Food Adda: ಆರೋಗ್ಯಕ್ಕೆ ಸೌತ್ ಇಂಡಿಯನ್ ಫುಡ್ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಅನ್ನ, ಸಾರು, ಸಾಂಬಾರ್, ಪಲ್ಯ, ರಾಗಿ ಮುದ್ದೆ, ರೊಟ್ಟಿ ಹೀಗೆ ಧಾನ್ಯಗಳಿಂದ ಮಾಡಿದ ಊಟ ನಮಗೆ ಶಕ್ತಿ ಕೊಡುತ್ತದೆ. ನಮ್ಮ ಆರೋಗ್ಯ ಕಾಪಾಡುತ್ತದೆ. ಆದರೆ ಪ್ರತಿದಿನ ಆರೋಗ್ಯಕರ ಊಟ ಮಾಡಿ ಮಾಡಿ ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಫುಡ್ ಅಡ್ಡಾದಲ್ಲಿ ರುಚಿಯಾದ ನಾರ್ತ್ ಇಂಡಿಯನ್ ಮತ್ತು ಚೈನೀಸ್ ಫುಡ್ ಸಿಗುವ ಹೊಟೇಲ್ ಒಂದರ ಪರಿಚಯ ಮಾಡಿಕೊಡಲಿದ್ದೇವೆ.
ಬೆಂಗಳೂರಿನಲ್ಲಿರುವ ಫುಡ್ ಕ್ಯಾಂಪ್ ಹೊಟೇಲ್ ಪರಿಚಯವನ್ನು ನಾವಿಂದು ಮಾಡಲಿದ್ದೇವೆ. ರಾಜಾಜಿನಗರದ ಎಸ್‌ಬಿಐ ಎದುರುಗಡೆ ಈ ಫುಡ್ ಕ್ಯಾಂಪ್ ಹೊಟೇಲ್ ಇದೆ. ಇದು ವೆಜ್ ರೆಸ್ಟೋರೆಂಟ್ ಆಗಿದ್ದು, ರುಚಿ ರುಚಿಯಾದ, ಉತ್ತಮ ಕ್ವಾಲಿಟಿಯ ಆಹಾರವನ್ನ ಒದಗಿಸಲಾಗುತ್ತದೆ. ವೆರೈಟಿ ವೆರೈಟಿ ಮಂಚೂರಿಗಳು, ಮಸಾಲಾ ಪಾಪಡ್, ಪಕೋಡಾಗಳು, ಪನೀರ್ ಟಿಕ್ಕಾ ಹೀಗೆ ಹಲವು ಬಗೆಯ ಸ್ಟಾರ್ಟರ್‌ಗಳು ಸಿಗತ್ತೆ. ಜೊತೆಗೆ ನಾನ್, ಕುಲ್ಚಾ, ವೆರೈಟಿ ವೆರೈಟಿ ಕರ್ರಿ, ವೆಜ್ ಬಿರಿಯಾನಿ, ರೈಸ್ ಐಟಮ್ಸ್ ಕೂಡಾ ಸಿಗತ್ತೆ.
ಕಾಜು ಪನೀರ್, ಶಾಹಿ ಪನೀರ್, ಕಾಜು ಮಸಾಲಾ ಸೇರಿ ಹಲವು ಬಗೆಯ ಕರ್ರಿಗಳನ್ನ ಇಲ್ಲಿ ತಯಾರಿಸುತ್ತಾರೆ. ಅಡುಗೆಗೆ ಬಳಸುವ ಪನೀರ್‌ನ್ನು ಇಲ್ಲೇ ತಯಾರಿಸುವುದರಿಂದ, ಸಾಫ್ಟ್ ಆಗಿ ಟೇಸ್ಟಿಯಾಗಿರತ್ತೆ.
ಈ ಹೊಟೇಲ್‌ನಲ್ಲಿ ಕುಳಿತು ತಿನ್ನುವ ವ್ಯವಸ್ಥೆ ಇರುವ ಕಾರಣ ನೀವು ಚೈನೀಸ್ ಮತ್ತು ನಾರ್ತ್ ಇಂಡಿಯನ್ ತಿಂಡಿಯನ್ನು, ಆರಾಮವಾಗಿ ಕುಳಿತು ಸೇವಿಸಬಹುದು. ಅಲ್ಲದೇ, ಈ ಹೊಟೇಲ್‌ನಲ್ಲಿ ಪಾರ್ಟಿ ಮಾಡುವುದಕ್ಕೂ ಪಾರ್ಟಿ ಹಾಲ್ ಇದೆ. ಸಪರೇಟ್ ಡೈನಿಂಗ್ ಹಾಲ್ ಇದೆ. ಮಲ್ಲೇಶ್ವರಂನಲ್ಲೂ ಇವರ ಮೊದಲ ಬ್ರಾಂಚ್ ಇದ್ದು, ಚೈನ್ನೈನಲ್ಲೂ ಫುಡ್ ಕ್ಯಾಂಪ್ ವೆಜ್ ರೆಸ್ಟೋರೆಂಟ್ ಇದೆ.
ನಿಮಗೆ ಈ ರೆಸ್ಟೋರೆಂಟ್‌ಗೆ ಫ್ಯಾಮಿಲಿ ಸಮೇತ ಬರಬೇಕು. ನಿಮ್ಮ ಫ್ಯಾಮಿಲಿಯಲ್ಲಿ 15ಕ್ಕೂ ಹೆಚ್ಚು ಜನರಿದ್ದಾರೆ ಎಂದರೆ, ಅದಕ್ಕೂ ಇಲ್ಲಿ ವ್ಯವಸ್ಥೆ ಇದೆ. ಅಂಥವರು ಮೊದಲೇ ಬುಕ್ ಮಾಡಿ ಬರಬೇಕಾಗುತ್ತದೆ. ಮತ್ತು ಹಾಗೆ ಡೈನಿಂಗ್ ಹಾಲ್ ಬುಕ್ ಮಾಡಿ ಬಂದವರಿಗೆ ಅನಲಿಮಿಟೆಡ್ ಫುಡ್ ಸರ್ವ್ ಮಾಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2




