Health Tips: ಇಂದಿನ ಕಾಲದ ಹೆಚ್ಚಿನ ಹೆಣ್ಣು ಮಕ್ಕಳಿಗೆ ಬಂದಿರುವ ಆರೋಗ್ಯ ಸಮಸ್ಯೆ ಎಂದರೆ, ಪಿಸಿಓಡಿ, ಪಿಸಿಓಎಸ್. ಸರಿಯಾಗಿ ಮುಟ್ಟಾಗದಿರುವುದು, ಗಂಟಲು ಉಬ್ಬಿಕೊಳ್ಳುವುದು, ಮುಖದ ಮೇಲೆ ಕೂದಲು ಬರುವುದು. ಹೀಗೆ ಇತ್ಯಾದಿ ಲಕ್ಷಣಗಳನ್ನು ಹೊಂದಿರುವ ಈ ಆರೋಗ್ಯ ಸಮಸ್ಯೆ, ಮಕ್ಕಳಾಗದಿರಲು ಕೂಡ ಕಾರಣವಾಗಿದೆ. ಇಂದು ನಾವು ಪಿಸಿಓಡಿ ಮತ್ತು ಪಿಸಿಓಎಸ್ ಅಂದ್ರೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಇಂದಿನ ಕಾಲದ ಹೆಣ್ಣು ಮಕ್ಕಳ ಜೀವನ ಶೈಲಿಯಿಂದಲೇ ಈ ಪಿಸಿಓಡಿ, ಪಿಸಿಓಎಸ್ ನಂಥ ಅನಾರೋಗ್ಯ ಸಮಸ್ಯೆಗಳು ಬರುತ್ತಿದೆ. ಎಣ್ಣೆ ಜಿಡ್ಡಿನ ಆಹಾರ, ಜಂಕ್ ಫುಡ್ ಸೇರಿ ಹಲವು ಅನಾರೋಗ್ಯಕರ ಆಹಾರವನ್ನು ಸಿಕ್ಕಾಪಟ್ಟೆ ತಿಂದಾಗ, ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಬೊಜ್ಜು ಬರುತ್ತದೆ. ಆಗಲೇ ಇಂಥ ಆರೋಗ್ಯ ಸಮಸ್ಯೆಗಳು ಬರೋದು.
ಪಿಸಿಓಡಿ, ಪಿಸಿಓಎಸ್ ಬಂದಾಗ, ಮುಖದಲ್ಲಿ ಕೂದಲು ಬೆಳೆಯಲು ಶುರುವಾಗುತ್ತದೆ. ದೇಹದ ಬೊಜ್ಜು ಹೆಚ್ಚಾಗುತ್ತದೆ. ಮುಖದಲ್ಲಿ ಸಿಕ್ಕಾಪಟ್ಟೆ ಪಿಂಪಲ್ಸ್ ಆಗುತ್ತದೆ. ಕೂದಲು ಹೆಚ್ಚು ಉದುರಲು ಶುರುವಾಗುತ್ತದೆ. ಮುಟ್ಟಿನ ಸಮಸ್ಯೆ ಉಂಟಾಗುತ್ತದೆ. ತಿಂಗಳಿಗೊಮ್ಮೆ ಆಗಬೇಕಿರುವ ಮುಟ್ಟ ನಾಲ್ಕೈದು ತಿಂಗಳಿಗೊಮ್ಮೆ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..