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಹಾಕಿಸಿಕೊಂಡು, ಅದನ್ನು ಬಿಸಾಡಿದರೆ, ಅನ್ನಪೂರ್ಣಯ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಊಟ ಮಾಡುವಾಗ, ಎಷ್ಟು ಬೇಕೋ, ಅಷ್ಟೇ ಹಾಕಿಸಿಕೊಂಡು ಊಟ ಮಾಡಬೇಕು. ಇನ್ನು ಉಂಡ ತಟ್ಟೆಯಲ್ಲೇ ಕೈ ತೊಳೆಯುವುದು, ದರಿದ್ರವನ್ನು ಆಹ್ವಾನಿಸಿದಂತೆ ಅಂತಾ ಹೇಳಲಾಗುತ್ತದೆ. ಏಕೆಂದರೆ, ಊಟದ ಬಟ್ಟಲು ದೇವರಿಗೆ ಸಮವಾಗಿರುತ್ತದೆ. ಅದರಲ್ಲೇ ನಾವು ಅನ್ನಪೂರ್ಣೆಯ ಸ್ವರೂಪವಾಗ ಅನ್ನವನ್ನು ಹಾಕಿಕೊಂಡು ತಿನ್ನುತ್ತೇವೆ. ಹಾಗಾಗಿ ಅಂಥ ಪವಿತ್ರ ಜಾಗದಲ್ಲೇ ನಾವು ಕೈ ತೊಳೆದು ಅದನ್ನು ಅಪವಿತ್ರ ಮಾಡಬಾರದು. ಹಾಗಾಗಿ ಉಂಡ ತಟ್ಟೆಯಲ್ಲಿ ಎಂದಿಗೂ ಕೈ ತೊಳೆಯಬೇಡಿ. ನೀವೇನಾದರೂ ಈ ರೀತಿ ಉಂಡ ತಟ್ಟೆಯಲ್ಲಿ, ಕೈ ತೊಳೆಯುವ ಅಭ್ಯಾಸ ರೂಢಿಸಿಕೊಂಡರೆ, ನೀವು ಜೀವನದಲ್ಲೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಈ ಅಭ್ಯಾಸ ಬಿಟ್ಟುಬಿಡಿ.
ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..




