Spiritual: ಸಾಮಾನ್ಯವಾಗಿ ಗಣೇಶನ ದೇವಸ್ಥಾನವೆಂದರೆ, ಡೊಳ್ಳು ಹೊಟ್ಟೆಯ, ಆನೆ ಮುಖದ ಗಣಪನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಹಾಗಾದ್ರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ. ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ತಮಿಳುನಾಡಿನ ತೀಲತರ್ಪಣ ಪುರಿಯ ಮುಕ್ತಿಶ್ವರ ದೇವಾಲಯದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಇವನನ್ನು ನರಮುಖ ವಿನಾಯಕ ಎಂದು ಕರೆಯಲಾಗುತ್ತದೆ. ರಾಮಾಯಣದ ಕಥೆಯಲ್ಲಿ ಈ ದೇವಸ್ಥಾನದ ಕಥೆ ಬರುತ್ತದೆ. ದಶರಥ ಸಾವನ್ನಪ್ಪಿದಾಗ, ರಾಮ ಅವನಿಗೆ ಪಿಂಡ ಪ್ರಧಾನ ಮಾಡಲು ಸಾಧ್ಯವಾಗಿರಲಿಲ್ಲ. ಆಗ ಸೀತೆಯೇ ಪಿಂಡ ಪ್ರಧಾನ ಮಾಡುತ್ತಾಳೆ.
ಬಳಿಕ ಬಂದ ರಾಮ, ಇದೇ ಸ್ಥಳದಲ್ಲಿ ಪಿಂಡ ಪ್ರಧಾನ ಮಾಡಲು ಹೋದರೂ, ಆ ಪಿಂಡಗಳು ಹುಳುವಾಗಿ ಮಾರ್ಪಾಡಾಗುತ್ತಿದ್ದವು. ಆಗ ರಾಮ, ಶಿವನನ್ನು ಪೂಜಿಸಿ, ಇದಕ್ಕೊಂದು ಪರಿಹಾರ ಕೇಳುತ್ತಾನೆ. ಆಗ ಶಿವ ನೀನು ಮಂಥರವನಕ್ಕೆ ಹೋಗಿ, ಅಲ್ಲಿ ದಶರಥನ ಪಿಂಡ ಪ್ರಧಾನ ಮಾಡು ಎನ್ನುತ್ತಾನೆ. ಅದೇ ರೀತಿ ರಾಮ ಮಂಥರವನಕ್ಕೆ ಹೋಗಿ, ತಂದೆಯ ಪಿಂಡ ಪ್ರಧಾನ ಮಾಡುತ್ತಾನೆ. ಇಷ್ಟು ದಿನ ಹುಳುವಾಗುತ್ತಿದ್ದ ಪಿಂಡಗಳು, ಈಗ ಲಿಂಗವಾಗಿ ಮಾರ್ಪಾಡಾಗಿದ್ದವು. ಹಾಗಾಗಿ ಇದೇ ಲಿಂಗಗಳನ್ನು ಮುಕ್ತಿಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಹಾಗಾಗಿ ಭಕ್ತರು ತಮ್ಮ ಪೂರ್ವಜರಿಗೆ ಪಿಂಡ ಪ್ರಧಾನ ಮಾಡಲು, ಇಲ್ಲಿ ಭೇಟಿ ನೀಡುತ್ತಾರೆ. ಎಳ್ಳು ಬಳಸಿ ತರ್ಪಣ ನೀಡುವ ಕಾರಣಕ್ಕೆ, ಈ ಸ್ಥಳವನ್ನು ತಿಲ ತರ್ಪಣ ಪುರಿ ಎಂದು ಕರೆಯಲಾಯಿತು. ಇಲ್ಲಿರುವ ಗಣಪತಿ ಆದಿ ಗಣಪತಿಯಾಗಿದ್ದಾನೆ. ಅಂದರೆ, ಶಿವ ಗಣೇಶನ ತಲೆ ಕತ್ತರಿಸುವ ಮುನ್ನ ಇದ್ದ ಗಣಪತಿ. ಈ ಸ್ಥಳ, ಕಾಶಿ, ರಾಮೇಶ್ವರದಂಥ ಪುಣ್ಯಕ್ಷೇತ್ರಗಳಿಗೆ ಸಮಾನವಾಗಿದ್ದು, ಇಲ್ಲಿ ಪೂರ್ವಜನ ಶ್ರಾದ್ಧ ಕಾರ್ಯ ಮಾಡಿದ್ದಲ್ಲಿ, ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ.
ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..




