ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ..?

Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.

ಸಣ್ಣಗೆ ಕತ್ತರಿಸಿದ ಎರಡು ಈರುಳ್ಳಿ, 1 ಟೊಮೆಟೋ, 2 ಹಸಿಮೆಣಸಿನಕಾಯಿ, ಒಂದು ತುರಿದ ಕ್ಯಾರೆಟ್, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಎಣ್ಣೆ, 1ಸ್ಪೂನ್ ತುಪ್ಪ, ಅರ್ಧ ಸ್ಪೂನ್ ಗರಂ ಮಸಾಲೆ, ಧನಿಯಾಪುಡಿ, ಕೆಂಪು ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, 2 ಚಿಕ್ಕ ಬೌಲ್ ಮಂಡಕ್ಕಿ. ಇವಿಷ್ಟು ಭೇಲ್ ಪುರಿ ಮಾಡಲು ಬೇಕಾಗಿರುವ ಸಾಮಗ್ರಿ.

ಒಂದು ಬೌಲ್‌ಗೆ ತುಪ್ಪ, ಎಣ್ಣೆ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್ ತುರಿ, ಹಸಿಮೆಣಸಿನಕಾಯಿಯನ್ನು ಇದಕ್ಕೆ ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ, ಇದಕ್ಕೆ ಮಂಡಕ್ಕಿ ಸೇರಿಸಿದರೆ, ಭೇಲ್ ಪುರಿ ರೆಡಿ.  ಇದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ವೀಡಿಯೋ ಮೂಲಕ ನೋಡಬೇಕು ಎಂದಲ್ಲಿ, ವೀಡಿಯೋ ಇಲ್ಲಿದೆ ನೋಡಿ..

ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

ಬ್ಯೂಟಿ ಪಾರ್ಲರ್ ಗೆ ಹೋಗದೆ ಮನೆಯಲ್ಲೇ ನಮ್ಮ Skin Care ಯಾವರೀತಿ ಮಾಡಿಕೊಳ್ಳೊದು ?

ಲೇಸರ್ ಟ್ರೀಟ್ಮೆಂಟ್ ಒಳ್ಳೆಯದ್ದೋ..? ಕೆಟ್ಟದ್ದೋ..?

About The Author